ಪುಟಗಳು

ವಿಶ್ವ ತಂಬಾಕು ರಹಿತ ದಿನ

ಪ್ರತಿವರ್ಷ ವಿಶ್ವಾದ್ಯಂತ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಆದರೆ, ತಂಬಾಕು ಸೇವನೆ ಪ್ರಮಾಣ ಕಡಿಮೆಯಾಗಲಿಲ್ಲ. ಅದರಿಂದ ಸಾಯುವವರ ಸಂಖ್ಯೆಯೂ.
ಯುವ ಜನಾಂಗವಂತೂ ಸಿಕ್ಕಾಪಟ್ಟೆ ಇಷ್ಟಾಪಟ್ಟೆ ಎಂಬಂತೆ ಸಿಗರೇಟ್‌, ಚುಟ್ಟಾ, ಹುಕ್ಕಾ, ಗುಟಾR, ಜರಾª ಮುಂತಾದವುಗಳಿಗೆ ಶರಣಾಗಿ ತಂಬಾಕು ಸೇವನೆ ಪ್ರಮಾಣ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಲ್ಲಿ ಧೂಮಪಾನಿಗಳಿಗಾಗಿಯೇ ಕಾಫಿ ಬಾರ್‌ಗಳ ರೀತಿಯಲ್ಲಿ ಹುಕ್ಕಾ ಕೇಂದ್ರಗಳು ತಲೆ ಎತ್ತುತ್ತಿವೆ.

ವಿಶ್ವದಲ್ಲಿ ಪ್ರತಿ ಆರು ಸೆಕೆಂಡಿಗೆ ಒಬ್ಬರು ತಂಬಾಕು ಸೇವನೆ ಸಂಬಂಧಿತ ಸಮಸ್ಯೆಯಿಂದ ಸಾವು ತಂದುಕೊಳ್ಳುತ್ತಿದ್ದರೆ ಭಾರತದಲ್ಲಿ ಪ್ರತಿವರ್ಷ 10 ಲಕ್ಷ ಮಂದಿ ಬಲಿಯಾಗುತ್ತಿದ್ದು ಪ್ರತಿನಿತ್ಯ ಕ್ಯಾನ್ಸರ್‌ನಿಂದಲೇ 2200 ಮಂದಿ ಸಾವಿಗೀಡಾಗುತ್ತಿದ್ದಾರೆ.

ಭಾರತದಲ್ಲಿ ಅಂದಾಜು 150 ದಶಲಕ್ಷಕ್ಕೂ ಹೆಚ್ಚು ಧೂಮಪಾನಿಗಳಿದ್ದು 30 ರಿಂದ 69 ವಯಸ್ಸಿನ ಶೇಕಡ 37 ರಷ್ಟು ಪುರುಷರು ಹಾಗೂ ಶೇಕಡ 5 ಮಂದಿ ಮಹಿಳೆಯರು ಧೂಮಪಾನಿಗಳು. ತಂಬಾಕು ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪುವವರ ಪೈಕಿ ಶೇಕಡ 80 ರಷ್ಟು ಮಂದಿ ಗ್ರಾಮೀಣ ಭಾಗದವರು ಎಂಬುದು ಆಘಾತಕಾರಿ ಸಂಗತಿ.

