ಗಟ್ಟಿಮುಟ್ಟಾದ ಶರೀರವನ್ನು ನೋಡಿದಾಗ ಅದು ಜಿಮ್ ಬಾಡಿ ಎಂದು ಗೊತ್ತಾಗುತ್ತೆ. ದೈಹಿಕವಾಗಿ ಕಠಿಣ ಪರಿಶ್ರಮವನ್ನು ಹೊಂದಿರುವವರು ಕೂಡ ಗಟ್ಟಿಮುಟ್ಟಾದ ಶರೀರವನ್ನು ಹೊಂದಿರುತ್ತಾರೆ.
ಗಟ್ಟಿಮುಟ್ಟಾದ ಶರೀರಕ್ಕೆ ಜಿಮ್ ಮಾತ್ರ ಸಾಲದು ಅದಕ್ಕೆ ತಕ್ಕದಾದ ಆಹಾರಕ್ರಮ ಹೊಂದಿರಬೇಕು. ಸ್ನಾಯುಗಳು ಬಲವಾಗಲು
ಈ ಕೆಳಗಿನ ಪೋಷಕಾಂಶವಿರುವ ಅಹಾರವನ್ನು ಕಡ್ಡಾಯವಾಗಿ ಸೇವಿಸಬೇಕು.
1. ಪ್ರೊಟೀನ್: ಅಮೈನೊ ಅಸಿಡ್ ಇರುವ ಆಹಾರದಲ್ಲಿ ಹೆಚ್ಚು ಪ್ರೊಟೀನ್ ಅಂಶವಿರುತ್ತದೆ. ಇದು ದೇಹದ ಬೆಳವಣಿಗೆಗೆ ಮತ್ತು ದೇಹದ ಭಾಗಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಬೀನ್ಸ್, ಬಾದಾಮಿ, ಪಾಲಾಕ್ ಸೊಪ್ಪು, ಮೀನು, ಮಾಂಸ, ಕಾರ್ಬೋಹೈಡ್ರೇಟ್ ಇರುವ ಆಹಾರಗಳಲ್ಲಿ ಅಧಿಕ ಪ್ರೊಟೀನ್ ಇರುತ್ತದೆ.
2. ವಿಟಮಿನ್: ಖನಿಜಾಂಶವಿರುವ ಆಹಾರಗಳ ಸೇವನೆ ದೇಹದಲ್ಲಿ ಸ್ನಾಯುಗಳನ್ನು ಬಲಪಡಿಸುತ್ತದೆ. ಮೊಟ್ಟೆ. ಅಣಬೆ, ಈರುಳ್ಳಿ, ಮಾಂಸ, ಟರ್ಕಿ ಕೋಳಿಯ ಲಿವರ್, ಸಿಹಿಗೆಣಸು, ಪಾಲಾಕ್, ಬ್ರೊಕೊಲಿಗಳಲ್ಲಿರುವ ವಿಟಮಿನ್ ಗಳು ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.
3. ಕಾರ್ಬೋಹೈಡ್ರೇಟ್: ಸರಿಯಾದ ಪ್ರಮಾಣವನ್ನು ತೂಕವನ್ನು ಹೊಂದಿರಬೇಕೆಂದರೆ ಕಾರ್ಬೋಹೈಡ್ರೇಟ್ ಮತ್ತು ಒಳ್ಳೆಯ ಕೊಬ್ಬಿನಂಶ (ಒಮೆಗಾ ಕೊಬ್ಬು) ಆಹಾರದಲ್ಲಿ ಇರಬೇಕು. ಒಮೆಗಾ3 ಕೊಬ್ಬಿನಂಶ ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ. ಇದು ದೇಹದವನ್ನು ಫಿಟ್ ಆಗಿಡಲು ಸಹಾಯ ಮಾಡುತ್ತದೆ. ಅಕ್ಕಿ, ಬಾರ್ಲಿ, ಜೋಳ, ಓಟ್ ಮೀಲ್, ಪೈನಾಪಲ್, ಸ್ಟ್ರಾಬರಿ, ಕರ್ಜೂರಗಳಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಇರುತ್ತದೆ.
4. ಗ್ಲುಟಾಮೈನ್: ಎಲುಬು ಮತ್ತು ಸ್ನಾಯುಗಳನ್ನು ಬಲವಾಗಿಡಲು ಗ್ಲುಟಾಮೈನ್ ಅವಶ್ಯಕ. ಗ್ಲುಟಾಮೈನ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಈ ಗ್ಲುಟಾಮಿನ್ ಎಲೆಕೋಸು, ಹಾಲಿನ ಉತ್ಪನ್ನಗಳಲ್ಲಿ, ಚಿಕ್ಕನ್, ಹಂದಿ ಮಾಂಸ ಮತ್ತು ಮೀನಿನಲ್ಲಿ ಹೆಚ್ಚಾಗಿ ಇರುತ್ತದೆ.
ಇಷ್ಟಲ್ಲದೆ ದಿನವೂ ಒಂದು ಲೀಟರ್ ನೀರನ್ನು ಕುಡಿಯಬೇಕು, ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಹೀಗೆ ಮಾಡಿದರೆ ನೀವು ಬಯಸಿದಂತಹ ಸದೃಢವಾದ ಮೈಕಟ್ಟನ್ನು ಪಡೆಯಬಹುದು.