ಪುಟಗಳು

ಸೆಲ್ ಫೋನ್ ವಿಕಿರಣ ಕ್ಯಾನ್ಸರ್ ಗೆ ಆಹ್ವಾನ

ಬೆಂಗಳೂರು, ಜೂ 1: ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳು ಬರುತ್ತದೆ ಎಂಬ ಕಾಳಜಿಯುಕ್ತ ಸುದ್ದಿಗೆ ಪುಷ್ಟಿ ಸಿಕ್ಕಿದೆ. ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ(WHO)ನ ತಜ್ಞ ವೈದ್ಯಾಧಿಕಾರಿಗಳು ನಡೆಸಿದ ಸಂಶೋಧನೆಯಿಂದ ಇದು ಸಾಬೀತಾಗಿದ್ದು, ಸೆಲ್ ಫೋನ್ ಬಳಕೆಯಿಂದ ಕ್ಯಾನ್ಸರ್ ಹರಡುವ ಲಕ್ಷಣಗಳು ಕಂಡು ಬಂದಿದೆ. ಸೆಲ್ ಫೋನ್ ನಿಂದ ಬ್ರೈನ್ ಟ್ಯೂಮರ್ ಬರುತ್ತದೆ ಎಂಬ ಮಾತಿಗೆ WHO ಆಧಾರ ಒದಗಿಸಿದ್ದಂತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ International Agency for Research on Cancer(IARC) ವಿಭಾಗದ ಸುಮಾರು 14 ದೇಶಗಳ 31 ತಜ್ಞ ವಿಜ್ಞಾನಿಗಳು ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ. ರೇಡಿಯೋ ವಿಕಿರಣ ಹಾಗೂ ಎಲೆಕ್ಟ್ರೋ ಮ್ಯಾಗ್ನಟಿಕ್ ಕ್ಷೇತ್ರದಿಂದ ಉಂಟಾಗುವ ಹಾನಿ ಬಗ್ಗೆ ಫ್ರಾನ್ಸ್ ನಲ್ಲಿ ಒಂದು ವಾರಗಳ ನಡೆಸಿದ ಸಮೀಕ್ಷೆ ನಂತರ ಈ ವಿಷಯ ಹೊರ ಹಾಕಿದ್ದು, ಅತ್ಯಧಿಕವಾಗಿ ಮೊಬೈಲ್ ಫೋನ್ ಬಳಕೆ ಮಾಡುವವರಿಗೆ ಚುರುಕು ಮುಟ್ಟಿಸಿದೆ.

ಕ್ಯಾನ್ಸರ್ ಹರಡುವ carcinogenic ಪದಾರ್ಥಗಳು ಸೆಲ್ ಫೋನ್ ವಿಕರಣಗಳಲ್ಲಿ ಕಂಡು ಬಂದಿದೆ. ದಿನ ನಿತ್ಯ ಕನಿಷ್ಠ 30 ನಿಮಿಷಗಳ ನಿರಂತರವಾಗಿ ಸೆಲ್ ಫೋನ್ ಬಳಸುವವರು ಈ ಎಚ್ಚರಿಕೆ ಗಂಟೆಗೆ ಕಿವಿ ಕೊಡಲೇ ಬೇಕು ಇಲ್ಲದಿದ್ದರೆ ಅಪಾಯ ಖಂಡಿತ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮೊಬೈಲ್ ಕಂಪೆನಿಗಳು ಮೊಬೈಲ್ ಫೋನ್ ಬಳಕೆ ವಿಧಾನದ ಬಗ್ಗೆ ಕೂಡಾ ವಿವರಗಳನ್ನು ನೀಡಿರುತ್ತದೆ. ಕಿವಿಯ ಬಳಿ ಫೋನ್ ಇಟ್ಟುಕೊಂಡು ಮಾತನಾಡುವುದರಿಂದ ಹಿಡಿದು, ಬ್ಯಾಟರಿ ಚಾರ್ಜಿಂಗ್, ರೇಡಿಯೋ ವಿಕಿರಣ ಸೋರಿಕೆ ಬಗ್ಗೆ ಕೂಡ ವಿವರಣೆ ಇರುತ್ತದೆ. ಸೆಲ್ ಫೋನ್ ಬಳಕೆದಾರರು ತಪ್ಪದೇ ಮೊಬೈಲ್ ಬಳಕೆ ಬಗ್ಗೆ ಓದಿಕೊಳ್ಳುವುದು ಒಳಿತು.