ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವ
ಶ್ರೀ ಮಣ್ಣೆಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ
ಶ್ರೀ ರತ್ನಪುರಿ ಸೋಮನಾಥ ಕೃಪಾ ಪೋಷಿತ ನಾಟಕ ಮಂಡಳಿಯ ವತಿಯಿಂದ
ಶ್ರೀ ಕೃಷ್ಣ ಸಂಧಾನ ಅಥವಾ ಕುರುಕ್ಷೇತ್ರ
ಎಂಬ ಪೌರಾಣಿಕ ನಾಟಕವನ್ನು ಅಭಿನಯಿಸುತ್ತಲಿದ್ದೇವೆ.
ಕಲಾಭಿಮಾನಿಗಳಾದ ತಾವುಗಳು ಹೆಚ್ಚಿನ ಜನಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂಬುದಾಗಿ ಸವಿನಯ ಪ್ರಾರ್ಥನೆ.
ದಿನಾಂಕ: ೧೩.೦೪.೨೦೧೨
ಸ್ಥಳ:ಶ್ರೀ ಮಣ್ಣೆಮ್ಮ ದೇವಿ ರಥೋತ್ಸವ ಬೀದಿ ಮಣ್ಣೆ.
ಹುರ್ರೆ, ಆದಾಯ ತೆರಿಗೆ ಮಿತಿ 2 ಲಕ್ಷ ರು.ಗೆ ಏರಿಕೆ
ನವದೆಹಲಿ, ಮಾ. 16 : ದೇಶದ 85 ಲಕ್ಷ ಸಂಬಳದಾರರಲ್ಲಿ ನಗು ಅರಳುವಂತೆ ಮಾಡಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು, 2012-13ನೇ ಸಾಲಿನ ಬಜೆಟ್ ಮಂಡನೆಯಲ್ಲಿ, ನಿರೀಕ್ಷೆಯಂತೆ ಆದಾಯ ತೆರಿಗೆ ಮಿತಿಯನ್ನು 1.8 ಲಕ್ಷ ರು.ನಿಂದ 2 ಲಕ್ಷ ರು.ಗೆ ಏರಿಸಿದ್ದಾರೆ. ಸಂಸದೀಯ ಸ್ಥಾಯಿ ಸಮಿತಿ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 3 ಲಕ್ಷ ರು.ಗೆ ಏರಿಸಬೇಕೆಂದು ಶಿಫಾರಸು ಮಾಡಿತ್ತು.
ಇದರ ಪ್ರಕಾರ, 2 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಆದಾಯ ತೆರಿಗೆ ಕಟ್ಟಬೇಕಾಗಿಲ್ಲ. 2ರಿಂದ 5 ಲಕ್ಷ ರು. ಸಂಬಳ ಪಡೆಯುವವರು ಶೇ.10ರಷ್ಟು ತೆರಿಗೆ ಕಟ್ಟಬೇಕು. 5 ಲಕ್ಷ ರು.ನಿಂದ 10 ಲಕ್ಷ ರು. ಸಂಬಳ ಗಳಿಸುವವರು ಶೇ.20ರಷ್ಟು ಮತ್ತು 10 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುವವರು ಶೇ.30ರಷ್ಟು ಸಂಬಳ ಪಡೆಯಬೇಕು.
ಕಳೆದ ಮುಂಗಡ ಪತ್ರದಲ್ಲಿ ಶೇ.20ರಷ್ಟು ತೆರಿಗೆ ಕಟ್ಟಬೇಕಾದವರ ಆದಾಯ ಮಿತಿಯನ್ನು 8 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಈ ಬಾರಿ ಆ ವರ್ಗದವರಿಗೆ ಭರ್ತಿ 2 ಲಕ್ಷ ರು. ಏರಿಕೆ ದೊರೆತಿದೆ. ಅಂದರೆ, ಕಳೆದ ಬಾರಿ 8 ಲಕ್ಷಕ್ಕಿಂತ ಹೆಚ್ಚಿಗೆ ಆದಾಯವಿದ್ದ ನೌಕರರು ಶೇ.20ರಷ್ಟು ತೆರಿಗೆ ಕಟ್ಟಬೇಕಾಗಿತ್ತು. ಆದರೆ, ಈ ಬಾರಿಯಿಂದ 10 ಲಕ್ಷ ರು.ಗಿಂತ ಆದಾಯ ಹೆಚ್ಚಿರುವವರು ಶೇ.20ರಷ್ಟು ತೆರಿಗೆ ಕಟ್ಟಬೇಕು.
