ಪುಟಗಳು

ಶಿವರಾಮ ಕಾರಂತರ ಕೋಟ ಮನೆ ಮೇಲೆ ಬುಲ್ಡೋಜರ್

 
K Shivaram Karanth
 
ಉಡುಪಿ ಜೂ 24: ’ಕಡಲ ತೀರದ ಭಾರ್ಗವ’ ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಸದ್ಯದಲ್ಲೆ ಕಾರಂತರ ಮನೆ ನೆಲಸಮವಾಗಲಿದೆ.

ಕಾರಂತರ ಮನೆ ಸ್ಮಾರಕಕವಾಗಿ ಉಳಿಸಬೇಕೆಂದು ಸಾಹಿತಿಗಳು ಆಗ್ರಹಿಸಿದ್ದು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಶಿವರಾಮ ಕಾರಂತರ ಮನೆ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ.

ಈ ಗ್ರಾಮ ಪಂಚಾಯಿತಿ ಪ್ರತಿವರ್ಷ ಕಾರಂತರ ಸ್ಮರಣಾರ್ಥ ಕಾರಂತರ ಹುಟ್ಟೂರು ಪ್ರಶಸ್ತಿಯನ್ನು ಸಾಹಿತಿಗಳಿಗೆ, ಸಾಧಕರಿಗೆ ನೀಡುತ್ತಿದೆ. ಈಗ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಕಾರಂತರ ಮನೆ ಧರೆಗುರುಳಲಿದ್ದು, ಕಾಮಗಾರಿಯ ನೀಲನಕ್ಷೆ ಬದಲಾಯಿಸಿ ಕಾರಂತರ ಮನೆ ಹುಟ್ಟೂರು ಪ್ರಶಸ್ತಿ ವಿಜೇತರಲ್ಲಿ ಒಬ್ಬರಾದ ಪ್ರೊ ಕೆ ಆರ್ ಹಂದೆಯ ಅಭಿಪ್ರಾಯಪಟ್ಟಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಏಳು ಮಂದಿ ಕನ್ನಡ ಸಾಹಿತಿಗಳಲ್ಲಿ ಶಿವರಾಮ ಇವರ ಮನೆ ‘ಸುಹಾಸ್’ ಈಗ ಕಾಲಗರ್ಭಕ್ಕೆ ಸೇರಲಿದೆ. ಕಾರಂತರ ಪುತ್ತೂರಿನ ಮನೆಯಾದ ‘ಹರ್ಷ’ ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ. ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