ಪುಟಗಳು

ಕನ್ನಡ ಶಾಲೆ ಮುಚ್ಚುವ ನಿರ್ಧಾರ, ಸರಕಾರಕ್ಕೆ ಮುಖಭಂಗ


Kannada Medium Schools
 
ಬೆಂಗಳೂರು, ಡಿ 16: ಕಡಿಮೆ ಮಕ್ಕಳ ಹಾಜರಾತಿವಿರುವ ಕನ್ನಡ ಮೀಡಿಯಂ ಶಾಲೆಗಳನ್ನು ಮುಚ್ಚುವ ಅಥವಾ ಬೇರೆ ಶಾಲೆಗಳ ಜೊತೆ ವಿಲೀನಗೊಳಿಸುವ ಸರಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಶುಕ್ರವಾರ (ಡಿ 16) ವಿಚಾರಣೆ ನಡೆಸಿದ ನ್ಯಾಯಾಲಯ ಕಡಿಮೆ ಮಕ್ಕಳ ಹಾಜರಾತಿವಿರುವ ಕನ್ನಡ ಮೀಡಿಯಂ ಶಾಲೆಗಳನ್ನು ಮುಚ್ಚುವ ನಿರ್ಧಾರದಿಂದ ಹಿಂದೆ ಸರಿಯಬೇಕು ಅಲ್ಲದೆ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಸರಕಾರಕ್ಕೆ ಆದೇಶ ನೀಡಿದೆ.

ಜ್ಞಾನಪೀಠ ಪ್ರಶಸ್ತಿ ಪಡೆದ ಹಿರಿಯ ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಚಂದ್ರಶೇಖರ್ ಕಂಬಾರ ಅಲ್ಲದೆ ಚನ್ನವೀರ ಕಣವಿ ಮುಂತಾದವರು, ಸರಕಾರದ ಶಾಲೆ ಮುಚ್ಚುವ ನಿರ್ಧಾರವನ್ನು ಪ್ರಶ್ತ್ನಿಸಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಿದ್ದರು.