ಪುಟಗಳು

ತಂಬಾಕು ಸೇವನೆ(ಧೂಮಪಾನ)

ತಂಬಾಕು ಉರಿಸಿ ಅದರ ಹೊಗೆಯ ರುಚಿ ತೆಗೆದುಕೊಳ್ಳುವ ಅಥವಾ ಉಸಿರಿನ ಮೂಲಕ ಒಳತೆಗೆದುಕೊಳ್ಳುವುದನ್ನು ತಂಬಾಕು ಸೇವನೆ ಯೆಂದು ಕರೆಯಲಾಗುತ್ತದೆ. ಈ ಅಭ್ಯಾಸವು ಕ್ರಿ.ಪೂ 5000–3000ದಷ್ಟು ಹಿಂದೆಯೇ ರೂಢಿಯಲ್ಲಿತ್ತು BC.[೧] ಹಲವಾರು ನಾಗರೀಕತೆಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಧೂಪವುರಿಸುತ್ತಿದ್ದು, ಇದು ಮುಂದೆ ಉಪಭೋಗದ ಅಥವಾ ಸಾಮಾಜಿಕ ಸಾಧನವಾಗಿ ಬಳಕೆಯಾಗತೊಡಗಿತು.[೨] ಪ್ರಾಚೀನ ವಿಶ್ವದಲ್ಲಿ ತಂಬಾಕನ್ನು 1500ರ ಅಂತ್ಯಭಾಗದ ವೇಳೆಗೆ ಪರಿಚಯಿಸಲಾಯಿತು ಮತ್ತು ಇದು ವ್ಯಾಪಾರ ಮಾರ್ಗಗಳ ಮುಖಾಂತರ ಬೇರೆ ಸ್ಥಳಗಳನ್ನು ತಲುಪತೊಡಗಿತು. ಈ ವಸ್ತುವು ಆಗಾಗ್ಗೆ ಟೀಕೆಗೆ ಒಳಗಾದರೂ ಕೂಡ ಅದರ ಜನಪ್ರಿಯತೆ ಹೆಚ್ಚುತ್ತಲೇ ಹೋಯಿತು.[೩] ಜರ್ಮನ್ ವಿಜ್ಞಾನಿಗಳು 1920ರ ದಶಕದ ಅಂತ್ಯಭಾಗದಲ್ಲಿ ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವಿನ ಸಂಬಂಧವನ್ನು ಪತ್ತೆಹಚ್ಚಿದ್ದರಿಂದ ಆಧುನಿಕ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಧೂಮಪಾನ-ವಿರೋಧೀ ಚಳುವಳಿ ಆರಂಭವಾಯಿತು. ಆದರೆ, ಈ ಚಳುವಳಿಯು ಎರಡನೇ ವಿಶ್ವಯುದ್ಧದ ಸಮಯದಲ್ಲಿ ವಿರೋಧಪಕ್ಷಗಳನ್ನು ತಲುಪದೇ ಹೋದ ಕಾರಣದಿಂದಾಗಿ ದುರ್ಬಲಗೊಂಡು ಬಹುಬೇಗನೆ ಜನಪ್ರಿಯತೆ ಕಳೆದುಕೊಂಡಿತು.[೪] 1950ರಲ್ಲಿ ಮತ್ತೆ ಆರೋಗ್ಯ ಪರಿಣತರು ಧೂಮಪಾನ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಡುವೆ ಸಂಬಂಧವಿದೆಯೆಂದು ಸೂಚಿಸತೊಡಗಿದರು.[೫] 1980ರ ದಶಕದಲ್ಲಿ ದೊರಕಿದ ವೈಜ್ಞಾನಿಕ ಸುಳಿವಿನಿಂದ ಈ ರೂಢಿಯ ವಿರುದ್ಧ ರಾಜಕೀಯ ಕ್ರಮಗಳನ್ನು ಕೈಗೊಳ್ಳುವಂತಾಯಿತು. 1965ರ ನಂತರ ತಂಬಾಕು ಸೇವನೆಯು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಏರಿಕೆಯಾಗಿವೆ ಇಲ್ಲವೇ ಇಳಿಕೆಯಾಗಿವೆ.[೬] ಆದರೆ ಅಭಿವೃದ್ಧಿಶೀಲ ಪ್ರಪಂಚದಲ್ಲಿ ಈ ಸಂಖ್ಯೆಯು ಏರಿಕೆಯಾಗುತ್ತಲೆ ಇದೆ

ಬಳಕೆ

ವಿಧಾನಗಳು