ಆದಾಯ ತೆರಿಗೆ ಮಿತಿಯನ್ನು 2 ಲಕ್ಷ ರು.ಗೆ ಏರಿಸಿದ್ದಾರಾದರೂ, ಇದು ಮಹಿಳಾ ನೌಕರರಿಗೆ ಮತ್ತು ಹಿರಿಯ ನಾಗರಿಕರಿಗೂ ಅನ್ವಯವಾಗುತ್ತದಾ ಎಂಬುದನ್ನು ಪ್ರಣಬ್ ಮುಖರ್ಜಿ ಪ್ರಸ್ತಾಪಿಸಿಲ್ಲ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, 5 ಲಕ್ಷ ರು.ವರೆಗೆ ಸಂಬಳ ಪಡೆಯುವವರು ಯಾವುದೇ ಇನ್ಕಂ ಟ್ಯಾಕ್ಸ್ ರಿಟರ್ನ್ ಫಾರಂ ತುಂಬಬೇಕಾಗಿಲ್ಲ.
ರಿಟರ್ನ್ ಫೈಲ್ ಮಾಡುವುದು ಕ್ಷೇಮ : 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವವರು ರಿಟರ್ನ್ ಫೈಲ್ ಮಾಡಬೇಕಾಗಿಲ್ಲವಾದರೂ, ನಮ್ಮ ಹೂಡಿಕೆಯ ಆಧಾರದ ಮೇಲೆ ರಿಫಂಡ್ ಬರಬೇಕಿದ್ದರೆ ಅಥವಾ ಯಾವುದೇ ಸಾಲ ಪಡೆಯಲು ಯತ್ನಿಸುತ್ತಿದ್ದರೆ ಅಂಥವರು ಇನ್ಕಂ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡುವುದು ಒಳಿತು.
ಬಜೆಟ್: ಯಾವುದು ಅಗ್ಗ, ಯಾವುದು ತುಟ್ಟಿ?
ನವದೆಹಲಿ, ಮಾ.16: ಬಜೆಟ್ ನಂತರ ಜನ ಸಾಮಾನ್ಯರು ಕೇಳುವ ಮೊಟ್ಟ ಮೊದಲ ಪ್ರಶ್ನೆ ಯಾವ ವಸ್ತು ಬೆಲೆ ಏರಿದೆ? ಯಾವುದು ಕಡಿಮೆಯಾಗಿದೆ?.
ಐಷಾರಾಮಿ ವಸ್ತು, ಪ್ರಯಾಣ, ವಾಸ್ತವ್ಯದ ಮೇಲೆ ತೆರಿಗೆ ಹೆಚ್ಚಿಸಿ ದುಬಾರಿಯಾಗಿಸಿರುವ ಪ್ರಣಬ್, ದೈನಂದಿನ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ. ಈ ಮೂಲಕ ಮಧ್ಯಮ ವರ್ಗದ ಜನ ಆಶೋತ್ತರಕ್ಕೆ ಅನುಗುಣವಾಗಿ ಬಜೆಟ್ ನಲ್ಲಿ ಏರಿಕೆ, ಇಳಿಕೆ ಮಾಡಲಾಗಿದೆ.
ತುಟ್ಟಿ:* ಚಿನ್ನ, ಸಿಗರೇಟ್, ಮದ್ಯ, ಸುಗಂಧ ದ್ರವ್ಯ, ವಜ್ರ, ಆಮದು ಸೈಕಲ್, ಕಂಪ್ಯೂಟರ್ ತುಟ್ಟಿ.
