ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?!
ಇವಳು `ತುಂಗಾ’ ಅಲ್ಲ ಗಾಯತ್ರಿ. . .ಜಪಾನಿನ ಟೆಲಿವಿಷನ್ ಕ್ಷೇತ್ರದ ದೊಡ್ಡ ಹೆಸರು ತೆತ್ಸುಕೋ ಕುರೋಯಾನಾಗಿ. `ಸರಿಯಾದ’ ಶಾಲೆ ಪಡೆಯಲು ಆಕೆ (ಆಕೆಯ ತಾಯಿ) ಪಟ್ಟ ಬವಣೆಯೇ `ತೊತ್ತೋಚಾನ್’ ಕಾದಂಬರಿಯಾಗಿ ಮೂಡಿ ಬಂದಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಕೃತಿ ಇದು. ಈ ಕೃತಿಯನ್ನು ಕನ್ನಡಕ್ಕೆ ತಂದದ್ದು ವಿ. ಗಾಯತ್ರಿ. ಈಗ ಅದೇ `ತೊತ್ತೋಚಾನ್’ ನಿಂದ ಪ್ರೇರಣೆ ಪಡೆದ, ಅದೇ ಎಳೆ ಹೊಂದಿರುವ
`ತುಂಗಾ’ವನ್ನು ನಮ್ಮೆದುರು ಇಡುತ್ತಿದ್ದಾರೆ. ಒಂದು ಘಟ್ಟದವರೆಗೆ ಆತ್ಮ ಕಥಾನಕ ಎನಿಸುವ ಈ ಕೃತಿ ಈ ನೆಲದ ಗುಣವನ್ನು ತುಂಬಿಕೊಂಡಿದೆ. ಕೃತಿ ರೂಪಿತವಾದ ಪ್ರತಿ ಹಂತದಲ್ಲೂ ಹತ್ತಿರವಿದ್ದ ನನಗೆ ಇದರ ಪ್ರಕಟಣೆಯ ಕ್ಷಣ ಅಮೃತಘಳಿಗೆ.ಗಾಯತ್ರಿ ನಾನು ತುಂಬಾ ಪ್ರೀತಿಸುವ ಗೆಳತಿ. ಆಕೆಯ ಮುನ್ನೋಟವೇ ಅಚ್ಚರಿ ತರುವಂತಹದ್ದು. ಅತ್ಯಂತ ನಿಷ್ಟುರ, ದಿಟ್ಟ ನುಡಿಗಳ ಗಾಯತ್ರಿ ಎಂದೂ ಉಡಾಫೆ ಮಾಡಿದವರಲ್ಲ. ಎಲ್ಲಾ ಮಾತಿನ ಹಿಂದೆಯೂ ಆಳವಾದ ಚಿಂತನೆ, ವಿವೇಚನೆ ಇರುತ್ತದೆ. ತಣ್ಣಗಿದ್ದು, ದೊಡ್ಡ ಕೆಲಸ ಮಾಡುವ ಗಾಯತ್ರಿ ನನಗೆ ಮೆಚ್ಚು.ಡಾ. ವಿಜಯಾ- ಬೆನ್ನುಡಿಯಿಂದಶೀರ್ಷಿಕೆ: ತುಂಗಾ : ಅವಳಿಗೆ ಸಿಕ್ಕಂಥ ಶಾಲೆ ನಮಗೇಕೆ ಸಿಗಲಿಲ್ಲ?! ಲೇಖಕರು:ವಿ. ಗಾಯತ್ರಿ ಪ್ರಕಾಶನ: ಮೇಫ್ಲವರ‍್ ಪುಟಗಳು:176 ಬೆಲೆ:ರೂ.120/-