ನವದೆಹಲಿ, ಜೂ 14: ಕಳೆದ ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ 15.34 ಮಿಲಿಯನ್ ಗ್ರಾಹಕರು ದೂರವಾಣಿ ಸಂಪರ್ಕ ಪಡೆದಿದ್ದಾರೆ ಎಂದು ದೂರಸಂಪರ್ಕ ಉದ್ಯಮ ನಿಯಂತ್ರಕ ಟ್ರಾಯ್(TRAI) ತಿಳಿಸಿದೆ. ಇದರಿಂದ ದೇಶದಲ್ಲಿ ಒಟ್ಟು ಮೊಬೈಲ್ ಗ್ರಾಹಕರ ಸಂಖ್ಯೆ 861.48 ಮಿಲಿಯನ್ ಗಳಿಗೇರಿದೆ. ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ 826.93ಮಿಲಿಯನ್ ಗಳಿಗೇರಿದೆ ಎಂದು ಟ್ರಾಯ್ ತಿಳಿಸಿದೆ.
ಪ್ರತೀ ನೂರು ಜನರಿಗೆ(telephones per 100 people- teledensity) ದೂರವಾಣಿ ಸೌಲಭ್ಯ ಹೊಂದಿರುವವರ ಸಂಖ್ಯೆ ಶೇ.72.08 ಕ್ಕೇರಿದೆ. ಆದರೆ ಸಕ್ರಿಯ ಮೊಬೈಲ್ ಗ್ರಾಹಕರ ಸಂಖ್ಯೆ ಏಪ್ರಿಲ್ ನಲ್ಲಿ 583.22ಮಿಲಿಯನ್ ಎಂದು ಟ್ರಾಯ್ ತಿಳಿಸಿದೆ.
ಹೊಸ ಗ್ರಾಹಕರನ್ನು ಹೊಂದುವಲ್ಲಿ ರಿಲಯನ್ಸ್ ಮುಂಚೂಣಿಯಲ್ಲಿದ್ದು ಏಪ್ರಿಲ್ ನಲ್ಲಿ 2.93 ಮಿಲಿಯನ್ ಗ್ರಾಹಕರನ್ನು ಸಂಪಾದಿಸಿದ್ದು ಗ್ರಾಹಕ ಒಟ್ಟು ಸಂಖ್ಯೆ 138.65 ಮಿಲಿಯನ್ ಗಳಿಗೇರಿಸಿಕೊಂಡಿದೆ. ಐಡಿಯಾ ಸೆಲ್ಯುಲಾರ್ 2.45 ಮಿಲಿಯನ್ ಗ್ರಾಹಕರನ್ನು ಸೆಳೆದಿದ್ದು ಗ್ರಾಹಕರ ಒಟ್ಟು ಸಂಖ್ಯೆ 91.95 ಮಿಲಿಯನ್ ಗಳಿಗೇರಿದೆ. ಭಾರ್ತಿ ಏರ್ ಟೆಲ್ 2.41 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದ್ದು, 164.61 ಗ್ರಾಹಕರನ್ನು ಹೊಂದಿದೆ.
ವೊಡಾಫೋನ್ 2.40 ಸೆಳೆದಿದ್ದು, ಒಟ್ಟು 136.97 ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿದೆ. ಏರ್ ಸೆಲ್ 1.10 ಮಿಲಿಯನ್ ಗ್ರಾಹಕರು, ಟಾಟಾ ಟೆಲಿಸರ್ವೀಸಸ್ 1.24 ಮಿಲಿಯನ್ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ.
ಸರ್ಕಾರೀ ಸ್ವಾಮ್ಯದ ಬಿಎಸ್‌ಎನ್‌ಎಲ್ ಮತ್ತು ಎಮ್‌ಟಿಎನ್‌ಎಲ್ ಕ್ರಮವಾಗಿ 0.17 ಮಿಲಿಯ ಹಾಗೂ 367 ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಂಡಿವೆ. ಆದರೆ ತಂತಿ ಸಹಿತ ದೂರವಾಣಿ ಗ್ರಾಹಕರ ಸಂಖ್ಯೆ 34.73 ಮಿಲಿಯನ್ ನಿಂದ 34.55 ಮಿಲಿಯನ್ ಗಳಿಗೆ ಕುಸಿದಿದೆ. ಸರ್ಕಾರೀ ಕಂಪೆನಿಗಳಾದ ಬಿಎಸ್‌ಎನ್‌ಎಲ್ ಹಾಗೂ ಎಮ್‌ಟಿಎನ್‌ಎಲ್ ತಂತಿ ಸಹಿತ ದೂರವಾಣಿ ಮಾರುಕಟ್ಟೆಯಲ್ಲಿ ಶೇ 82.44 ರಷ್ಟು ಪಾಲು ಹೊಂದಿವೆ. ಇದೇ ಅವಧಿಯಲ್ಲಿ ಬ್ರಾಡ್ ಬ್ಯಾಂಡ್ ಗ್ರಾಹಕ ಸಂಖ್ಯೆ 11.87 ಮಿಲಿಯನ್ ನಿಂದ 12.01 ಮಿಲಿಯನ್ ಗಳಿಗೇರಿದೆ