ಪುಟಗಳು

ಪರಶುರಾಂಪುರದ ಹಂಪಯ್ಯನ ಮಠ

       
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರ ಗ್ರಾಮದಿಂದ ಕೊರ್ಲಕುಂಟೆ ಗ್ರಾಮದ ಮಾರ್ಗವಾಗಿ ಸುಮಾರು ಅರ್ಧ ಕಿ.ಮೀ. ದೂರದಲ್ಲಿರುವ ಕೋಟೆಕೆರೆ ಜಮೀನೊಂದರಲ್ಲಿ ಗತಕಾಲ ವೈಭವವನ್ನು ಸಾರುವ, ಈಗ ಹಾಳು ಬಿದ್ದಿರುವ ಮಠವೊಂದು ಕಣ್ಣಿಗೆ ಕಾಣುತ್ತದೆ. ಇದು ಚೋಳಕಾಲದ ಇತಿಹಾಸವನ್ನು ಸಾರುತ್ತದೆ.
         ಕೋಟೆಕೆರೆಯ ಜಿ.ಶಾಂತಪ್ಪಗೌಡರ ಜಮೀನಿನಲ್ಲಿ ಹಂಪಯ್ಯ ಎಂಬ ಸಾಧು ಕಟ್ಟಿಸಿದ ಮಠ ಎಂಬುದು ಆಧಾರವಿಲ್ಲದ ಸತ್ಯ. ಈ ಮಠವು 13 ಕಂಬಗಳಿಂದ ರಚಿಸಲ್ಪಟ್ಟಿದ್ದು, ಕಂಬಗಳ ನಾಲ್ಕು ಬದಿಯಲ್ಲಿ ವಿವಿಧ ಬಗೆಯ ಶಿಲ್ಪಕೃತಿಗಳನ್ನು ಕೆತ್ತಲಾಗಿದೆ. ಬಸವಣ್ಣ, ಹಂಪಯ್ಯ, ಲಕ್ಷ್ಮಿ, ವ್ಯಾಸ, ವೀರಭದ್ರಸ್ವಾಮಿ, ನಟರಾಜ, ಮೂರು ತಲೆ ಹಸು ಲಿಂಗಕ್ಕೆ ಹಾಲುಣಿಸುತ್ತಿರುವುದು, ಪೂರ್ಣಚಂದ್ರ, ಚಕ್ರ, ಆನೆ, ಗಣಪತಿ, ಕಾಮಧೇನು, ಹೀಗೆ ವಿವಿಧ ಭಂಗಿಗಳನ್ನು ಕಂಬಗಳಲ್ಲಿ ಚಿತ್ರಿಸಲಾಗಿದೆ. ಈ ಮಠದ ದಕ್ಷಿಣ ಭಾಗದಲ್ಲಿ 16 ಕಂಬಗಳಿದ್ದು, ಅದರಲ್ಲಿ 3 ಕಂಬಗಳು ಬಿದ್ದುಹೋಗಿದ್ದು, ಮಂಟಪದ ಸುತ್ತ ಹಾಗೂ ಒಳಗೆ ಅವನತಿಯ ಅಂಚಿನಲ್ಲಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಗಮನಹರಿಸುವುದು ಅವಶ್ಯವಾಗಿದೆ.
         ಈ ಮಠದಿಂದ ಸ್ವಲ್ಪ ಹಿಂದೆ ವೀರಭದ್ರಸ್ವಾಮಿ ದೇಗುಲವೊಂದು ಕಂಡು ಬರುತ್ತದೆ. ಈ ದೇಗುಲವೂ ಸಹ ಅದಲದಿು, ಅದರಲ್ಲಿಯೂ ಸಹ ಶಿಲ್ಪಕೃತಿಗಳು ಕಂಡು ಬರುತ್ತದೆ. ಅಲ್ಲದೇ ಸುತ್ತಮುತ್ತಲೂ ಶಾಸನಗಳು, ವೀರಗಲ್ಲುಗಳು ಕಾಣಸಿಗುತ್ತದೆ. ಗರ್ಭಗುಡಿಯ ಮುಂಭಾಗ ಮೇಲೆ ಒಂದು ಹಾವು ಚಂದ್ರನನ್ನು ನುಂಗುವ ಕಲಾಕೃತಿಯನ್ನು ನಯನ ಮನೋಹರವಾಗಿ ಕೆತ್ತಿಸಲಾಗಿದೆ. ಇತಿಹಾಸ ಸಂರಕ್ಷಣೆ ನಮ್ಮ ಕೈಯಲ್ಲಿಯೇ ಇದೆಯಾದರೆ, ಇಂತಹವುಗಳನ್ನು ನಾವು ಏಕೆ ಸಂರಕ್ಷಿಸಬಾರದು?