For more about the production of the argicultural product, see Types of tobacco, Cultivation of tobacco, Curing of tobacco, and Tobacco products
ತಂಬಾಕು ನಿಕೋಟಿಯಾನಾ ಕುಟುಂಬದ ಸಸ್ಯಗಳ ತಾಜಾ ಎಲೆಗಳಿಂದ ತಯಾರಿಸಲ್ಪಡುವ ಒಂದು ಕೃಷಿ ಉತ್ಪನ್ನವಾಗಿದೆ. ಈ ಕುಟುಂಬವು ಹಲವಾರು ಜಾತಿಗಳನ್ನು ಹೊಂದಿದ್ದು ಇವುಗಳಲ್ಲಿ ನಿಕೋಟಿಯಾನಾ ಟಬಾಕಮ್ ಜಾತಿಯ ಸಸ್ಯವನ್ನು ಸಾಮಾನ್ಯವಾಗಿ ಬೆಳೆಯಲಾಗುವುದು. ನಿಕೋಟಿಯಾನಾ ರಸ್ಟಿಕಾ ಎರಡನೇ ಸ್ಥಾನದಲ್ಲಿದ್ದು ಇದರಲ್ಲಿನ ನಿಕೋಟಿನ್ ಪ್ರಮಾಣವು ಅತಿಹೆಚ್ಚಿನ ಮಟ್ಟದಲ್ಲಿರುತ್ತದೆ. ಈ ಎಲೆಗಳನ್ನು ಕಟಾವು ಮಾಡಿ ಸಂಸ್ಕರಿಸುವುದರ ಮೂಲಕ ಮೆಲ್ಲನೆ ಉತ್ಕರ್ಷಣೆಯುಂಟಾಗಲು ಮತ್ತು ತಂಬಾಕಿನ ಎಲೆಯಲ್ಲಿರುವ ಕ್ಯಾರೊಟಿನಾಯ್ಡ್ಗಳು ನಶಿಸಲು ಅನುವು ಮಾಡಲಾಗುತ್ತದೆ. ಈ ಕ್ರಿಯೆಯು ತಂಬಾಕಿನಲ್ಲಿ ಕೆಲವು ಸಮ್ಮಿಶ್ರಣಗಳ ಉತ್ಪಾದನೆಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಎಲೆಗಳಲ್ಲಿ ಸಿಹಿ ಹುಲ್ಲು, ಟೀ, ಗುಲಾಬಿಯೆಣ್ಣೆ ಅಥವಾ ಹಣ್ಣಿನ ಪರಿಮಳಗಳ ರುಚಿ ಕಂಡುಬರುತ್ತದೆ. ಪ್ಯಾಕೇಜಿಂಗ್ ಮಾಡುವ ಮುನ್ನ ತಂಬಾಕನ್ನು ವ್ಯಸನದ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ, pHನ ಮಟ್ಟವನ್ನು ಬದಲಾಯಿಸಲು ಅಥವಾ ಹೊಗೆಯ ಗುಣಮಟ್ಟವನ್ನು ಬದಲಿಸಿ ಹೆಚ್ಚು ರುಚಿಕರವನ್ನಾಗಿ ಮಾಡುವ ಸಲುವಾಗಿ ಸಾಮಾನ್ಯವಾಗಿ ಇತರ ಪದಾರ್ಥಗಳ ಜತೆ ಬೆರಕೆ ಮಾಡಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಈ ಸಮ್ಮಿಶ್ರಣಗಳಲ್ಲಿ 599 ಪದಾರ್ಥಗಳನ್ನು ಮಾತ್ರ ಬಳಸುವಂತೆ ನಿಯಮಿತಗೊಳಿಸಲಾಗಿದೆ.[೮] ಇದರ ನಂತರದ ಉತ್ಪನ್ನವನ್ನು ವಿಂಗಡಿಸಿ, ಪ್ಯಾಕೇಜಿಂಗ್ ಮಾಡಿ ಬಳಕೆದಾರ ಮಾರುಕಟ್ಟೆಗಳಿಗೆ ರಫ್ತುಮಾಡಲಾಗುವುದು. ಆದಷ್ಟು ಕಡಿಮೆ ಉಪ-ಪದಾರ್ಥಗಳನ್ನುಳ್ಳ ಸಕ್ರಿಯ ಪದಾರ್ಥಗಳನ್ನು ಬಳಕೆದಾರರಿಗೆ ತಲುಪಿಸಲು ನೂತನ ವಿಧಾನಗಳ ಬಳಕೆ ಮಾಡುತ್ತಿರುವುದರಿಂದ ಅಥವಾ ಬಳಕೆ ಮಾಡಲು ಆರಂಭಿಸಿರುವುದರಿಂದಾಗಿ ಬಳಕೆಯ ರೀತಿಗಳು ಗಣನೀಯವಾಗಿ ವಿಸ್ತರಿಸಿವೆ:
Field of tobacco organized in rows extending to the horizon.