* ಬೈಸಿಕಲ್ ಬೆಲೆ ಏರಿಕೆ. ವಿದೇಶಿ ಸೈಕಲ್ ತೆರಿಗೆ ಶೇ 10 ರಿಂದ ಶೇ. 30ಕ್ಕೆ ಏರಿಕೆ.
* ವಿಮಾನಯಾನ, ಹೋಟೆಲ್, ಕಾರು, ಟಿವಿ, ಎಸಿ, ಫ್ರೀಡ್ಜ್ ಹಾಗೂ ನಗರವಾಸಿಗಳ ಸೌಲಭ್ಯಗಳು ತುಟ್ಟಿ.
* ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ, ಬ್ರಾಂಡೆಡ್ ಬಟ್ಟೆ ತುಟ್ಟಿ.
* ದೊಡ್ಡ ಕಾರುಗಳ ತೆರಿಗೆ ಶೇ 22 ರಿಂದ ಶೇ 24ಕ್ಕೆ ಏರಿಕೆ.
* ವಾಹನ ಆಮದು ತೆರಿಗೆ ಶೇ. 50 ರಿಂದ 75ಕ್ಕೆ ಏರಿದೆ.
* ಬ್ಯಾಂಕಿಂಗ್ ಸೇವೆ ತುಟ್ಟಿ.
* ಚಿನ್ನದ ಗ್ರಾಹಕ ತೆರಿಗೆ ಶೇ 2 ರಿಂದ ಶೇ 4ಕ್ಕೆ ಏರಿಕೆ.
ಅಗ್ಗ:
* ಕ್ಯಾನ್ಸರ್, ಎಚ್ ಐವಿ ಔಷಧಿಗಳು ಬೆಲೆ ಇಳಿಕೆ.
* ಐಯೋಡಿನ್ ಯುಕ್ತ ಉಪ್ಪು, ಬೆಂಕಿಪೆಟ್ಟಿಗೆ, ಸೋಯಾ ಉತ್ಪನ್ನಗಳು ಅಗ್ಗ.
* ಸೌರ ಶಕ್ತಿ ದೀಪ, ಎಲ್ ಇಡಿ ಬಲ್ಬ್, ಸಿಎಫ್ ಎಲ್ ಅಗ್ಗ.
* ಸೋಲಾರ್ ಉಪಕರಣ, ಸಾಬೂನು, ಎಲ್ ಸಿಡಿ, ಎಲ್ ಇಡಿ ಟಿವಿ ಅಗ್ಗ
April 2012, SSLC Examination Dates
SSLC Examination April 2012 | ||||
Date and Day of Examination | Subject | Sub Code | Timings | Duration |
First Language | ||||
02-04-2012 Monday | Kannada Telugu Hindi Marathi Tamil Urdu English Sanskrit | 01 04 06 08 10 12 14 16 | 10:30-13:45 Hours | 3 Hours 15 Minutes |
Core Subject | ||||
03-04-2012 Tuesday | * Indian Economics | 92 | 10:30-13:45 Hours | 3 Hours 15 Minutes |
# Elements of Engineering | 71 | 10:30-13:15 Hours | 2 Hours 45 Minutes | |
# Engineering Drawing | 72 | 14:30-17:45 Hours | 3 Hours 15 Minutes | |
# Elements of Electronic Engineering | 73 | 10:30-13:45 Hours | 3 Hours 15 Minutes | |
# Elements of Computer Science | 74 | 10:30-13:45 Hours | 3 Hours 15 Minutes | |
05-04-2012 Thursday | * Science | 83 | 10:30-13:45 Hours | 3 Hours 15 Minutes |
# Indian Political Science and Urban Policy | 93 | 10:30-13:15 Hours | 2 Hours 45 Minutes | |
# Carnatic and Hindustani Music | 94 | 14:30-17:45 Hours | 3 Hours 15 Minutes | |
Core Subject | ||||
