ಸ್ಯಾಂಡಲ್‌ವುಡ್ ನಾಯಕಿಯರಾದ ರಮ್ಯಾ, ರಾಗಿಣಿ, ಪ್ರಿಯಾಮಣಿ, ಪೂಜಾಗಾಂಧಿ, ಐಂದ್ರಿತಾ ರೇ, ನಿಧಿ ಸುಬ್ಬಯ್ಯ ಹಾಗೂ ಶರ್ಮಿಳಾ ಮಾಂಡ್ರೆಗೆ ಲೈನ್ ಹೊಡೆಯುವ ಅಪೂರ್ವ ಅವಕಾಶ ಸಿಕ್ಕಿದೆ. ಈ ಸುವರ್ಣಾವಕಾಶವನ್ನು ಕಲ್ಪಿಸಿರುವುದು 92.7 ಬಿಗ್ ಎಫ್‌ಎಂ ರೇಡಿಯೋ.
ಈ ನೂತನ ಕಾರ್ಯಕ್ರಮದ ಮೂಲಕ ಸ್ಯಾಂಡಲ್‌ವುಡ್ ನಾಯಕಿಯರೊಂದಿಗೆ ಕೇಳುಗರು ಚಲ್ಲಾಟವಾಡುವ ಅವಕಾಶ ದೊರಕಲಿದೆ. 'ಲೈನ್ ಹೊಡೀರಿ' ಕಾರ್ಯಕ್ರಮ 'ನೋ ಟೆನ್ಷನ್' ಕಾರ್ಯಕ್ರಮದ ಭಾಗವಾಗಿದೆ. ಫೆ.20ರಿಂದ ಸಂಜೆ 5ರಿಂದ 9ರವರೆಗೆ ಪ್ರಸಾರವಾಗಲಿದೆ.
ಮೊದಲ ವಾರದಲ್ಲೇ ನಿಮ್ಮ ಲೈನ್‌ಗೆ ಸಿಕ್ಕಲಿದ್ದಾರೆ ತಾರೆಯರಾದ ರಮ್ಯಾ ಹಾಗೂ ರಾಗಿಣಿ. ಶ್ರೋತೃಗಳು ಈ ತಾರೆಗಳೊಂದಿಗೆ ತುಂಟತನದಿಂದ ಮಾತನಾಡಬಹುದು. ಈ ಕಾರ್ಯಕ್ರಮ ಆರು ವಾರಗಳ ಕಾಲ ನಡೆಯಲಿದೆ. ಕಾರ್ಯಕ್ರಮದಲ್ಲಿ ತಾರೆಗಳೊಂದಿಗೆ ಹರಟೆ, ತುಂಟ ಮಾತುಗಳನ್ನಾಡಬಹುದು. ಆರ್ ಜೆ ರೋಹಿತ್ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಪುರುಷ ಶ್ರೋತೃಗಳಿಗೆ ಒಂದು ವಿಷಯವನ್ನು ನೀಡಲಾಗುತ್ತದೆ. ಆ ವಿಷಯವನ್ನು ಆಧಾರವಾಗಿಟ್ಟುಕೊಂಡು ನಾಯಕಿಯರೊಂದಿಗೆ ಮಾತನಾಡಬೇಕು. ಅಂತಿಮವಾಗಿ ನಾಯಕಿಯರು ತಮ್ಮೊಂದಿಗೆ ತುಂಟುತನದಿಂದ ಮಾತನಾಡಿದ ಶ್ರೋತೃಗಳಲ್ಲಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಆಯಾ ವಾರದ ಅಂತ್ಯದಲ್ಲೇ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.
92.7 ಎಫ್‌ಎಂನ ಮಹಿಳಾ ಶ್ರೋತೃಗಳು ಸುಮ್ಮನೆ ಕೂರಬೇಕಾಗಿಲ್ಲ. ಮಹಿಳಾ ಶ್ರೋತೃಗಳು ನಾಯಕಿ ನಟಿಯರ ಉತ್ತಮ ಸ್ನೇಹಿತರಂತೆ ನಟಿಸಬಹುದು. ವಿಜೇತರ ಆಯ್ಕೆಯಲ್ಲಿ ನಾಯಕಿಗೆ ಸಹಕರಿಸಬಹುದು. ಆ ದಿನದ ಉತ್ತಮ ಆಯ್ಕೆಯಲ್ಲಿ ಸಹಕರಿಸಿದ ಒಬ್ಬ ಮಹಿಳಾ ಶ್ರೋತೃಗೆ ಕಾರ್ಯಕ್ರಮದಲ್ಲಿ ನಾಯಕಿಯನ್ನು ಭೇಟಿ ಮಾಡುವ ಹಾಗೂ ಮಾತನಾಡುವ ಅವಕಾಶ ಲಭಿಸಲಿದೆ. (ಒನ್‌ಇಂಡಿಯಾ ಕನ್ನಡ)