ಬೆಂಗಳೂರು, ಮೇ 29: ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಭೂಮಿಯ ಬೆಲೆ ಗಗನಕ್ಕೆ ತಲುಪಿದ್ದೇ ತಡ ನಕಲಿ ದಾಖಲೆಗಳು ವ್ಯಾಪಕವಾಗಿ ಸೃಷ್ಟಿಯಾಗತೊಡಗಿವೆ. ಇಂತಹ ದಾಖಲೆಗಳ ಸೃಷ್ಟಿಕರ್ತರಿಗೆ ನಗರವು ಸ್ವರ್ಗವಾಗಿದೆ. ಸಬ್ ರಿಜಿಸ್ಟ್ರಾರ್, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸನಿಹದಲ್ಲೇ ನಕಲಿ ದಾಖಲೆಯ ಸೃಷ್ಟಿ ಕೇಂದ್ರಗಳಿವೆ ಎಂಬುದು ಆಘಾತಕಾರಿ.
ಜಮೀನುಗಳ ನಕಲಿ ದಾಖಲೆ ಸೃಷ್ಟಿಕರ್ತರಿಗೆ ಸಬ್ ರಿಜಿಸ್ಟ್ರಾರ್, ಬಿಡಿಎ ಹಾಗೂ ತಹಸೀಲ್ದಾರ್ ಕಚೇರಿಗಳ ಸುತ್ತಮುತ್ತಲಿನ ಕೆಲವು ಜೆರಾಕ್ಸ್ ಮಳಿಗೆಗಳು ಸಾಥ್ ನೀಡುತ್ತಿವೆ ಎಂಬ ಸತ್ಯವೂ ಬಯಲಾಗಿದೆ. ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಈ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ವಿವರ ಹೀಗಿದೆ:
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಿಗೆ ಸಲ್ಲಿಸಿ ಕೋಟ್ಯಂತರ ರೂ. ವಂಚಿಸಿದ್ದ ಹಾಗೂ ಬೇರೊಬ್ಬರ ಜಮೀನು ತಮ್ಮದೇ ಎಂದು ಮಾರಾಟ ಮಾಡುವುದಾಗಿ ನಂಬಿಸಿ ಕೋಟ್ಯಂತರ ರೂ. ಪಡೆದಿದ್ದ ವಂಚಕರು ಪೊಲೀಸ್ ವಿಚಾರಣೆಯಲ್ಲಿ ನಕಲಿ ದಾಖಲೆ ಹೇಗೆ ಸೃಷ್ಟಿಯಾಗುತ್ತಿದೆ ಎಂಬುದನ್ನು ಬಾಯ್ಬಿಟ್ಟಿದ್ದಾರೆ.
ಜಮೀನುಗಳ ಮಾರಾಟ, ಖರೀದಿ, ಖಾತೆ ಬದಲಾವಣೆ, ಇ.ಸಿ. ಪಡೆಯಲು ಆಸ್ತಿದಾರರು ಜೆರಾಕ್ಸ್ ಮಾಡಿಸುವಾಗ ಅವರ ಗಮನ ಬೇರೆಡೆ ಸೆಳೆದು ಒಂದು ಪ್ರತಿ ಎಕ್ಸ್‌ಟ್ರಾ ಪಡೆದು ಅಥವಾ ಮೂಲ ದಾಖಲಾತಿಗಳಾಗಿದ್ದಲ್ಲಿ ಕಲರ್ ಜೆರಾಕ್ಸ್ ಪಡೆದುಕೊಂಡು ಅದರ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿಯಾಗುವುದು ಬಹಿರಂಗವಾಗಿದೆ.
ಜಮೀನು ಮಾರಾಟಗಾರ ಮತ್ತು ಖರೀದಿದಾರನ ನಡುವೆ 'ಮಧ್ಯಸ್ಥಿಕೆ'ದಾರರಾಗಿ ಕಾರ್ಯನಿರ್ವಹಿಸುವ ಕೆಲವರು ಮಾರಾಟ ಅಥವಾ ಖರೀದಿ ನೆಪದಲ್ಲಿ ಮಾಲೀಕರಿಂದ ಆಸ್ತಿಯ ದಾಖಲೆ ಪಡೆದು ಜೆರಾಕ್ಸ್ ಮಾಡಿಸಿಕೊಂಡು ನಂತರ ವ್ಯಾಪಾರ ಕುದುರಲಿಲ್ಲ ಎಂಬ ಸಬೂಬು ಹೇಳಿ ಜೆರಾಕ್ಸ್ ಪ್ರತಿಗಳ ಆಧಾರದಲ್ಲಿ ನಕಲಿ ದಾಖಲೆ ಸೃಷ್ಟಿ.
ಮಧ್ಯಸ್ಥಿಕೆದಾರರನ ಗಮನಕ್ಕೆ ಬಾರದಂತೆ ಆತನ ನೆರವಿನಿಂದಲೇ ಜಮೀನುಗಳ ದಾಖಲೆಗಳ ಪ್ರತಿ ಪಡೆದು ಜಮೀನು ಮಾಲೀಕರ ಹೆಸರಿನವರನ್ನೇ ಹುಡುಕಿ ನಕಲಿ ದಾಖಲೆ ಸೃಷ್ಟಿ ಮಾಡಲಾಗುತ್ತಿದೆ.