09-04-2012 Monday | Mathematics Indian Social Studies | 81 91 | 10:30-13:45 Hours | 3 Hours 15 Minutes |
Second Language | ||||
11.04.2012 Wednesday | English Kannada | 31 33 | 10:30-13:15 Hours | 2 Hours 45 Minutes |
Third Language | ||||
13-04-2012 Friday | Hindi Kannada English Arabic Parsian Urdu Sanskrit Konkani | 61 62 63 64 65 66 67 68 | 10:30-13:15 Hours | 2 Hours 45 Minutes |
16-04-2012 Monday | Social Science | 85 | 10:30-13:45 Hours | 3 Hours 15 Minutes |
# 71,72,73 and 74 subjects are applicable only for Junior Technical School Students. | ||||
# On XXX, practical and oral exams will be conducted in their respective centres. | ||||
* Only for blind and learning deficienct students. |
ಮತ್ತೇರಿಸುವ ಮುತ್ತಿನ ಸುತ್ತ ತಮಾಷೆಯ ಸಂಗತಿಗಳು
ಮತ್ತೇರಿಸುವ ಮುತ್ತನ್ನು ಗಂಡುಹೆಣ್ಣು ಇಂದು ನಿನ್ನೆ ಕಂಡುಕೊಂಡ ಸಂಗತಿಯಲ್ಲ. ಆಡಂ ಮತ್ತು ಈವ್ ಒಬ್ಬರಿಗೊಬ್ಬರು ಆಕರ್ಷಿತರಾದ ಕ್ಷಣದಿಂದ ಮುತ್ತು ಜಾಗತಿಕವಾಗಿ ಜಾರಿಯಲ್ಲಿದೆ. ಪ್ರೀತಿಯನ್ನು ತೋರ್ಪಡಿಸಿಕೊಳ್ಳಲು ಗಂಡುಹೆಣ್ಣು ಕಂಡುಕೊಂಡ ಅತ್ಯಂತ ಸಹಜವಾದ ಕ್ರಿಯೆ ಚುಂಬನ. ಚುಂಬನದ ಜೊತೆ ಇನ್ನೂ ಅನೇಕ ಸಂಗತಿಗಳು ತಳಕುಹಾಕಿಕೊಂಡಿವೆ.
1. ಪ್ಯಾಷನೇಟ್ ಆಗಿ ಒಂದು ನಿಮಿಷಗಳ ಕಾಲ ಗಂಡು ಹೆಣ್ಣಿನ ಅಧರಅಧರಗಳು ಕೂಡಿದರೆ 26 ಕ್ಯಾಲೋರಿ ಸುಟ್ಟುಹೋಗಿರುತ್ತದೆ. ಸೋ, ಜಿಮ್‌ಗೆ ಹೋಗದೆಯೆ ಮುದ್ದಿನ ಸಂಗಾತಿಗೆ ಮುತ್ತಿಡುವ ಮುಖಾಂತರ ತೂಕವನ್ನು ಕೂಡ ಕಳೆದುಕೊಳ್ಳಬಹುದು.
2. ಒಂದು ಸಮೀಕ್ಷೆಯ ಪ್ರಕಾರ ಕಿಸ್ ಕೊಡುವಾಗ ಶೇ.37ರಷ್ಟು ಪುರುಷರು ಕಣ್ಣು ತೆರೆದಿರುತ್ತಾರೆ.
3. ಮುತ್ತಿಡುವಾಗ ಪುರುಷರು ಕಲ್ಪನೆಯಲ್ಲಿ ಕಳೆದುಹೋಗಿಬಿಡುತ್ತಾರೆ. ಆದರೆ, ಮಹಿಳೆಯರು ಇನ್ನಷ್ಟು ಬೇಕು ಎಂದು ಹಂಬಲಿಸುತ್ತಾರೆ.
4. ಚುಂಬಿಸುವಾಗ ಅನೇಕ ಗಂಡಂದಿರು ಹೆಂಡತಿಯ ಕೂದಲು ಅಡ್ಡಬರುವುದನ್ನು ಇಷ್ಟಪಡುವುದಿಲ್ಲ.
