ಪುಟಗಳು

ಫ್ರಿಜ್ ಶುದ್ಧತೆಗೆ ಬಳಸಿ ಈ ಸರಳ ವಿಧಾನ



Cleaning Tips For Fridge
ಫ್ರಿಜ್ ನಲ್ಲಿ ಹಣ್ಣುಗಳನ್ನು ಅಥವಾ ತರಕಾರಿಗಳನ್ನು ತುಂಬಾ ದಿನಗಳವರೆಗೆ ಇಟ್ಟರೆ ಅದು ಹಾಳಾಗಿ ಕೆಟ್ಟವಾಸನೆ ಬೀರಲಾರಂಭಿಸುತ್ತದೆ. ಫ್ರಿಜ್ ಅಡುಗೆ ಮನೆಯಲ್ಲಿದ್ದರೆ ಅ ಕೋಣೆ ತುಂಬಾ ಕೆಟ್ಟ ವಾಸನೆ ಬಂದು ನಿಲ್ಲುವುದು ಕಷ್ಟವಾಗುತ್ತದೆ. ಈ ರೀತಿ ಉಂಟಾದಾಗ ಫ್ರಿಜ್ ನಿಂದ ಕೆಟ್ಟವಾಸನೆ ಹೋಗಲಾಡಿಸುವ ಸರಳ ವಿಧಾನ ನೋಡಿ ಇಲ್ಲಿದೆ.

1. ಫ್ರಿಜ್ ನಲ್ಲಿರುವ ಕೊಳೆತ ಹಣ್ಣು ತರಕಾರಿಗಳನ್ನು ಬಿಸಾಡಬೇಕು. ನಂತರ ಶೆಲ್ಫ್ ಮತ್ತು ಡ್ರಾಯರ್ ಗಳನ್ನು ಹೊರ ತೆಗೆದು ಬಿಸಿ ನೀರಿನಲ್ಲಿ ಸ್ವಲ್ಪ ಸೋಪು ಹಾಕಿ ತೊಳೆಯಬೇಕು. ಗ್ಲಾಸ್ ಶೆಲ್ಫ್ ಗಳನ್ನು ಹೊರ ತೆಗೆದು ಆರಿದ ಮೇಲೆ ತೊಳೆದು ಒಣಗಿಸಬೇಕು. ಫ್ರಿಜ್ ನಿಂದ ಹೊರ ತೆಗೆದ ತಕ್ಷಣ ತೊಳೆದರೆ ಗಾಜುನಲ್ಲಿ ಬಿರುಕು ಬೀಳಬಹುದು.

2. ಅಂಟಿರುವ ಕೊಳೆಯನ್ನು ತೆಗೆಯಲು ಸ್ಕ್ರಬ್ಬರ್ (ಚೇರಿ) ಹಾಕಿ ಉಜ್ಜಿ. ನಂತರ ಕಾಟನ್ ಬಟ್ಟೆಯನ್ನು ನೆನೆಸಿ ಉಜ್ಜಬೇಕು. ಶುದ್ಧವಾದ ಮೇಲೆ ಒಣ ಬಟ್ಟೆಯಿಂದ ಒರೆಸಿ ಇಡಬೇಕು.

3. ಫ್ರಿಜ್ ಒಳಗಡೆ ಕ್ಲೀನ್ ಮಾಡಲು ಸಹ ಈ ವಿಧಾನ ಬಳಸಿ.

4. ಶೆಲ್ಫ್ , ಡ್ರಾಯರ್ ಮತ್ತು ಫ್ರಿಜ್ ಒಳಗಡೆ ಒಣ ಬಟ್ಟೆಯಿಂದ ಒರೆಸಿ ಸಂಪೂರ್ಣ ಒಣಗಿದ ಮೇಲೆ ಅವುಗಳನ್ನು ಮೊದಲಿದ್ದ ಜಾಗದಲ್ಲಿ ಇಡಬೇಕು. ಈ ರೀತಿ ತಿಂಗಳಿಗೊಮ್ಮೆ ಮಾಡುತ್ತಿದ್ದರೆ ಫ್ರಿಜ್ ಕೆಟ್ಟ ವಾಸನೆ ಬೀರುವುದಿಲ್ಲ.