ಈ ಹಿಂದೆ ತಂಬಾಕು ಸೇವನೆ ಎಂದರೆ ಅದು ಅನಕ್ಷರಸ್ಥರು ಅಥವಾ ದೊಡ್ಡ ಮನೆತನದವರು ಎಂಬ ಮಾತಿತ್ತು. ಗ್ರಾಮೀಣ ಭಾಗದ ಮಹಿಳೆಯರು ಕಡ್ಡಿಪುಡಿ, ನಶ್ಯ, ಪುರುಷರು ಬೀಡಿ, ಚುಟ್ಟಾ ಸೇವನೆ ಚಟ ಹತ್ತಿಸಿಕೊಂಡಿದ್ದರೆ ದೊಡ್ಡ ಕುಟುಂಬದವರು ’ಅಂತಸ್ತು’ ಪ್ರದರ್ಶನಕ್ಕೆ ಸಿಗರೇಟ್‌ ಸೇದುತ್ತಿದ್ದರು. ಆದರೆ, ಇದೀಗ ತಂಬಾಕು ಬಹುತೇಕ ಜನರ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದು ಸಾವಿನ ಪ್ರಮಾಣವನ್ನೂ ಹೆಚ್ಚಿಸಿದೆ. ಹಾವರ್ಡ್‌ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ಭಾರತದಲ್ಲಿ ಅನಾರೋಗ್ಯ ಸಂಬಂಧಿತ ಪ್ರತಿ 10 ಸಾವುಗಳಲ್ಲಿ 1 ಸಾವು ತಂಬಾಕು ಸೇವನೆಯಿಂದ ಆಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಯುವಕ-ಯುವತಿಯರಲ್ಲಿ ಧೂಮಪಾನ ’ಫ್ಯಾಶನ್‌’ ಆಗಿರುವುದು ಮತ್ತೂ ಆತಂಕಕಾರಿ. ಧೂಮಪಾನ ಮಾಡುವ ಯವತಿಯರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದೆ. ಆದರೆ, ಯುವ ಸಮುದಾಯ ಒಂದು ಮಾತು ನೆನಪಿಡಬೇಕು. ಧೂಮಪಾನ ಸೇರಿದಂತೆ ತಂಬಾಕು ಸೇವನೆಯಿಂದ ಶ್ವಾಸಕೋಶ ಹಾಗೂ ಹೃದ್ರೋಗ ಸಂಬಂಧಿ ಕಾಯಿಲೆಗಳ ಜತೆಗೆ ಆತಂಕ ಹುಟ್ಟಿಸುವಂತಹ ಸಂಗತಿ ಮತ್ತೂಂದಿದೆ. ಅದು ಪುರುಷರದಲ್ಲಿ ವೀರ್ಯೋತ್ಪಾದನೆ ಕಡಿತ, ನರದೌರ್ಬಲ್ಯ, ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌. ಇದರಿಂದ ಕುಟುಂಬ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹರೆಯದಲ್ಲಿ ಮೋಜಿಗಾಗಿ ಬರಮಾಡಿಕೊಳ್ಳುವ ಹವ್ಯಾಸ ಚಟವಾಗಿ ಸಂತಾನ ಪ್ರಾಪ್ತಿಯಿಲ್ಲದ ಫ‌ಲ ನೀಡುತ್ತಿದೆ.

ಪ್ರತಿವರ್ಷ ಶೇಕಡ 1.5 ರಷ್ಟು ಧೂಮಪಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಿಚಿತ್ರ ಎಂದರೆ ತಂಬಾಕು ಬೆಳೆಯಿಂದ ಸರ್ಕಾರಕ್ಕೆ ಬರುವ ಆದಾಯ 200 ಕೋಟಿ ರೂ., ಆದರೆ, ತಂಬಾಕು ಸಂಬಂಧಿತ ಕಾಯಿಲೆಗಳಿಗೆ ಜನರು ವೆಚ್ಚ ಮಾಡುತ್ತಿರುವುದು 2,776 ಕೋಟಿ ರೂ.

