ಈಗಿನ ಟಿವಿ ಚಾನಲ್‌ಗಳಲ್ಲಿ ಊಟಕ್ಕಿಂತ ಉಪ್ಪಿನಕಾಯಿಯೇ ಜಾಸ್ತಿ ಎಂಬಂತೆ ಕಾರ್ಯಕ್ರಮಗಳಿಗಿಂತ ಜಾಹೀರಾತುಗಳ ಅಬ್ಬರವೇ ಜೋರಾಗಿದೆ. ಈ ಕಿರಿಕಿರಿಯಿಂದ ಬೇಸತ್ತಿರುವ ವೀಕ್ಷಕರ ಮನೆ ಪಡಸಾಲೆಗೆ ಮತ್ತೊಂದು ಹೊಸ ಕನ್ನಡ ಟಿವಿ ಬಂದಿದೆ. ಅದೂ ಜಾಹೀರಾತು ರಹಿತ ಆಕ್ಷನ್ ಮೂಮಿ ಚಾನಲ್.
ದಕ್ಷಿಣ ಭಾರತದಲ್ಲಿ ಮುಂಚೂಣಿಯಲ್ಲಿರುವ ಸನ್ ಟಿವಿ ನಾಲ್ಕು ಹೊಸ ಆಕ್ಷನ್ ಮೂವಿ ಚಾನಲ್‌ಗಳನ್ನು ಪ್ರಾರಂಭಿಸಿದೆ. ನಿಮ್ಮ ಮೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸುವ ಜೊತೆಗೆ ಜಾಹೀರಾತುಗಳಿಂದ ಮುಕ್ತವಾಗಿರುತ್ತದೆ ಈ ವಾಹಿನಿ.
ಕನ್ನಡ ಸೇರಿದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಜಾಹೀರಾತು ಮುಕ್ತ ವಾಹಿನಿಗಳನ್ನು ಪ್ರಾರಂಭಿಸಲಾಗಿದೆ ಎಂದು ಸನ್ ಟಿವಿ ನೆಟ್‌ವರ್ಕ್ ತಿಳಿಸಿದೆ. ಚಲನಚಿತ್ರಗಳಿಗೆಂದೇ ಮೀಸಲಾದ ಈ ವಿಶೇಷ ವಾಹಿನಿ 24 ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ. ಇದೊಂದು ಪ್ರೀಮಿಯರ್ ಪೇ ಚಾನಲ್ ಆಗಿದೆ.
ಹೊಸ ನಾಲ್ಕು ಚಾನಲ್‌ಗಳನ್ನು ಆರಂಭಿಸುವುದರೊಂದಿಗೆ ಸನ್ ಟಿವಿ ನೆಟ್‌ವರ್ಕ್ ಬಳಗಕ್ಕೆ ಒಟ್ಟು 29 ಚಾನಲ್‌ಗಳು ಸೇರ್ಪಡೆಯಾದಂತಾಗಿದೆ. ಕನ್ನಡದಲ್ಲಿ ಏಳು, ತಮಿಳಿನಲ್ಲಿ ಹತ್ತು, ತೆಲುಗಿನಲ್ಲಿ ಎಂಟು ಹಾಗೂ ಮಲಯಾಳಂನಲ್ಲಿ ನಾಲ್ಕು ಟಿವಿ ವಾಹಿನಿಗಳನ್ನು ಸನ್ ನೆಟ್‌ವರ್ಕ್ ಹೊಂದಿದೆ. (ಏಜೆನ್ಸೀಸ್)