5. ಚುಂಬನ ಕ್ರಿಯೆ ನಿರಂತರವಾಗಿದ್ದರೆ ಮುಖದ ಮೇಲೆ ನೆರಿಗೆಗಳು ಹೆಚ್ಚಾಗಿ ಬರುವುದಿಲ್ಲ. ಮುಖದಲ್ಲಿರುವ ಸ್ನಾಯುಗಳು ಚುಂಬಿಸುವಾಗ ಹೆಚ್ಚು ಕ್ರಿಯಾಶೀಲವಾಗಿರುತ್ತವೆ.
6. ಪ್ರಾಚೀನ ಕಾಲದಲ್ಲಿ ಈಜಿಪ್ತರು ತುಟಿಯ ಬದಲು ಮೂಗಿನಿಂದ ಚುಂಬಿಸುತ್ತಿದ್ದರು.
7. ಹಲವಾರು ಶತಮಾನಗಳ ಹಿಂದೆ ಇಟಲಿಯಲ್ಲಿ ಯಾರಾದರೂ ಚುಂಬಿಸುವವರು ಸಿಕ್ಕುಬಿದ್ದರೆ ಮದುವೆಯಾಗಲೇಬೇಕಿತ್ತು.
ಹತ್ತು ನಿಮಿಷಕ್ಕೆ ಒಂದು ಕೋಟಿ ಒಲ್ಲೆ ಎಂದ ಕತ್ರಿನಾ
ಕೇವಲ ಹತ್ತೇ ಹತ್ತು ನಿಮಿಷದ ಕೆಲಸಕ್ಕೆ ರು.1 ಕೋಟಿ ಕೊಡ್ತೀವಿ ಎಂದರೂ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ನೋ ನೋ ಎಂದಿದ್ದಾರೆ! ಇನ್ನೂ 27ರ ಹರೆಯ ಈ ತಾರೆಗೆ ಕೇವಲ ಹತ್ತೇ ಹತ್ತು ನಿಮಿಷದಷ್ಟೂ ಸಮಯವಿಲ್ಲವಂತೆ. ಹಾಗಾಗಿ ಆಫರ್ ತಿರಸ್ಕರಿಸಿದ್ದಾರೆ.
ಏನಿದು ಆಫರ್ ಅಂತೀರಾ? ಕೊಚ್ಚಿ ಫ್ಯಾಷನ್ ಶೋನಲ್ಲಿ ರ್‍ಯಾಂ ಪ್ ಮೇಲೆ ಕ್ಯಾಟ್ ವಾಕ್ ಮಾಡಬೇಕಾಗಿತ್ತಷ್ಟೇ. ಅದೂ ಕೇವಲ ಹತ್ತೇ ಹತ್ತು ನಿಮಿಷ. ಟೈಮಿಲ್ಲ ಎಂದು ಕೈತೊಳೆದುಕೊಂಡಿದ್ದಾರೆ ಕತ್ರಿನಾ. ಸದ್ಯಕ್ಕೆ ಈಕೆ ಯಶ್ ಚೋಪ್ರಾ ಅವರ 'ಲಂಡನ್ ಇಷ್ಕ್' ಎಂಬ ಚಿತ್ರಕ್ಕೆ ಸಹಿಹಾಕಿದ್ದಾರೆ.