Tobacco field in Intercourse, Pennsylvania.
Powderly stripps hung vertically, slightly sun bleached.
Basma leaves curing in the sun at Pomak village of Xanthi, Thrace, Greece.
Rectangular strips stacked in an open square box.
Processed tobacco pressed into long strips for shipping.
ಬೀಡಿ
ಬೀಡಿಗಳು ತೆಳ್ಳಗಿದ್ದು, ಸಾಮಾನ್ಯವಾಗಿ ಪರಿಮಳಭರಿತವಾಗಿರುವ ದಕ್ಷಿಣ ಏಷ್ಯಾದ ಸಿಗರೆಟ್‌ಗಳಾಗಿದ್ದು ಇವನ್ನು ತೇಂದು ಎಲೆಯಲ್ಲಿ ಸುರುಳಿಸುತ್ತಲ್ಪಟ್ಟ ತಂಬಾಕಿನಿಂದ ತಯಾರಿಸಲಾಗುವುದು ಮತ್ತು ಒಂದು ತುದಿಯಲ್ಲಿ ದಾರವೊಂದರಿಂದ ಸುತ್ತಿ ಕಟ್ಟಲಾಗುವುದು.[ಉಲ್ಲೇಖದ ಅಗತ್ಯವಿದೆ] ಬೀಡಿಗಳ ಹೊಗೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾನ್ಯವಾಗಿ ದೊರೆಯುವ ಸಿಗರೆಟ್‌ಗಳಿಗಿಂತ ಹೆಚ್ಚಿನ ಮಟ್ಟದ ಕಾರ್ಬನ್ ಮಾನಾಕ್ಸೈಡ್, ನಿಕೋಟೀನ್ ಮತ್ತು ಟಾರ್ ಅನ್ನು ಉತ್ಪಾದಿಸುತ್ತದೆ.[೪೦][೪೧] ಸಾಧಾರಣ ಸಿಗರೆಟ್‌ಗಳಿಗೆ ಹೋಲಿಸಿದರೆ ಬೀಡಿಗಳು ಕಡಿಮೆ ಬೆಲೆಯುಳ್ಳವಾದ್ದರಿಂದ, ಇವು ಬಹಳ ಹಿಂದಿನಿಂದಲೂ ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಕಾಂಬೋಡಿಯಾ ಮತ್ತು ಭಾರತಗಳ ಬಡವರಲ್ಲಿ ಜನಪ್ರಿಯವಾಗಿವೆ.[ಉಲ್ಲೇಖದ ಅಗತ್ಯವಿದೆ]
ಸಿಗಾರ್ಗಳು
ಸಿಗಾರ್‌ಗಳು ಒಣಗಿದ ಮತ್ತು ಹುದುಗು ಬರಿಸಿ ಗಟ್ಟಿಯಾಗಿ ಸುತ್ತಲಾದ ತಂಬಾಕಿನ ಗಂಟಾಗಿದ್ದು, ಇದರ ಹೊಗೆಯು ಧೂಮಪಾನ ಮಾಡುವವರ ಬಾಯಿಯನ್ನು ಪ್ರವೇಶಿಸಲು ಅನುವಾಗುವಂತೆ ಇದನ್ನು ಹೊತ್ತಿಸಲಾಗುತ್ತದೆ. ಈ ಹೊಗೆಯನ್ನು ಸಾಮಾನ್ಯವಾಗಿ ಉಸಿರಿನ ಮೂಲಕ ಒಳಗೆಳೆದುಕೊಳ್ಳಲಾಗುವುದಿಲ್ಲ, ಏಕೆಂದರೆ ಹೊಗೆಯಲ್ಲಿ ಅತಿ ಹೆಚ್ಚಿನ ಮಟ್ಟದ ಕ್ಷಾರದ ಗುಣವಿರುವುದರಿಂದ ಇದು ಬಹಳ ಬೇಗನೆ ಗಂಟಲ ನಾಳ ಮತ್ತು ಶ್ವಾಸಕೋಶಗಳು ಕೆರಳುವ ಸಾಧ್ಯತೆಯಿದೆ. ಇದರಿಂದಾಗಿ ಈ ಹೊಗೆಯನ್ನು ಸಾಮಾನ್ಯವಾಗಿ ಬಾಯಿಗೆ ತೆಗೆದುಕೊಳ್ಳಲಾಗುವುದು.