ನವದೆಹಲಿ, ಮೇ 31 : ಹಿರಿಯ ಆಟಗಾರರ ಗೈರುಹಾಜರಿಯಲ್ಲಿ ಎರಡನೇ ದರ್ಜೆಯ ಕ್ರಿಕೆಟ್ ತಂಡವನ್ನು ಕಳುಹಿಸಲಾಗುತ್ತಿದೆ ಎಂಬ ಟೀಕಿಗೆ ಗುರಿಯಾಗಿರುವ ಭಾರತದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿ ಜೂನ್ 4ರಿಂದ ಆರಂಭವಾಗುತ್ತಿದೆ.
ಹೊಸ ಕೋಚ್ ಡಂಕನ್ ಫ್ಲೆಚರ್ ಮತ್ತು ಹೊಸ ನಾಯಕ ಸುರೇಶ್ ರೈನಾ ಅವರ ಮುಂದಾಳತ್ವದಲ್ಲಿ ಏಕದಿನ ಪಂದ್ಯಗಳನ್ನು ಆಡುತ್ತಿರುವ ಭಾರತ ಬಹುತೇಕ ಯುವ ಆಟಗಾರರಿಂದ ಕೂಡಿದೆ. ಜೂನ್ 4ರಿಂದ ಜುಲೈ 6ರವರೆಗೆ ನಡೆಯಲಿರುವ ಸರಣಿಯಲ್ಲಿ 1 ಟ್ವೆಂಟಿ20, 5 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನು ಭಾರತ ಆಡುತ್ತಿದೆ.
ಆರಂಭದಲ್ಲಿ ಗೌತಮ್ ಗಂಭೀರ್ ಅವರನ್ನು ಏಕದಿನ ಪಂದ್ಯಗಳಿಗೆ ನಾಯಕನನ್ನಾಗಿ ಆರಿಸಲಾಗಿತ್ತು. ಅವರೂ ಗಾಯಗೊಂಡಿದ್ದರಿಂದ ಸುರೇಶ್ ರೈನಾ ಅವರನ್ನು ನಾಯಕಪಟ್ಟದಲ್ಲಿ ಕೂಡಿಸಲಾಗಿದೆ. ಟೆಸ್ಟ್ ಸರಣಿಯನ್ನು ಮಹೇಂದ್ರ ಸಿಂಗ್ ಧೋನಿಯೇ ಮುನ್ನಡೆಸಲಿದ್ದಾರೆ. ಸಚಿನ್ ಐಪಿಎಲ್ ನಲ್ಲಿ ಆಡಿ ಸುಸ್ತಾಗಿರುವ ಸಚಿನ್ ತೆಂಡೂಲ್ಕರ್ ಮತ್ತು ಗಾಯಗೊಂಡಿರುವ ಗಂಭೀರ್ ಮತ್ತು ಯುವರಾಜ್ ಇಡೀ ಸರಣಿಯಿಂದ ಹೊರಗುಳಿದಿದ್ದಾರೆ.

ದಿನಾಂಕ | ಪಂದ್ಯ | ಸ್ಥಳ |
ಜೂನ್ 4, ಶನಿವಾರ | ಟ್ವೆಂಟಿ20 | ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್ |
ಜೂನ್ 6, ಸೋಮವಾರ | ಮೊದಲನೇ ಏಕದಿನ ಪಂದ್ಯ | ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್ |
ಜೂನ್ 8, ಬುಧವಾರ | ಎರಡನೇ ಏಕದಿನ ಪಂದ್ಯ | ಕ್ವೀನ್ಸ್ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್ |
ಜೂನ್ 11 ಶನಿವಾರ | ಮೂರನೇ ಏಕದಿನ ಪಂದ್ಯ | ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್ |
ಜೂನ್ 13 ಸೋಮವಾರ | ನಾಲ್ಕನೇ ಏಕದಿನ ಪಂದ್ಯ | ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂ, ನಾರ್ತ್ ಸೌಂಡ್ |
ಜೂನ್ 16, ಗುರುವಾರ | ಐದನೇ ಏಕದಿನ ಪಂದ್ಯ | ಸಬೀನಾ ಪಾರ್ಕ್, ಕಿಂಗ್ಸ್ ಟನ್ |
ಜೂನ್ 20, ಸೋಮವಾರ | ಮೊದಲ ಟೆಸ್ಟ್ ಪಂದ್ಯ | ಸಬೀನಾ ಪಾರ್ಕ್, ಕಿಂಗ್ಸ್ ಟನ್ |
ಜೂನ್ 28, ಮಂಗಳವಾರ | ಎರಡನೇ ಟೆಸ್ಟ್ ಟೆಸ್ಟ್ | ಕೆನ್ಸಿಂಗ್ ಟನ್ ಓವಲ್, ಬ್ರಿಜ್ ಟೌನ್ |
ಜುಲೈ 6, ಬುಧವಾರ | ಮೂರನೇ ಟೆಸ್ಟ್ ಪಂದ್ಯ | ವಿಂಡ್ಸರ್ ಪಾರ್ಕ್, ರೊಸೆವು |