ಮೊದಲೇ ದೊಡ್ಡ ಬ್ಯಾನರ್ ಚಿತ್ರ. ನಾಯಕ ನಟ ಶಾರುಖ್ ಖಾನ್. ಲಂಡನ್‌ನಲ್ಲಿ ಚಿತ್ರೀಕರಣ. ಇವೆಲ್ಲವನ್ನೂ ಬಿಟ್ಟು ಜುಜುಬಿ ರು.1 ಕೋಟಿಗೆ ಹೆಜ್ಜೆ ಹಾಕಲು ಸಾಧ್ಯವೆ? ಯಶ್ ಚೋಪ್ರಾ ಎಂದರೆ ಕೇಳಬೇಕೆ. ದುಡ್ಡು ಎಷ್ಟೇ ಕೋಟಿಗಳಾಗಲಿ ಚೆಲ್ಲಾಡುವ ಮನುಷ್ಯ. ಅಂದುಕೊಂಡಂತೆ ಚಿತ್ರ ಮೂಡಿಬರಬೇಕಷ್ಟೆ. (ಏಜೆನ್ಸೀಸ್)
ಕೇಂದ್ರ ರೈಲ್ವೆ ಬಜೆಟ್ 2012-13 ಮುಖ್ಯಾಂಶಗಳು
ನವದೆಹಲಿ, ಮಾ.14: ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿದ್ದಾರೆ. ರವೀಂದ್ರನಾಥ ಠಾಗೋರ್ ಕಾವ್ಯವನ್ನು ವಾಚಿಸುತ್ತಾ, ಸದನದ ಮುಂದೆ ಭಾರತೀಯ ರೈಲ್ವೆ 2012-13 ಮಂಡಿಸಿದರು.
ಕರ್ನಾಟಕಕ್ಕೆ ಸಿಕ್ಕಿರುವ ಹೊಸ ಮಾರ್ಗ ಭರವಸೆ: ಗೇಜ್ ಪರಿವರ್ತನೆ, ಡಬ್ಲಿಂಗ್, ವಿದ್ಯುತ್ ರೈಲು ಮಾರ್ಗ ಮಾಹಿತಿ ಇಲ್ಲಿದೆ:
* ಗುಲ್ಬರ್ಗಾ-ಸುಲ್ತಾನ್ ಪುರ,
* ಹಿರಿಸಾವೆ-ಶ್ರವಣಬೆಳಗೊಳ,
* ಕಡೂರು- ಚಿಕ್ಕಮಗಳೂರು.
ಯೋಜನಾ ಆಯೋಗ ಅನುಮತಿಗೆ ಕಾದಿರುವ ಮಾರ್ಗಗಳು:
* ಗದಗ-ಹಾವೇರಿ
* ಪುಟ್ಟಪರ್ತಿ-ಚಿಕ್ಕಬಳ್ಳಾಪುರ
* ಶ್ರೀನಿವಾಸಪುರ-ಮದನಪಲ್ಲಿ
ಹೊಸ ಮಾರ್ಗ ಸರ್ವೆ:
* ಹಾವೇರಿ-ಶಿರಸಿ
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು
* ಮಧುಗಿರಿ-ಗೌರಿಬಿದನೂರು
ಗೇಜ್ ಪರಿವರ್ತನೆ:
* ಕೋಲಾರ-ಚಿಂತಾಮಣಿ
* ಚಿಕ್ಕಬಳ್ಳಾಪುರ-ಶಿಡ್ಲಘಟ್ಟ
* ಚಿಂತಾಮಣಿ-ಶಿಡ್ಲಘಟ್ಟ(2012-13ರಲ್ಲಿ ಪೂರ್ಣ)
ಜೋಡಿ ಮಾರ್ಗ ಪರಿವರ್ತನೆ:
* ರಾಮನಗರ-ಚೆನ್ನಪಟ್ಟಣ
* ಮೈಸೂರು-ನಾಗನಹಳ್ಳಿ
* ಮದ್ದೂರು-ಹನಕೆರೆ
* ಬಳ್ಳಕೆರೆ-ಬೀರೂರು
* ಬೀರೂರು-ಅಜ್ಜಂಪುರ(2012-13 ರಲ್ಲಿ ಪೂರ್ಣ)
* ಚನ್ನಪಟ್ಟಣ-ಶೆಟ್ಟಿಹಳ್ಳಿ
* ಮಂಡ್ಯ-ಎಲಿಯೂರು
