ಪುಟಗಳು

ಹಾಸನದಲ್ಲಿ ಅರವತ್ತರ ಮಹಿಳೆಗೆ ಹೆಣ್ಣು ಮಗುವಾಯಿತು!

ಹಾಸನ, ಮೇ 22: ಮೊಮ್ಮಕ್ಕಳನ್ನು ಆಡಿಸಬೇಕಾದ 60ರ ಮಹಾತಾಯಿಯೊಬ್ಬರು ಮುದ್ದಾದ ಹೆಣ್ಣು ಮಗುವಿಗೆ ಶನಿವಾರ ಜನ್ಮ ನೀಡಿದ್ದಾರೆ. ಅರಸೀಕೆರೆ ತಾಲೂಕಿನ ರಂಗೇನಹಳ್ಳಿಯ ರಂಗೇಗೌಡರ ಪತ್ನಿ ಚಂದ್ರಮ್ಮ 2.5 ಪೌಂಡ್ ತೂಕದ ಮಗುವನ್ನು ಹಡೆದಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ. 60ರ ಮಹಿಳೆ ಮಗು ಹೆತ್ತಳು ಎಂಬ ಕುತೂಹಲದಿಂದ ಜನ ಒಂದೇ ಸಮನೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ಧಾಂಗುಡಿಯಿಡುತ್ತಿದ್ದಾರೆ.

ಚಂದ್ರಮ್ಮ 15 ವರ್ಷಗಳ ಹಿಂದೆ ರಂಗೇಗೌಡರನ್ನು (58) ವಿವಾಹವಾಗಿದ್ದರು. ಮದುವೆಯಾದ ಮೂರು ವರ್ಷಕ್ಕೆ ಹೆಣ್ಣು ಮಗುವಿನ ತಾಯಿಯಾದರು. ಐದು ವರ್ಷಗಳ ಬಳಿಕ ಮತ್ತೊಂದು ಗಂಡು ಮಗುವೂ ಜನಿಸಿತು. ಇದಾದ ಆರು ವರ್ಷಗಳ ಬಳಿಕ, ಇದೀಗ ತಮ್ಮ 60ನೇ ವಯಸ್ಸಿನಲ್ಲಿ ಚಂದ್ರಮ್ಮ ಮತ್ತೊಮ್ಮೆ ತಾಯಿಯಾದ ಸಂಭ್ರಮ ಅನುಭವಿಸುತ್ತಿದ್ದಾರೆ.

ಹೆರಿಗೆ ನಾರ್ಮಲ್ : ಇಳಿವಯಸ್ಸಿನಲ್ಲಿ ಗರ್ಭವತಿಯಾಗಿದ್ದ ಚಂದ್ರಮ್ಮಗೆ ಸಹಜ ಹೆರಿಗೆಯನ್ನೇ ಮಾಡಿಸುವುದು ಅನಿವಾರ್ಯವಾಗಿತ್ತು. ಇದು ವೈದ್ಯರಿಗೂ ಸವಾಲಿನ ವಿಷಯವಾಗಿತ್ತು. ಏಕೆಂದರೆ ಇಂದಿನ ದಿನಗಳಲ್ಲಿ ಶೇ. 80ಕ್ಕೂ ಹೆಚ್ಚು ಹೆರಿಗೆಗಳು ಆಪರೇಶನ್ ಮೂಲಕವೇ ನಡೆಯುತ್ತಿವೆ. ಸಾಮಾನ್ಯವಾಗಿ 49 ವರ್ಷದ ವರೆಗೆ ಮಹಿಳೆಯರು ಹೆರಬಹುದು. ತದನಂತರ ಮಹಿಳೆ ದೈಹಿಕವಾಗಿ ಬಲಹೀನಳಾಗುತ್ತಾಳೆ