ನಕಲಿ ದಾಖಲೆ ಸೃಷ್ಟಿಗಾಗಿ ತಹಸೀಲ್ದಾರ್, ಬಿಡಿಎ, ಸಬ್ ರಿಜಿಸ್ಟ್ರಾರ್ ಕಚೇರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ನೌಕರರ ಸಹಕಾರ ಪಡೆದು ನಕಲಿ ರಬ್ಬರ್ ಸ್ಟಾಂಪ್ ಹಾಗೂ ಮೊಹರು ತಯಾರಿಸಲಾಗುತ್ತಿತ್ತು ಎಂಬ ಮಾಹಿತಿಯನ್ನೂ ವಂಚಕರು ಹೊರಗೆಡವಿದ್ದಾರೆ.
ಆಸ್ತಿಯ ನೈಜ ಮಾಲೀಕರು ಯಾರು? ಅವರ ಹಿನ್ನೆಲೆ ಏನು ? ಅವರ ವಾರಸುದಾರರು ಯಾರು ? ಎಂಬಿತ್ಯಾದಿ ಮಾಹಿತಿ ಕಲೆಹಾಕಿ ಆ ನಂತರ ಮಧ್ಯಸ್ಥಿಕೆದಾರನ ಮೂಲಕ ಆಸ್ತಿ ಖರೀದಿ ಪ್ರಸ್ತಾಪ ಸಲ್ಲಿಸುವುದು. ಆ ನಂತರ ದೊಡ್ಡ ದೊಡ್ಡ ಹೋಟೆಲ್‌ಗಳಿಗೆ ಕರೆದು ತಾವು ರಿಯಲ್ ಎಸ್ಟೇಟ್ ಉದ್ಯಮಿಗಳು ಎಂಬಂತೆ ಫೋಸ್ ನೀಡಿ ಅಲ್ಲಿ ಔತಣಕೂಟ ನೀಡಿ ಮಾರಾಟಗಾರನ ವಿಶ್ವಾಸಗಳಿಸುವುದು. ನಂತರ ಟೋಕನ್ ಅಡ್ವಾನ್ಸ್ ನೀಡಿ ಜಮೀನು ದಾಖಲೆಗಳ ಪ್ರತಿ ಪಡೆಯುವುದು ವಂಚಕರು ಕಾರ್ಯಾಚರಣೆ ವಿಧಾನ.
ವಂಚನೆ ವ್ಯವಹಾರದಲ್ಲಿ ಮಹಿಳೆಯರನ್ನು ಬಳಸಿಕೊಂಡರೆ ಯಾರಿಗೂ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಜಮೀನಿನ ನೈಜ ಮಾಲೀಕರ ಹೆಸರು ಹೊಂದಿರುವವರನ್ನೇ ಆರಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಇವರೇ ಮಾಲೀಕರು, ನಾವೆಲ್ಲಾ ಇವರ ಸಂಬಂಧಿಕರು ಎಂದು ಹೇಳಿಕೊಳ್ಳುತ್ತಿದ್ದರು. ಕೆಲವೊಮ್ಮೆ ಆಸ್ತಿ ಖರೀದಿದಾರರನ್ನು ಮನೆಗೂ ಆಹ್ವಾನಿಸಿ ಅಲ್ಲಿಯೂ ಕುಟುಂಬದವರಂತೆ ನಟಿಸುತ್ತಾರೆ.
ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಅಡವಿಟ್ಟು ಹಣ ಸಾಲವಾಗಿ ಪಡೆಯುವುದು ಸುಲಭ ಮಾರ್ಗ ಎಂಬುದನ್ನು ಕಂಡುಕೊಂಡಿದ್ದ ವಂಚಕರು ನಕಲಿ ದಾಖಲೆ ಸೃಷ್ಟಿಸಿದ ಒಂದೇ ಆಸ್ತಿಯ ಅಥವಾ ಇಲ್ಲದ ಆಸ್ತಿಯ ದಾಖಲೆಗಳನ್ನೇ ಹತ್ತಾರು ಬ್ಯಾಂಕುಗಳಿಗೆ ನೀಡಿ ಸಾಲ ಪಡೆಯುತ್ತಿದ್ದರು. ಇದಕ್ಕೆ ಬ್ಯಾಂಕುಗಳ ಅಧಿಕಾರಿಗಳ ಸಹಕಾರವೂ ಇರುತ್ತಿತ್ತು. ಇಂತಿಷ್ಟು ಪರ್ಸೆಂಟೇಜ್ ವೆಚ್ಚ ಮಾಡುತ್ತಿದ್ದರು. ಈ ಎಲ್ಲ ಮಾಹಿತಿಗಳೂ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಡಿಸಲಾಗಿದೆ ಎಂದು ಹೇಳಲಾಗಿದೆ.
ಒಟ್ಟಾರೆ ಬೆಂಗಳೂರಿನಲ್ಲಿ ಜಮೀನುಗಳ ನಕಲಿ ದಾಖಲೆ ಸೃಷ್ಟಿಸುವ ಅತಿದೊಡ್ಡ ತಂಡವೇ ಕಾರ್ಯನಿರ್ವಹಿಸುತ್ತಿದ್ದು ಆ ತಂಡದ ಸಮಗ್ರ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದು ಶೀಘ್ರದಲ್ಲೇ ಮತ್ತೂಂದು ಜಾಲ ಪೊಲೀಸ್ ಬಲೆಗೆ ಬೀಳಲಿದೆ