ಪುಟಗಳು

ಎಲ್ ಪಿಜಿ ದಾಖಲೆ ಸಲ್ಲಿಸಲು ದಿನಾಂಕ ವಿಸ್ತರಣೆ

 
ಬೆಂಗಳೂರು, ಆ. 5 : ಪಡಿತರ ಚೀಟಿ ಮತ್ತು ಎಲ್.ಪಿ.ಜಿ. ಸೌಲಭ್ಯ ಹೊಂದಿದವರು ಅವರು ವಾಸಿಸುವ ಮನೆಯ ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ, ಗೃಹ ಬಳಕೆಯ ಅನಿಲ ಗ್ರಾಹಕ ಸಂಖ್ಯೆ ಮತ್ತು ಪಡಿತರ ಚೀಟಿ ಸಂಖ್ಯೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಆಗಸ್ಟ್ 15ರವರೆಗೆ ವಿಸ್ತರಿಸಲಾಗಿದೆ.

ಆಹಾರ ಕರ್ನಾಟಕ ವೆಬ್ ಸೈಟಿನ ಡಾಟಾ ಎಂಟ್ರಿಯಲ್ಲಿ ತಪ್ಪಾಗಿರಬಹುದಾದ ಕಾರಣಕ್ಕಾಗಿ ಸೌಲಭ್ಯಗಳನ್ನು ಅಮಾನತ್ತುಪಡಿಸಲ್ಪಟ್ಟಿದಲ್ಲಿ, ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಆ. 15ರೊಳಗೆ ನೇ ಆಗಸ್ಟ್ 2011ರವರೆಗೆ ಸಲ್ಲಿಸಬೇಕೆಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.

ದಾಖಲೆ ಸಲ್ಲಿಸಿದ್ದರೂ ವೆಬ್ ಸೈಟಿನಲ್ಲಿ ಅನೇಕರ ಎಲ್ ಪಿಜಿ ವಸ್ತುಸ್ಥಿತಿ ಸಸ್ಪೆಂಡ್ ಆಗಿದೆ ಎಂದು ತೋರಿಸುತ್ತಿದ್ದಕ್ಕಾಗಿ ಲಕ್ಷಾಂತರ ಗ್ರಾಹಕರು ತೊಂದರೆಗೀಡಾಗಿದ್ದಾರೆ. ಹಾಗಿದ್ದರೂ ಸಿಲಿಂಡರ್ ಪೂರೈಕೆಯನ್ನು ಏಜೆನ್ಸಿಗಳು ನಿಲ್ಲಿಸಿಲ್ಲ. ಆದರೆ, ವೆಬ್ ಸೈಟ್ ಮುಖಾಂತರ ಅಥವಾ ಖುದ್ದಾಗಿ ಏಜೆನ್ಸಿಗೆ ಸಸ್ಪೆಂಡ್ ಆದ ಕಾರಣಕ್ಕೆ ತಕ್ಕಂಥ ದಾಖಲೆ ಒದಗಿಸಬೇಕು.

ವೆಬ್ ಸೈಟಿನಲ್ಲಿ ಸಂಪರ್ಕ ಸ್ಥಿತಿ ತಿಳಿಸಿದ ಪುಟವನ್ನು ಪ್ರಿಂಟೌಟ್ ತೆಗೆದುಕೊಂಡು ಏಜೆನ್ಸಿಗೆ ಹೋದರೆ ಅವರು ಯಾವ ದಾಖಲೆಯನ್ನು ಸಲ್ಲಿಸಬೇಕು ಅಥವಾ ಸಲ್ಲಿಸಬೇಕೋ ಸಲ್ಲಿಸಬಾರದೋ ಎಂಬುದನ್ನು ತಿಳಿಸುತ್ತಾರೆ. ಹಾಗಾಗಿ, ವಿಚಾರಿಸಲು ಹೋದರೆ ಪ್ರಿಂಟೌಟ್ ತೆಗೆದುಕೊಂಡು ಹೋಗುವುದು ಉತ್ತಮ.

ಶ್ರೀಮಂತರಿಗೆ ಸಬ್ಸಿಡೈಸ್ಡ್ ಗ್ಯಾ ಇಲ್ಲ : ವಾರ್ಷಿಕ 6 ಲಕ್ಷಕ್ಕಿಂತ ಹೆಚ್ಚು ವರಮಾನ ಇರುವವರಿಗೆ ಮತ್ತು ಸ್ಥಿತಿವಂತರಿಗೆ ರಿಯಾಯಿತಿ ದರದಲ್ಲಿ ಗೃಹ ಬಳಕೆಯ ಅನಿಲ ನೀಡಬಾರದೆಂದು ಸಂಸದೀಯ ಮಂಡಳಿ ಶಿಫಾರಸು ಮಾಡಿದೆ. ಇದು ಜಾರಿಗೆ ಬಂದರೆ, ವರಮಾನ 6 ಲಕ್ಷಕ್ಕಿಂತ ಜಾಸ್ತಿ ಇರುವವರು ಪ್ರತಿ ಸಿಲಿಂಡರಿಗೆ ರು. 642 ನೀಡಬೇಕಾಗುತ್ತದೆ.