[ಉಲ್ಲೇಖದ ಅಗತ್ಯವಿದೆ] ಸಿಗಾರ್ ಸೇವನೆಯ ವಾಡಿಕೆಯು ಸ್ಥಳ, ಐತಿಹಾಸಿಕ ಅವಧಿ ಮತ್ತು ಸಮೀಕ್ಷಿಸಲಾದ ಜನಸಂಖ್ಯೆಯನ್ನು ಅವಲಂಬಿಸಿದೆ, ಹಾಗೂ ಈ ವಾಡಿಕೆಯ ಊಹೆಗಳು ಸಮೀಕ್ಷೆಯ ವಿಧಾನಗಳಿಗನುಗುಣವಾಗಿ ಕೊಂಚ ಬದಲಾಗುತ್ತವೆ. ಈಗ ಅತಿಹೆಚ್ಚಿನ ಬಳಕೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಗುತ್ತದೆ, ಜರ್ಮನಿ ಮತ್ತು ಯುನೈಟೆಡ್ ಕಿಂಗ್‍ಡಮ್ ನಂತರದ ಸ್ಥಾನಗಳಲ್ಲಿವೆ; ಯುಎಸ್ ಮತ್ತು ಪಶ್ಚಿಮ ಯುರೋಪ್ ಪ್ರಪಂಚದ ಒಟ್ಟು ಸಿಗಾರ್ ಮಾರಾಟದ ಶೇಕಡಾ 75ರಷ್ಟನ್ನು ಬಳಸುತ್ತವೆ.[೪೨] 2005ರ ಅಂಕಿ ಅಂಶಗಳ ಪ್ರಕಾರ ಶೇಕಡಾ 4.3ರಷ್ಟು ಪುರುಷರು ಹಾಗೂ 0.3%ರಷ್ಟು ಮಹಿಳೆಯರು ಸಿಗಾರ್ ಸೇವನೆ ಮಾಡುತ್ತಾರೆಂದು ಎಣಿಕೆ ಹಾಕಲಾಗಿದೆ.[೪೩]
ಸಿಗರೇಟುಗಳು
ಫ್ರೆಂಚ್ ಭಾಷೆಯಲ್ಲಿ ಸಿಗರೆಟ್‌ಗಳೆಂದರೆ "ಸಣ್ಣ ಸಿಗಾರ್"ಗಳೆಂದು ಅರ್ಥ, ಈ ಉತ್ಪನ್ನವನ್ನು ಧೂಮಪಾನದ ಮೂಲಕ ಸೇವಿಸಲಾಗುತ್ತದೆ ಹಾಗೂ ಇವನ್ನು ಸಂಸ್ಕರಿಸಲಾದ ಮತ್ತು ಉತ್ತಮವಾಗಿ ಕತ್ತರಿಸಲಾದ ತಂಬಾಕಿನ ಎಲೆಗಳು ಮತ್ತು ಪುನರ್ರಚಿಸಲಾದ ತಂಬಾಕು ಮತ್ತು ಇದರ ಜತೆಗೇ ಇತರ ವಸ್ತುಗಳನ್ನು ಸೇರಿಸಿ ಸುತ್ತಲಾಗುತ್ತದೆ ಇಲ್ಲವೇ ಕಾಗದ ಸುತ್ತಿದ ಕೊಳವೆಯೊಂದಕ್ಕೆ ತುಂಬಿಸಲಾಗುತ್ತದೆ.[೮] ಸಿಗರೆಟ್‌ಗಳನ್ನು ಹೊತ್ತಿಸಿ ಸೇದಲಾಗುತ್ತದೆ, ಸಾಮಾನ್ಯವಾಗಿ ಇದಕ್ಕಾಗಿ ಒಂದು ಸೆಲ್ಯುಕೋಸ್ ಅಸಿಟೇಟ್ ಫಿಲ್ಟರ್ ಇದ್ದು ಇದರ ಮೂಲಕ ಹೊಗೆಯನ್ನು ಬಾಯಿ ಮತ್ತು ಶ್ವಾಸಕೋಶಕ್ಕೆ ತೆಗೆದುಕೊಳ್ಳಲಾಗುವುದು. ಸಿಗರೆಟ್ ಸೇವನೆಯು ತಂಬಾಕನ್ನು ಸೇವಿಸುವ ಅತ್ಯಂತ ಪ್ರಚಲಿತ ವಿಧಾನವಾಗಿದೆ.[ಉಲ್ಲೇಖದ ಅಗತ್ಯವಿದೆ]
ಎಲೆಕ್ಟ್ರಾನಿಕ್ ಸಿಗರೆಟ್‌ಗಳು
