ಪುಟಗಳು

ಕಾಸರವಳ್ಳಿ ಕೂರ್ಮಾವತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ


Girish Kasaravalli
 
59ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳು ಬುಧವಾರ(ಮಾ.7) ಪ್ರಕಟಿಸಿದ್ದಾರೆ.

ಖ್ಯಾತ ಗಿರೀಶ್ ಕಾಸರವಳ್ಳಿ ಅವರ ಹೊಚ್ಚ ಹೊಸ ಚಲನಚಿತ್ರ 'ಕೂರ್ಮಾವತಾರ'ಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ.

ಡರ್ಟಿ ಪಿಕ್ಚರ್ ನ ಅಭಿನಯಕ್ಕಾಗಿ ನಟಿ ವಿದ್ಯಾಬಾಲನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಉಳಿದಂತೆ ಪಟ್ಟಿ ಹೀಗಿದೆ.

* ಶ್ರೇಷ್ಠ ನಟ-ಗಿರೀಶ್ ಕುಲಕರ್ಣಿ-ಚಿತ್ರ ಡೆಯೊಲ್(ಮರಾಠಿ)
* ಶ್ರೇಷ್ಠ ಬಾಲ ಕಲಾವಿದ-ಪಾರ್ಥೋ ಗುಪ್ತೆ-ಸ್ಟ್ಯಾನಿ ಕ ಡಬ್ಬಾ ಹಾಗೂ ಚಿಲ್ಲರ್ ಪಾರ್ಟಿ ಚಿತ್ರದ ಮಕ್ಕಳು
* ಅತ್ಯುತ್ತಮ ಚಿತ್ರ: ಡೆಯೊಲ್ ಹಾಗೂ ಬ್ಯಾರಿ
* ಅತ್ಯುತ್ತಮ ಮಕ್ಕಳ ಚಿತ್ರ: ಚಿಲ್ಲರ್ ಪಾರ್ಟಿ
* ಅತ್ಯುತ್ತಮ ಚಿತ್ರಕಥೆ: ವಿಕಾಸ್ ಬೆಹಲ್ ಹಾಗೂ ನಿತೇಶ್ ತಿವಾರಿ(ಚಿಲ್ಲರ್ ಪಾರ್ಟಿ)
* ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ರಾ ಒನ್
* ಅತ್ಯುತ್ತಮ ಸಂಭಾಷಣೆ: ಗಿರೀಶ್ ಕುಲಕರ್ಣಿ (ಡೆಯೋಲ್)
* ಅತ್ಯುತ್ತಮ ಸಂಕಲನ: ಪ್ರವೀಣ್ ಕೆಎಲ್ ಹಾಗೂ ಎನ್ ಬಿ ಶ್ರೀಕಾಂತ್ (ಅರಣ್ಯ ಕಾಂಡಂ)

* ಅತ್ಯುತ್ತಮ ಬೆಂಗಾಳಿ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಅತ್ಯುತ್ತಮ ಡೊಗ್ರಿ ಚಿತ್ರ: ದಿಲೆಶ್ ಬಸಿಯಾ ಕೊಯಿ
* ಅತ್ಯುತ್ತಮ ಹಿಂದಿ ಚಿತ್ರ: ಐ ಯಾಮ್
* ಅತ್ಯುತ್ತಮ ಕನ್ನಡ ಚಿತ್ರ: ಕೂರ್ಮಾವತಾರ
* ಅತ್ಯುತ್ತಮ ಮಣಿಪುರಿ ಚಿತ್ರ: ಫಿಜಿಗೀ ಮಣಿ
* ಅತ್ಯುತ್ತಮ ತಮಿಳು ಚಿತ್ರ: ವಾಗೈ ಸೂಡಾ ವಾ
* ಅತ್ಯುತ್ತಮ ಪಂಜಾಬಿ ಚಿತ್ರ: ಅನ್ನೆ ಗೊಡೆ ಡ ಡಾನ್

* ಶ್ರೇಷ್ಠ ನೃತ್ಯ ಸಂಯೋಜಕ: ಬಾಸ್ಕೋ ಹಾಗೂ ಸೀಸರ್ 'ಸೆನೊರೀಟಾ' ಹಾಡು 'ಜಿಂದಗಿ ನಾ ಮಿಲೆಗಿ ದೊಬಾರಾ' ಚಿತ್ರ
* ಜ್ಯೂರಿ ವಿಶೇಷ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಶ್ರೇಷ್ಠ ಗೀತ ಸಾಹಿತ್ಯ: ಅಮಿತಾಬ್ ಭಟ್ಟಾಚಾರ್ಯ 'ಅಗರ್ ಜಿಂದಗಿ' ಐಯಾಮ್ ಚಿತ್ರ
* ಶ್ರೇಷ್ಠ ಸಂಗೀತ: ನೀಲ್ ದತ್ತ 'ರಂಜೊನಾ..'

* ಅತ್ಯುತ್ತಮ ಪ್ರಸಾಧನ: ವಿಕ್ರಮ ಗಾಯಕ್ವಾಡ್ 'ಬಾಲ್ ಗಂಧರ್ವ' ಹಾಗೂ 'ದ ಡರ್ಟಿ ಪಿಕ್ಚರ್'
* ಅತ್ಯುತ್ತಮ ಕಾಸ್ಟ್ಯೂಮ್ : ನೀತ ಲುಲ್ಲಾ 'ಬಾಲ್ ಗಂಧರ್ವ' ಮತ್ತು ನಿಹಾರಿಕಾ ಖಾನ್ 'ದ ಡರ್ಟಿ ಪಿಕ್ಚರ್'

* ಅತ್ಯುತ್ತಮ ಸಹ ಕಲಾವಿದ: ಅಪ್ಪು ಕುಟ್ಟಿ
* ಶ್ರೇಷ್ಠ ಹಿನ್ನೆಲೆ ಗಾಯಕಿ: ರೂಪಾ ಗಂಗೂಲಿ


ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ರೋಹಿಣಿ ಹಟ್ಟಂಗಡಿ ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ.  ಪ್ರಶಸ್ತಿ ಪ್ರದಾನ ಸಮಾರಂಭ ಮೇ.3ರಂದು ನವದೆಹಲಿಯಲ್ಲಿ ಜರುಗಲಿದೆ.