ನ್ಯೂಯಾರ್ಕ್ ಜೂ 13: ಮೈಕ್ರೋಸಾಫ್ಟ್ ಸೆಕ್ಯುರಿಟಿ ಅಪ್ಡೇಟ್ ಮಾಡಿಕೊಳ್ಳಿ ಎನ್ನುತ್ತಾ ಯಾವುದೇ ಸಂದೇಶ ಬಂದರೆ ಎರಡೆರಡು ಬಾರಿ ಪರೀಕ್ಷಿಸಿ, ನಕಲಿ ಆಂಟಿ ವೈರಸ್ ತಂತ್ರಾಂಶವನ್ನು ದುಷ್ಕರ್ಮಿಗಳು ವೆಬ್ ಲೋಕದೊಳಗೆ ಬಿಟ್ಟಿದ್ದಾರೆ. ಯಾವುದೇ ಅಪ್ಡೇಟ್ ಸೂಚನೆ ಬಂದರೆ ಪರೀಕ್ಷಿಸದೆ ಓಕೆ ಬಟನ್ ಒತ್ತಬೇಡಿ ಎಂದು ಇಂಟರ್ ನೆಟ್ ಸುರಕ್ಷತಾ ಸಂಸ್ಥೆ ಸೊಫೋಸ್ ತಿಳಿಸಿದೆ.
ಮೋಝಿಲ್ಲಾ ಫೈರ್ ಫಾಕ್ಸ್ ವೆಬ್ ಬ್ರೌಸರ್ ಬಳಕೆದಾರರನ್ನು ಈ ನಕಲಿ ಆಂಟಿ ವೈರಸ್ ಗುರಿಯಾಗಿಸಿಕೊಂಡಿದೆ. ಮೈಕ್ರೋಸಾಫ್ಟ್ ಸೆಕ್ಯುರಿಟಿ ಸೆಂಟರ್ ನ ಸಂದೇಶವನ್ನು ನಕಲೀಕರಿಸಿ, ಗ್ರಾಹಕರನ್ನು ತನ್ನ ತಂತ್ರಕ್ಕೆ ಸಿಲುಕಿಸುತ್ತಿದೆ.Update your Windows ಎಂಬ ಸಾಮಾನ್ಯ ಸಂದೇಶಕ್ಕೆ ಓಗೊಟ್ಟು ಓಕೆ ಬಟನ್ ಒತ್ತಿದ್ದರೆ ಮುಗಿಯಿತು. ನಕಲಿ ಆಂಟಿ ವೈರಸ್ ತನ್ನ ಕೀಟಲೆ ತಂತ್ರಾಂಶವನ್ನು ನಿಮ್ಮ ಗಣಕದಲ್ಲಿ ಸ್ಥಾಪಿಸಿಬಿಡುತ್ತದೆ ಎಮ್ದು ಸೊಫೊಸ್ ಎಚ್ಚರಿಸಿದೆ.

Read: In English
ಒಮ್ಮೆ ನೀವು agree ಎಂದು ಒತ್ತಿದರೆ KB453396-ENU.zip ಎಂಬ ಫೈಲ್ ಡೌನ್ ಲೋಡ್ ಆಗುತ್ತದೆ. ಇದು ಹಾನಿಕಾರಕ ಕ್ರಿಮಿಯನ್ನು ಒಳಗೊಂಡಿದ್ದು, ನಿಮ್ಮ ಕಂಪ್ಯೂಟರ್ ಫೈಲ್ ಗಳು ನಾಶಗೊಳಿಸುತ್ತದೆ. ಇದಲ್ಲದೆ ಕೆಲವು ಬಳಕೆದಾರರಿಗೆ ಮೈಕ್ರೋಸಾಫ್ಟ್ ನ ಸೆಕ್ಯುರಿಟಿ ಅಸ್ಸುರೆಸ್ಸ್ ನಿರ್ದೇಶಕ ಸ್ಟೀವ್ ಲಿಪ್ನರ್ ನಿಂದ ಸುರಕ್ಷತೆ ಬಗ್ಗೆ ಇಮೇಲ್ ಬಂದಿದ್ದು ಇದು ಕೂಡಾ ನಕಲಿಯಾಗಿದೆ. ಮೈಕ್ರೋಸಾಫ್ಟ್ ಸಂಸ್ಥೆ ಈ ರೀತಿ ಯಾವುದೇ ವೈಯಕ್ತಿಕ ಇಮೇಲ್ ಕಳಿಸಿಲ್ಲ ಎಂದು ಸೊಫೋಸ್ ಹೇಳಿದೆ.ಹ್ಯಾಕರ್ ಗಳು ಇಮೇಲ್ ನಲ್ಲಿ ಕ್ರಿಮಿ(worm)ಯನ್ನು ಸೇರಿಸಿ, ಎಲ್ಲರ ಮೇಲ್ ಬಾಕ್ಸ್ ಗಳನ್ನು ಸ್ಪ್ಯಾಮ್ ಮಾಡುತ್ತಿದ್ದಾರೆ. ಇದಕ್ಕೆ ಮೈಕ್ರೋಸಾಫ್ಟ್ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಲಾಗುತ್ತಿದೆ. ಒಂದಿಷ್ಟು ಸಂಶಯ ಬರದಂತೆ ಮೈಕ್ರೋಸಾಫ್ಟ್ ಲೆಟರ್ ಹೆಡ್ ಮೂಲಕ ಈ ಇಮೇಲ್ ಗಳು ಹರಿದಾಡುತ್ತಿದೆ. ಸೈಬರ್ ಕ್ರಿಮಿನಲ್ ಗಳು ತುಂಬಾ ಚತುರತೆಯಿಂದ ಗ್ರಾಹಕರನ್ನು ಬಲೆಗೆ ಕೆಡವುತ್ತಿದ್ದಾರೆ ಎಂದು ಸೊಫೊಸ್ ನ ಹಿರಿಯ ತಂತ್ರಜ್ಞಾನ ಸಲಹೆಗಾರ ಗ್ರಹಾಮ್ ಕ್ಲೂಲೆ ಹೇಳಿದ್ದಾರೆ. ಒಟ್ಟಿನಲ್ಲಿ, ವಿಂಡೋಸ್ ಗೆ ಅಂಟಿದ ದೋಷದ ದೆಶೆಯಿಂದ ಜನ ಫೈರ್ ಫಾಕ್ಸ್ ಅನ್ನು ಬೈಯುವಂತಾಗುತ್ತಿದೆ.