ಎಲೆಕ್ಟ್ರಾನಿಕ್ ಸಿಗರೆಟ್‌ಗಳು ತಂಬಾಕು ಧೂಮಪಾನಕ್ಕೆ ಪರ್ಯಾಯವಾಗಿವೆಯಾದರೂ ಇಲ್ಲಿ ತಂಬಾಕು ಸೇವನೆ ಇರುವುದಿಲ್ಲ. ಇದು ಬ್ಯಾಟರಿ-ಚಾಲಿತ ಸಾಧನವಾಗಿದ್ದು, ಇದರಲ್ಲಿರುವ ಆವೀಕೃತ ಪ್ರೊಪೈಲೀನ್ ಗ್ಲೈಕಾಲ್/ನಿಕೋಟಿನ್ ದ್ರಾವಣದ ಮೂಲಕ ನಿಕೋಟಿನ್ ಡೋಸ್‌ಗಳನ್ನು ಸೇವಿಸಬಹುದು. ಇದು ಇತ್ತೀಚೆಗೆ ಹೊಸದಾಗಿ ಬಂದ ಉತ್ಪನ್ನವಾದ್ದರಿಂದ, ಇದರ ಬಗೆಗಿನ ಹಲವಾರು ಕಾನೂನುಗಳು ಮತ್ತು ಸಾರ್ವಜನಿಕ ಆರೋಗ್ಯ ತನಿಖೆಗಳು ಇನ್ನೂ ಪೂರ್ಣಗೊಂಡಿಲ್ಲ.
ಹುಕ್ಕಾ
ಹುಕ್ಕಾವು ಧೂಮಪಾನ ಮಾಡಲು ಬಳಸುವ ಸಾಧಾರಣವಾಗಿ ಒಂದು ಅಥವಾ ಹಲವು ಶಾಖೆಗಳನ್ನುಳ್ಳ (ಸಾಮಾನ್ಯವಾಗಿ ಗಾಜಿನದಾದ) ನೀರಿನ ಕೊಳವೆಯಾಗಿದೆ. ಇದು ಮೂಲತಃ ಭಾರತದ್ದಾಗಿದ್ದು, ಈಗ ಹುಕ್ಕಾ ಪ್ರಪಂಚದೆಲ್ಲೆಡೆಗೆ, ವಿಶೇಷವಾಗಿ ಮಧ್ಯಪೂರ್ವ ದೇಶಗಳಲ್ಲಿ ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಹುಕ್ಕಾವು ನೀರಿನ ಶೋಧನೆ ಮತ್ತು ಪರೋಕ್ಷವಾದ ಉಷ್ಣತೆಯನ್ನು ಬಳಸಿಕೊಳ್ಳುತ್ತದೆ. ಇದನ್ನು ಗಿಡಮೂಲಿಕೆಗಳ ಹಣ್ಣುಗಳು, ತಂಬಾಕು ಅಥವಾ ಕ್ಯಾನಾಬಿಸ್ ಅನ್ನು ಧೂಮಪಾನದ ಮೂಲಕ ಸೇವಿಸಲು ಬಳಸಬಹುದು.
ಕ್ರೆಟೆಕ್‌ಗಳು
ಕ್ರೆಟೆಕ್‌ಗಳು ತಂಬಾಕು, ಲವಂಗ ಮತ್ತು ಒಂದು ರೀತಿಯ ರುಚಿ-ಪರಿಮಳಗಳನ್ನುಳ್ಳ ’ಸಾಸ್’ನ ಸಂಕೀರ್ಣ ಮಿಶ್ರಣದಿಂದ ತಯಾರಿಸಲಾದ ಸಿಗರೆಟ್‌ಗಳಾಗಿವೆ. ಇವುಗಳನ್ನು ಮೊದಲ ಬಾರಿಗೆ 1880ರ ದಶಕದಲ್ಲಿ ಕುಡುಸ್, ಜಾವಾದಲ್ಲಿ ಲವಂಗಗಳಲ್ಲಿರುವ ಔಷಧೀಯ ಅಂಶವಾದ ಯೂಜಿನಾಲ್ ಅನ್ನು ಶ್ವಾಸಕೋಶಗಳಿಗೆ ತಲುಪಿಸುವ ಸಲುವಾಗಿ ಬಳಸಲಾಯಿತು. ತಂಬಾಕಿನ ಗುಣಮಟ್ಟ ಮತ್ತು ವೈವಿಧ್ಯತೆಗಳು ಕ್ರೆಟೆಕ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ, ಹಾಗೂ ಇದರಿಂದಾಗಿ ಕ್ರೆಟೆಕ್‍ಗಳು 30ಕ್ಕಿಂತ ಹೆಚ್ಚಿನ ರೀತಿಯ ತಂಬಾಕನ್ನು ಒಳಗೊಂಡಿರುವಂತಹ ಸಾಧ್ಯತೆಗಳೂ ಇರುತ್ತವೆ.. ಇದಕ್ಕೆ ವಿಶಿಷ್ಟವಾದ ರುಚಿಯನ್ನು ನೀಡುವ ಸಲುವಾಗಿ ತಂಬಾಕಿನ ಮಿಶ್ರಣದ 1/3 ಭಾಗದಷ್ಟು ಚೂರುಮಾಡಿ ಒಣಗಿಸಿದ ಲವಂಗದ ಮೊಗ್ಗುಗಳನ್ನು ಸೇರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್‌ನ ಹಲವಾರು ರಾಜ್ಯಗಳು ಕ್ರೆಟೆಕ್‌ಅನ್ನು ನಿಷೇಧಿಸಿವೆ,[ಉಲ್ಲೇಖದ ಅಗತ್ಯವಿದೆ] ಮತ್ತು 2004ರಲ್ಲಿ ಯುನೈಟೆಡ್ ಸ್ಟೇಟ್ಸ್ ತಂಬಾಕು ಮತ್ತು ಮೆಂಥಾಲ್‌ಗಳನ್ನು ಹೊರತುಪಡಿಸಿ ಸಿಗರೆಟ್‌ಗಳು ಇನ್ನಾವುದೇ "ವಿಶೇಷ ಫ್ಲೇವರ್" ಅನ್ನು ಹೊಂದಿರುವುದನ್ನು ನಿಷೇಧಿಸಿತು, ಹಾಗೂ ಇದರಿಂದಾಗಿ ಕ್ರೆಟೆಕ್‌ಗಳನ್ನು ಸಿಗರೆಟ್‌ಗಳ ಪಟ್ಟಿಯಿಂದ ಹೊರತುಪಡಿಸಿದಂತಾಯಿತು.[೪೪]
ಪರೋಕ್ಷ ಧೂಮಪಾನ
ಸೇವಿಸಿ ಹೊರಬಿಟ್ಟ ತಂಬಾಕಿನ ಹೊಗೆಯನ್ನು ಅನೈಚ್ಛಿಕವಾಗಿ ಸೇವಿಸುವುದನ್ನು ಪರೋಕ್ಷ ಧೂಮಪಾನ ಎನ್ನಲಾಗುತ್ತದೆ. ಉರಿಯುತ್ತಿರುವ ತುದಿಯಿಂದ ಹೊರಡುವ ಹೊಗೆಯನ್ನು ಸೇವಿಸುವುದನ್ನು ಸೆಕೆಂಡ್-ಹ್ಯಾಂಡ್ ಸ್ಮೋಕಿಂಗ್(SHS) ಎನ್ನಲಾಗುತ್ತದೆ ಮತ್ತು ಉರಿಯುತ್ತಿರುವ ತುದಿಯನ್ನು ನಮ್ದಿಸಲಾದ ನಂತರ ಉಳಿದುಕೊಳ್ಳುವ ಹೊಗೆಯನ್ನು ಸೇವಿಸುವುದನ್ನು ಎನ್‌ವೈರ್ನಮೆಂಟಲ್ ಟೊಬ್ಯಾಕೋ ಸ್ಮೋಕ್ (ETS) ಅಥವಾ ಥರ್ಡ್ ಹ್ಯಾಂಡ್ ಸ್ಮೋಕ್ ಎನ್ನಲಾಗುತ್ತದೆ. ಇದರಿಂದುಂಟಾಗುವ ದುಷ್ಪರಿಣಾಮಗಳ ಕಾರಣದಿಂದ ಈ ರೀತಿಯ ಸೇವನೆಯು ತಂಬಾಕು ಉತ್ಪನ್ನಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಕೊಳವೆಯ ಮೂಲಕ ಧೂಮಪಾನ
ಕೊಳವೆ ಧೂಮಪಾನವು ಸಾಮಾನ್ಯವಾಗಿ ಸೇವಿಸಲಾಗುವ ತಂಬಾಕನ್ನು ಹೊತ್ತಿಸಲು ಒಂದು ಸಣ್ಣ ಕಕ್ಷೆ (ದ ಬೌಲ್), ಒಂದು ಸಣ್ಣ ಕಾಂಡ (ಶ್ಯಾಂಕ್) ಮತ್ತು ಕೊನೆಗೆ ಬಾಯಿಡಲು ಜಾಗ (ದ ಬಿಟ್) ಅನ್ನು ಹೊಂದಿರುತ್ತದೆ. ತಂಬಾಕಿನ ಚೂರುಗಳನ್ನು ಕಕ್ಷೆಯಲ್ಲಿಟ್ತು ಹೊತ್ತಿಸಲಾಗುತ್ತದೆ. ಕೊಳವೆ ಮೂಲಕ ಸೇವಿಸಲು ಬಳಸಲಾಗುವ ತಂಬಾಕುಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಸ್ಕರಿಸಿ ಮಿಶ್ರ ಮಾಡಲಾಗುತ್ತದೆ ಹಾಗೂ ಇದರಿಂದ ಒದಗುವ ರುಚಿ-ಪರಿಮಳಗಳ ಸೂಕ್ಷ್ಮಗುಣಗಳು ಇನ್ನಾವುದೇ ತಂಬಾಕು ಉತ್ಪನ್ನಗಳಲ್ಲಿ ದೊರೆಯುವುದಿಲ್ಲ.
