ವಾಹನ ಹೊಂದಿರುವರು ಪಂಕ್ಚರ್ ಅಂದ್ರೆ ಬೆಚ್ಚಿ ಬೀಳುತ್ತಾರೆ. ಅರ್ಜೆಂಟಾಗಿ ಎಲ್ಲೋ ಹೋಗುತ್ತಿದ್ದಾಗ, ರಾತ್ರಿ ಪ್ರಯಾಣ ಮಾಡುತ್ತಿರುವಾಗ, ದೂರ ಪ್ರವಾಸ ಹೊರಟಾಗ ಬೈಕ್ ಅಥವಾ ಕಾರು ಪಂಕ್ಚರ್ ಆದರೆ ಕಷ್ಟ.
ವಾಹನಗಳ ಟೈರ್ ಯಾವಾಗ ಠುಸ್ಸ್ ಅನ್ನುತ್ತೆ ಎಂದು ಹೇಳೋದು ಕಷ್ಟ. ರಸ್ತೆಯಲ್ಲಿರುವ ಕಲ್ಲುಮುಳ್ಳು ಚುಚ್ಚಿದರೂ ಟೈರ್ ಪಂಕ್ಚರ್ ಆಗುತ್ತದೆ. ಆಮೇಲೆ ಪಂಕ್ಚರ್ ಹಾಕೋ ಗ್ಯಾರೇಜ್ ಹುಡುಕುವುದು ಕಷ್ಟ. ಆದರೆ ಪಂಕ್ಚರ್ ಆದ ತಕ್ಷಣ ತನ್ನಷ್ಟಕ್ಕೆ ಟೈರ್ ಸರಿಯಾದರೆ ಚೆನ್ನಾಗಿತ್ತು ಅಲ್ಲವೇ.
ಇದೀಗ ಮಾರುಕಟ್ಟೆಗೆ ಪಂಕ್ಚರ್ ಕಿಲ್ಲರ್ ಅನ್ನೋ ಉತ್ಪನ್ನ ಬಂದಿದೆ. ಟೈರ್ ಪಂಕ್ಚರ್ ಆದ ಜಾಗವನ್ನು ಇದು ಸ್ವಯಂಚಾಲಿತವಾಗಿ ತಕ್ಷಣ ಬ್ಲಾಕ್ ಮಾಡುತ್ತದೆ. ಯಾವುದೇ ಟೆನ್ಶನ್ ಇಲ್ಲದೇ ಸವಾರಿ ಮಾಡಬಹುದು. ಮತ್ತೆ ಪಂಕ್ಚರ್ ಹಾಕಲು ಗ್ಯಾರೇಜ್ ಹುಡುಕುವ ಅವಶ್ಯಕತೆಯಿಲ್ಲ.
ಪಂಕ್ಚರ್ ಕಿಲ್ಲರ್ ಉತ್ಪನ್ನ ಒಂದು ರೀತಿಯ ಜೆಲ್. ಇದನ್ನು ಟೈರಿನೊಳಗೆ ಇಂಜೆಕ್ಟ್ ಮಾಡಲಾಗುತ್ತದೆ. ಯಾವುದಾದರೂ ಚೂಪಾದ ವಸ್ತು ಟೈರಿಗೆ ಚುಚ್ಚಿ ಪಂಕ್ಚರ್ ಆಗೋ ಸಾಧ್ಯತೆ ಇರುವಾಗ ಈ ಜೆಲ್ ಆ ತೂತನ್ನು ಬ್ಲಾಕ್ ಮಾಡುತ್ತದೆ.
ಪಂಕ್ಚರ್ ಕಿಲ್ಲರ್ ಕೇವಲ ಪಂಕ್ಚರ್ ಹಾಕಲು ಮಾತ್ರ ಉಪಯೋಗವಲ್ಲ. ಇದು ಟೈರಿನಲ್ಲಿರುವ ಅಪಾಯಕಾರಿ ತೂತುಗಳನ್ನೆಲ್ಲ ಬ್ಲಾಕ್ ಮಾಡುತ್ತದೆ. ಟೈರಿನೊಳಗಿನ ಗಾಳಿಯ ಒತ್ತಡ ಈ ಜೆಲ್ಲಿನ ಮೇಲೆ ಒತ್ತಡ ಹಾಕುತ್ತದೆ.