* ನಾಗವಂಗಲ- ಅಜ್ಜಂಪುರ
* ಅಜ್ಜಂಪುರ-ಶಿವಾನಿ
* ಗದಗ- ಸೋಲಾಪುರ
2.15: ಕರ್ನಾಟಕಕ್ಕೆ 6 ಹೊಸ ಎಕ್ಸ್ ಪ್ರೆಸ್ 3 ಪ್ಯಾಸೆಂಜರ್ ರೈಲು
* ಯಶವಂತಪುರ ಕೊಚುವೆಲಿ(ಎಸಿ) ವಾರಕ್ಕೊಮ್ಮೆ
* ಚೆನ್ನೈ ಬೆಂಗಳೂರು ಎಸಿ ಡಬ್ಬರ್ ಡೆಕ್ಕರ್(ಪ್ರತಿದಿನ)
* ಇಂದೋರ್ ಯಶವಂತಪುರ ಎಕ್ಸ್ ಪ್ರೆಸ್ (ವಾರಕ್ಕೊಮ್ಮೆ)
* ಪುರಿ ಯಶವಂತ ಗರೀಬ್ ರಥ (ವಾರಕ್ಕೊಮ್ಮೆ)
* ಮೈಸೂರು-ಸಾಯಿನಗರ ಶಿರಡಿ (ವಾರಕ್ಕೊಮ್ಮೆ)
* ಸೋಲಾಪುರ ಯಶವಂತಪುರ ಗುಲ್ಬಾರ್ಗಾ(೩ ಬಾರಿ)
3 ಪ್ಯಾಸೆಂಜರ್ ರೈಲು:
* ಮೈಸೂರು ಚಾಮರಾಜನಗರ
* ಮೈಸೂರು ಬೀರೂರು ವಯಾ ಅರಸೀಕೆರೆ
* ಬೆಂಗಳೂರು- ಹಾಸನ ವಯಾ ಶ್ರವಣಬೆಳಗೊಳ
ಇತರೆ ಮಾರ್ಗಗಳು : ಕಡೂರು-ಚಿಕ್ಕಮಗಳೂರು-ಸಕಲೇಶಪುರ, ಬೆಂಗಳೂರು-ಹಾಸನ(via ಶ್ರವಣಬೆಳಗೊಳ)
* ಮೈಸೂರು-ಬೆಂಗಳೂರು ಪ್ಯಾಸೆಂಜರ್ ವಾರಪೂರ್ತಿ ಓಡಾಟ.
* ಬೆಂಗಳೂರು -ಅರಸೀಕೆರೆ ವಾರಪೂರ್ತಿ ಪ್ರಯಾಣ.
* ಗುಲ್ಬರ್ಗಾ-ಸುಲ್ತಾನ್ ಪುರ, ರಾಯಚೂರು-ಗದ್ವಾಲ್ ಮಾರ್ಗ ಮುಂದಿನ ವರ್ಷ ಪೂರ್ಣ. ಹೊಸಮಾರ್ಗಗಳ ಮಾಹಿತಿಗೆ ಓದಿ
2.00: ಹಾವೇರಿಯಿಂದ ಶಿರಸಿಗೆ ಹೊಸ ರೈಲು ಮಾರ್ಗ.
* ಪುರಿ-ಯಶವಂತಪುರಕ್ಕೆ ಹೊಸ ರೈಲು
* ಬೀದರ್ -ಸಿಕಂದರಾಬಾದ್ ಇಂಟರ್ ಸಿಟಿ ರೈಲು.
* ಚೆನ್ನೈ -ಮಂಗಳೂರು ವಾರಪೂರ್ತಿ ಪ್ರಯಾಣ ಸಾಧ್ಯ.
* 20 ರೈಲು ಮಾರ್ಗಗಳಿಗೆ ವಿದ್ಯುತೀಕರಣ ಸರ್ವೆ.
* ಫಾಲ್ಗಾಟ್ ಮಂಗಳೂರು ರೈಲು ಕೊಯಮತ್ತೂರಿಗೆ ವಿಸ್ತರಣೆ
1.40: ರೈಲು ಪ್ರಯಾಣ ದರ ಅಲ್ಪ ಪ್ರಮಾಣ ಏರಿಕೆ, ಪ್ರತಿ ಕಿ.ಮೀ. ಗೆ 2 ಪೈಸೆ ಹೆಚ್ಚಳ. ಪ್ಲಾಟ್ ಫಾರಂ ದರ 3 ರೂ. ನಿಂದ 5 ರೂ.ಗೆ ಏರಿಸಲಾಗಿದೆ. [ವಿವರಗಳನ್ನು ಓದಿ]
1.30: ಬೆಂಗಳೂರಿನಲ್ಲಿ ಸುರಕ್ಷತಾ ಕೇಂದ್ರ ಸ್ಥಾಪನೆ.