ನೈಜ ಶತ್ರು

ಧೂಮಪಾನದಿಂದ ಯುವ ಸಮುದಾಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ’ಉದಯವಾಣಿ’ಯೊಂದಿಗೆ ಮಾತನಾಡಿದ ತಜ್ಞ ಡಾ.ಸೋಮಶೇಖರ್‌, ಧೂಮಪಾನ ಜಗತ್ತಿನ ಅತಿ ದೊಡ್ಡ ಶತ್ರುವಾಗಿ ಪರಿಣಮಿಸಿದೆ. ಯುವ ಸಮುದಾಯ ಶತ್ರುವನ್ನು ಅಪ್ಪಿ ಮುದ್ದಾಡುತ್ತಿದೆ. ಇದು ನಿಜಕ್ಕೂ ಆರೋಗ್ಯಕಾರಿ ಬೆಳವಣಿಗೆಯಲ್ಲ ಎಂದಿದ್ದಾರೆ.
ಚಿಕ್ಕವಯಸ್ಸಿನಲ್ಲೇ ಧೂಮಪಾನದ ಚಟ ಹತ್ತಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ವಿದ್ಯಾರ್ಥಿಗಳಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿರುವ ಉದಾಹರಣೆಗಳಿವೆ. ಮದುವೆಯ ನಂತರ ವೀರ್ಯ ಉತ್ಪತ್ತಿ ಕಡಿಮೆಯಾಗಿ ಶಾಶ್ವತವಾಗಿ ಸಂತಾನ ಭಾಗ್ಯವೇ ಇಲ್ಲದಂತಾಗುತ್ತಿದೆ. ಮಕ್ಕಳಲಾಗುತ್ತಿಲ್ಲ ಎಂದು ಬಂದವರಲ್ಲಿ ಶೇಕಡ 90 ರಷ್ಟು ಮಂದಿ ಧೂಮಪಾನಿಗಳಾಗಿರುತ್ತಾರೆ ಎಂದು ಹೇಳುತ್ತಾರೆ.
ಗರ್ಭಿಣಿ ಮಹಿಳೆಯಂತೂ ಧೂಮಪಾನ ಮಾಡಿದರೆ ಖಂಡಿತವಾಗಿಯೂ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಇದುವರೆಗಿನ ಎಲ್ಲ ಸಂಶೋಧನೆಗಳೂ ಅದನ್ನು ದೃಢಪಡಿಸಿವೆ ಎಂದು ತಿಳಿಸುತ್ತಾರೆ.
ತಂಬಾಕು ಸೇವನೆಯಿಂದ ಪ್ರಮುಖವಾಗಿ ಬಾಯಿ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌, ವಸಡು ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ಕಾಯಿಲೆಗಳು ಬರುತ್ತವೆ. ಮೊದಲು ಗ್ರಾಮೀಣ ಭಾಗದಲ್ಲಿ ಇಂತಹ ಕಾಯಿಲೆಗಳು ಹೆಚ್ಚಾಗಿ ವರದಿಯಾಗುತ್ತಿತ್ತಾದರೂ ಈಗ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿವೆ ಎನ್ನುತ್ತಾರೆ.
ಯುವ ಸಮುದಾಯ ತಂಬಾಕು ಸೇವನೆ ಚಟಕ್ಕೆ ಬಲಿಯಾಗದಂತೆ ಪೋಷಕರು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಸ್ವಲ್ಪ ಮುತುವರ್ಜಿ ವಹಿಸಬೇಕಾಗುತ್ತದೆ. ಚಿಕ್ಕಂದಿನಲ್ಲೇ ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಮನೆಯಲ್ಲಿ ಪೋಷಕರು ಜವಾಬ್ದಾರಿ ತೆಗೆದುಕೊಂಡರೆ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಆಸಕ್ತಿ ವಹಿಸಬೇಕು. ತಂಬಾಕು ಪಿಡುಗಿನ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ಶಾಲಾ-ಕಾಲೇಜುಗಳಲ್ಲಿ ತಂಡ ರಚಿಸಬೇಕು ಎಂದು ಹೇಳುತ್ತಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಕಾನೂನು ಜಾರಿಯಲ್ಲಿದೆ. ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ನಲ್ಲಿ ತಂಬಾಕು ಮಾರಾಟ ನಿಷಿದ್ಧ. ಆದರೆ, ಇದು ಕೇವಲ ಕಾಗದದ ಮೇಲಷ್ಟೇ. ಪರಿಣಾಮಕಾರಿ ನಿಯಂತ್ರಣ ಆಗುತ್ತಿಲ್ಲ. ಇತ್ತೀಚೆಗೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಅಂಗಡಿಗಳಲ್ಲೇ ವಿದೇಶಿ ಬ್ರಾಂಡ್‌ಗಳ ಸಿಗರೇಟ್‌ ಮಾರಾಟವಾಗುತ್ತಿರುವುದು ಬಹಿರಂಗಗೊಂಡಿತ್ತು. ಆದರೂ ಕಾನೂನಿನ ಮೂಲಕ ನಿಯಂತ್ರಣ ಮಾಡುವುದು ಸಾಧ್ಯವೇ ಇಲ್ಲ. ತಂಬಾಕು ನಿಯಂತ್ರಣವೇನಿದ್ದರೂ ಜನರಿಂದಲೇ ಆಗಬೇಕು ಎಂಬುದಂತೂ ಸತ್ಯ.
ಧೂಮಪಾನವಷ್ಟೇ ಅಪಾಯಕಾರಿಯಲ್ಲ. ಬೋರೊಬ್ಬರು ಸೇದಿ ಬಿಡುವ ಹೊಗೆ ಕುಡಿಯುವುದೂ (ಪ್ಯಾಸಿವ್‌ ಸ್ಮೋಕಿಂಗ್‌) ಡೇಂಜರ್‌. ಸಿಗರೇಟ್‌ ಸೇವನೆಯಿಂದ ನಾಲ್ಕು ಸಾವಿರ ಅಪಾಯಕಾರಿ ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುತ್ತವೆ. ಹೀಗಾಗಿ, ಧೂಮಪಾನ ಬಿಡಿ, ಧೂಮಪಾನಿಗಳ ಹತ್ತಿರಕ್ಕೂ ಸುಳಿಯಬೇಡಿ.