ಟೈರ್ ನಲ್ಲಿ ಯಾವುದೇ ರಂದ್ರವಾದರೂ ತಕ್ಷಣ ಆ ಕ್ಷೇತ್ರಕ್ಕೆ ಪ್ರವೇಶಿಸಿ ಬ್ಲಾಕ್ ಮಾಡಿಬಿಡುತ್ತದೆ. ಪಂಕ್ಚರ್ ಕಿಲ್ಲರ್ ಹಾಕಿರೋ ಟೈರ್ ಇದ್ರೆ ಯಾವುದೇ ಭಯ ಇಲ್ಲದೇ ಪ್ರಯಾಣ ಮಾಡಬಹುದು.
ಪಂಕ್ಚರ್ ಕಿಲ್ಲರ್ ವಿಶೇಷತೆ
* ಪಂಕ್ಚರ್ ಮತ್ತು ಲೀಕ್ ನಿಂದ ಟೈರನ್ನು ರಕ್ಷಿಸುತ್ತದೆ.
* ಟೈರ್ ಬಾಳಿಕೆ ಹೆಚ್ಚಿಸುತ್ತದೆ
* ವಾಹನದ ಇಂಧನ ದಕ್ಷತೆ ಹೆಚ್ಚಿಸುತ್ತದೆ.
* ಸಾಮಾನ್ಯ ಟೈರ್ ಕೂಡ ಪಂಕ್ಚರ್ ಪ್ರೂಫ್ ಟೈರಾಗುತ್ತದೆ.
* ಟೈರಿನೊಳಗಿನ ಅಗತ್ಯ ಗಾಳಿಯ ಒತ್ತಡವನ್ನು ರಕ್ಷಿಸುತ್ತದೆ.
* ಇದು ಪರಿಸರ ಸ್ನೇಹಿ, ಪರಿಸರಕ್ಕೆ ಹಾನಿಯಿಲ್ಲ.
* ಇದನ್ನು ಟ್ಯೂಬ್ ಮತ್ತು ಟ್ಯೂಬ್ ಲೆಸ್ ಟೈರ್ ಎರಡಕ್ಕೂ ಬಳಸಬಹುದು.
* ಆರಾಮವಾದ ರೈಡಿಗೆ ಸಹಕರಿಸುತ್ತದೆ.
ಈ ವಿಶೇಷ ಉತ್ಪನ್ನದ ಕುರಿತು ಕಂಪನಿಯನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿ ದೊರಕಿದೆ. ಅಂದ್ರೆ ಕಾರ್ ಟೈರಿಗೆ ಒಂದು ಲೀಟರ್ ಪಂಕ್ಚರ್ ಕಿಲ್ಲರ್ ಜೆಲ್ ಮತ್ತು ದ್ವಿಚಕ್ರ ವಾಹನಗಳಿಗೆ 600 ಎಂಎಲ್ ಜೆಲ್ ಇಂಜೆಕ್ಟ್ ಮಾಡಬೇಕಂತೆ. ಬೆಂಗಳೂರಿನಲ್ಲೂ ಪಂಕ್ಚರ್ ಕಿಲ್ಲರ್ ಪ್ರತಿನಿಧಿಗಳಿದ್ದಾರೆ.
ಈ ಪಂಕ್ಚರ್ ಕಿಲ್ಲರ್ ದರ ಪ್ರತಿಲೀಟರ್ ಗೆ ಸುಮಾರು 1,399 ರುಪಾಯಿ ಇದೆ. ಸದ್ಯ ಇದು ಪ್ರಮುಖ ನಗರಗಳಲ್ಲಿ ದೊರಕುತ್ತಿದೆ. ಕಂಪನಿಯನ್ನು ಸಂಪರ್ಕಿಸಿದರೆ ಅವರೇ ಬಂದು ಟೈರಿಗೆ ಜೆಲ್ ಇಂಜೆಕ್ಟ್ ಮಾಡುತ್ತಾರೆ. ಹೆಚ್ಚಿನ ಮಾಹಿತಿಗೆ
ಇಲ್ಲಿ ಕ್ಲಿಕ್ ಮಾಡಿ.