ಪುಟಗಳು

ದೇವರಾಯನದುರ್ಗದಲ್ಲಿ ಉರುಳಿಗೆ ಬಲಿಯಾದ ಚಿರತೆ

Leopard killed in Devarayanadurga
 
ತುಮಕೂರು, ನ. 28 : ತುಮಕೂರು ನಗರಕ್ಕೆ ಕೇವಲ 16 ಕಿ.ಮೀ. ದೂರವಿರುವ ಸುಪ್ರಸಿದ್ಧ ಪ್ರವಾಸಿ ತಾಣ ದೇವರಾಯನದುರ್ಗದಲ್ಲಿ ನವೆಂಬರ್ 27ರಂದು ಬೆಳಿಗ್ಗೆ ಉರುಳಿಗೆ ಬಲಿಯಾದ ಚಿರತೆಯ ಮೃತದೇಹ ಪತ್ತೆಯಾಗಿದ್ದು, ನಿಸರ್ಗಪ್ರಿಯರನ್ನು ಬೆಚ್ಚಿಬೀಳಿಸಿದೆ.

ದೇವರಾಯನದುರ್ಗದ ಕಾಳಿಕಾಂಬ ದೇವಾಲಯದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಸುಮಾರು 8ರಿಂದ 10 ವರ್ಷದ ಹೆಣ್ಣು ಚಿರತೆಯ ಕೊಳೆಯುತ್ತಿರುವ ಶವ ಪತ್ತೆಯಾಗಿದೆ. ಕಾಡುಪ್ರಾಣಿಗಳ ಬೇಟೆಗಾಗಿ ಕೇಬಲ್ ವೈರ್ ಬಳಸಿಕೊಂಡು ಇಡಲಾಗಿದ್ದ ಉರುಳಿಗೆ ಈ ಚಿರತೆ ಸಿಕ್ಕಿಬಿದ್ದಿದೆ. ಅಲ್ಲಿಂದ ಬಚಾವಾಗಲು ಭಾರೀ ಪ್ರಯತ್ನ ನಡೆಸಿ ವಿಫಲಗೊಂಡ ಚಿರತೆ ಅಲ್ಲೇ ನರಳಾಡಿ ಸತ್ತಿದೆ.

ಈ ಘಟನೆ ನಡೆದು ಸುಮಾರು ಐದಾರು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ತುಮಕೂರಿನ ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆಯ ಬಿ.ವಿ.ಗುಂಡಪ್ಪ, ಗುರುಪ್ರಸಾದ್, ಮಲ್ಲಿಕಾರ್ಜುನ್ ಮೊದಲಾದವರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಆಗಮಿಸಿ ಮುಂದಿನ ಕ್ರಮ ಕೈಗೊಂಡರು.