ಪುಟಗಳು

ನಾನೇ ಬೇರೆ ನನ್ನ ಸ್ಟೈಲೇ ಬೇರೆ : ಶಿವರಾಜ ಪಾಟೀಲ - ಸಾಗರ ದೇಸಾಯಿ. ಯಾದಗಿರಿ


ಯಾದಗಿರಿ, ಸೆ. 15 : "ಮೊದಲನೇ ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರು ಲೋಕಾಯುಕ್ತ ಸಂಸ್ಥೆ ಇದೆ ಎನ್ನುವುದನ್ನು ತೋರಿಸಿಕೊಟ್ಟರು. ಎರಡನೇ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಸಂಸ್ಥೆ ಹೇಗೆ ಕೆಲಸ ಮಾಡಬೇಕು ಎಂಬುದನ್ನು ತೋಸಿರಿದರು. ಮೂರನೇಯವನಾಗಿ ನಾನು ಹೇಗೆ ಕೆಲಸ ಮಾಡುತ್ತೇನೆ, ನನ್ನ ಸ್ಟೈಲ್ ಹೇಗಿದೆ ಎಂಬುದನ್ನು ಕಾದು ನೋಡಿ."

ಹೀಗೆಂದು ಲೋಕಾಯುಕ್ತ ಸಂಸ್ಥೆ ಮತ್ತು ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ವಿಚಿತ್ರ ಕುತೂಲಹ ಕೆರಳಿಸಿದವರು ಮೂರನೇ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ವಿ ಪಾಟೀಲ.

ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಯಾದಗಿರಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು ಮತ್ತು ಸಾರ್ವಜನಿಕರೊಡನೆ ಮುಕ್ತವಾಗಿ ಸಂವಾದ ನಡೆಸಿದರು.

ಲೋಕಾಯುಕ್ತರಿಗೆ ಸರ್ವಾಧಿಕಾರ ಬೇಡ, ಆದರೆ ಸರಿಯಾದ ಅಧಿಕಾರ ಇರಬೇಕು ಮತ್ತು ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಆಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ನಾನು ಲೋಕಾಯುಕ್ತನಾಗಿ ಕಾರ್ಯನಿರ್ವಹಿಸುವ ರೀತಿ ಭಿನ್ನವಾಗಿರುತ್ತದೆ. ನನ್ನ ಸ್ಟೈಲ್ ನೋಡಿ ನೀವೇ ನಿರ್ಧಾರ ಮಾಡಿ ಎಂದು ಅವರು ಜನರಿಗೇ ಸವಾಲ್ ಹಾಕಿದರು.