ರೋಲ್-ಯುವರ್-ಓನ್
ರೋಲ್-ಯುವರ್-ಓನ್ ಅಥವಾ ಕೈಯಿಂದ ಸುತ್ತಲಾಗುವ ಸಿಗರೆಟ್‌ಗಳನ್ನು ಸಾಧಾರಣವಾಗಿ ’ರೋಲೀಸ್’ ಎಂದು ಕರೆಯಲಾಗುತ್ತದೆ, ಮತ್ತು ಇವು ವಿಶೇಷವಾಗಿ ಯುರೋಪಿಯನ್ ದೇಶಗಳಲ್ಲಿ ಅತ್ಯಂತ ಜನಪ್ರಿಯವಾಗಿವೆ. ಇವನ್ನು ಬಿಡಿ ತಂಬಾಕು, ಸಿಗರೆಟ್ ಕಾಗದ ಮತ್ತು ಫಿಲ್ಟರ್‌ಗಳನ್ನು ಬೇರೆಬೇರೆಯಾಗಿ ಕೊಂಡುಕೊಂಡು ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಇವುಗಳನ್ನು ತಯಾರಿಸಲು ಕಡಿಮೆ ವೆಚ್ಚ ತಗಲುತ್ತದೆ.
ವೇಪರೈಸರ್
ಸಸ್ಯಜನ್ಯ ಪದಾರ್ಥಗಳ ಸಕ್ರಿಯ ಪದಾರ್ಥಗಳನ್ನು ಪರಿಷ್ಕರಿಸಲು ಬಳಸುವ ಸಾಧನವನ್ನು ವೇಪರೈಸರ್ ಎನ್ನಲಾಗುತ್ತದೆ. ಸಸ್ಯವನ್ನು ಸುಟ್ಟು ಅದರ ಕೆರಳಿಸುವ, ವಿಷಮಯ, ಕಾರಿನೋಜೆನಿಕ್ ಪದಾರ್ಥಗಳನ್ನುಳ್ಳ ಹೊಗೆಯನ್ನು ಸೇವಿಸುವುದಕ್ಕೆ ಬದಲಾಗಿ ವೇಪರೈಸರ್ ಒಂದು ಪದಾರ್ಥವನ್ನು ಅರೆ ನಿರ್ವಾತದಲ್ಲಿ ಬಿಸಿಮಾಡುವುದರ ಮೂಲಕ ಸಸ್ಯದಲ್ಲಿರುವ ಸಕ್ರಿಯ ಪದಾರ್ಥವು ಬೆಂದು ಆವಿಯಾಗುವುದು. ಸಸ್ಯ ಪದಾರ್ಥಕ್ಕೆ ನೇರವಾಗಿ ಬೆಂಕಿಹಾಕಿ ಸುಡುವುದಕ್ಕೆ ಬದಲಾಗಿ ಬಳಸಲಾಗುವ ಈ ವಿಧಾನವನ್ನು ಔಷಧೀಯ ಧೂಮಪಾನಕ್ಕಾಗಿ ಅತ್ಯಂತ ಪರಿಣಾಮಕಾರೀ ವಿಧಾನವೆಂದು ಬಳಶಲಾಗುತ್ತದೆ.

ಶರೀರ ವಿಜ್ಞಾನ

ಟೆಂಪ್ಲೇಟು:Also
ಇತರ ವಿಧಾನಗಳಿಗೆ ಹೋಲಿಸಿದರೆ ನಿಕೋಟಿನ್ ಅನ್ನು ಹೀರಿಕೊಳ್ಳಲು ಧೂಮಪಾನವನ್ನು ಅತ್ಯಂತ ಪರಿಣಾಮಕಾರೀ ವಿಧಾನವನ್ನಾಗಿ ತೋರಿಸುವ ಒಂದು ಗ್ರ್ಯಾಫ್.
ತಂಬಾಕಿನಲ್ಲಿರುವ, ಅದರಲ್ಲೂ ವಿಶೇಷವಾಗಿ ಸಿಗರೆಟ್‌ನಲ್ಲಿರುವ ಸಕ್ರಿಯ ಪದಾರ್ಥಗಳನ್ನು ಆ ಎಲೆಗಳನ್ನು ಹೊತ್ತಿಸಿ ಅದರಿಂದ ಹೊರಬರುವ ಆವಿರೂಪದ ಅನಿಲವನ್ನು ಸೇವಿಸುವುದರ ಮೂಲಕ ಪಡೆದುಕೊಳ್ಳಲಾಗುತ್ತದೆ. ಇದು ಶ್ವಾಸಕೋಶದಲ್ಲಿರುವ ಆಲ್ವಿಯೋಲೈ ಮೂಲಕ ಹೀರಲ್ಪಟ್ಟು ರಕ್ತಸಂಚಲನೆಗೆ ಅತಿಬೇಗನೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇರಿಕೊಳ್ಳುತ್ತದೆ. ಶ್ವಾಸಕೋಶವು ಸುಮಾರು 300 ಮಿಲಿಯನ್ ಅಲ್ವಿಯೋಲೈಗಳನ್ನು ಹೊಂದಿದೆ ಮತ್ತು ಇದು 70 m2(ಒಂದು ಟೆನಿಸ್ ಕೋರ್ಟ್‌ನಷ್ಟು)ನಷ್ಟು ಮೇಲ್ಮೈ ಆವರಣದಷ್ಟಾಗುತ್ತವೆ. ಈ ವಿಧಾನದಲ್ಲಿ ಎಲ್ಲಾ ಹೊಗೆಯನ್ನೂ ಸೇವನೆ ಮಾಡಲಾಗುವುದಿಲ್ಲವಾದ್ದರಿಂದ ಇದು ಸಂಪೂರ್ಣವಾಗಿ ಸಕ್ಷಮವಾದ ವಿಧಾನವಲ್ಲವೆಂದು ಹೇಳಬಹುದು, ಏಕೆಂದರೆ ಬೆಂಕಿಯನ್ನು ಹೊತ್ತಿಸುವ ಪೈರೋಲಿಸಿಸ್ ಪ್ರಕ್ರಿಯೆಯ ಸಮಯದಲ್ಲಿ ಕೆಲವು ಸಕ್ರಿಯ ಪದಾರ್ಥಗಳು ಕಳೆದುಹೋಗಿಬಿಡುತ್ತವೆ.[೯] ಪೈಪ್ ಮತ್ತು ಸಿಗಾರ್‌ನ ಹೊಗೆಗಳನ್ನು ಅವುಗಳ ಅತಿಹೆಚ್ಚು ಕ್ಷಾರಗುಣದಿಂದ ಗಂಟಲ ನಾಳ ಮತ್ತು ಶ್ವಾಸಕೋಶಗಳನ್ನು ಕೆರಳಿಸುವುದೆಂಬ ಕಾರಣದಿಂದ ಒಳಗೆಳೆದುಕೊಳ್ಳಲಾಗುವುದಿಲ್ಲ. ಆದರೆ ಸಿಗರೆಟ್ ಹೊಗೆ(pH 5.3)ಗಿಂತಲೂ ಹೆಚ್ಚಿನ ತನ್ನ ಕ್ಷಾರಗುಣದಿಂದಾಗಿ(pH 8.5), ಯೂನಿಯನೈಸ್ಡ್ ನಿಕೋಟಿನ್ ಬಾಯಿಯ ಮ್ಯೂಕಸ್ ಮೆಂಬ್ರೇನ್ಗಳ ಮೂಲಕವೂ ಹೀರಿಕೊಳ್ಳಲ್ಪಡುತ್ತದೆ.[೪೫] ಹೀಗಿದ್ದಾಗ್ಯೂ ಸಿಗಾರ್ ಮತ್ತು ಪೈಪ್‌ನ ಮೂಲಕ ಹೀರಲ್ಪಡುವ ನಿಕೋಟಿನ್‌ನ ಪ್ರಮಾಣವು ಸಿಗರೆಟ್ ಹೊಗೆಯಿಂದ ಹೀರಲ್ಪಡುವ ಪ್ರಮಾಣಕ್ಕಿಂತ ಬಹಳ ಕಡಿಮೆಯಾಗಿದೆ.