1.20: 85 ಹೊಸ ಎಕ್ಸ್ ಪ್ರೆಸ್ ರೈಲು, 21 ಪ್ಯಾಸೆಂಜರ್ ರೈಲು ಘೋಷಣೆ.
* ಪ್ರಸಕ್ತ ವರ್ಷ 1 ಲಕ್ಷ ಜನರಿಗೆ ಉದ್ಯೋಗವಾಕಾಶ ಲಭ್ಯ.
1.15 : ರಿಯಲ್ ಟೈಮ್ ನಲ್ಲಿ ರೈಲು ಸಂಚಾರ ಮಾಹಿತಿ ಲಭ್ಯ. 36 ರೈಲುಗಳಿಗೆ ಅಳವಡಿಕೆ. ಮುಂದಿನ 18 ತಿಂಗಳಲ್ಲಿ ಪ್ರಯಾಣಿಕರಿಗೆ ಎಸ್ ಎಂಎಸ್ ಹಾಗೂ ಇಮೇಲ್ ಮೂಲಕ ಮಾಹಿತಿ ರವಾನೆ.
1.00: 825 ಕಿ.ಮೀ ಗೇಜ್ ಪರಿವರ್ತನೆ ಕಾರ್ಯ ಪೂರ್ಣ.
* ಹೈದರಾಬಾದ್- ಸಿಕಂದ್ರಾಬಾದ್ MMTC ಗೆ ಅನುಮೋದನೆ.. ಬೆಂಗಳೂರು-ಮೈಸೂರು ಯೋಜನೆಗೆ ಮಾದರಿ.
12.50: ಕೇರಳಕ್ಕೆ ನಾಲ್ಕು ಹೊಸ ರೈಲ್ವೆ ಕೋಚ್ ಫ್ಯಾಕ್ಟರಿ. ಕೋಲಾರದಲ್ಲೂ ಹಾಗೂ ನವಿ ಮುಂಬೈಗೆ ಒಂದು ಫ್ಯಾಕ್ಟರಿ ಘೋಷಣೆ.
* 114 ಹೊಸ ರೈಲ್ವೆ ಮಾರ್ಗಗಳ ಸರ್ವೆ ಜಾರಿಯಲ್ಲಿದೆ. 5 ವರ್ಷಗಳಲ್ಲಿ 1 ಸಾವಿರ ಹೊಸ ನಿಲ್ದಾಣಗಳು.
* 17 ಗೇಜ್ ಪರಿವರ್ತನೆ ಕಾರ್ಯ ಹಾಗೂ 45 ಯೋಜನೆಗಳು 2012-13 ರಲ್ಲಿ ಪೂರ್ಣ.
* 17,000 ಕಿ.ಮೀ ಹೊಸ ರೈಲು ಮಾರ್ಗ ನಿರ್ಮಾಣ.
12.45: ಆರ್ಥಿಕ ಕೊರತೆಯಿಂದ 482 ಯೋಜನೆಗಳು ನೆನಗುದಿಗೆ. 487 ಯೋಜನೆಗಳು ಅನುಷ್ಠಾನ ಹಂತದಲ್ಲಿದೆ.
* ಗ್ರಾಮೀಣ ಮತ್ತು ಗಡಿ ಭಾಗಕ್ಕೆ ರೈಲು ಸಂಪರ್ಕ ಒದಗಿಸಲು 5.5 ಲಕ್ಷ ಕೋಟಿ ರು ಮೀಸಲು.
12.30 : 1 ಲಕ್ಷಕ್ಕೂ ಅಧಿಕ ಕಿ.ಮೀ ಗಳಲ್ಲಿ 19,000 ಕಿ.ಮೀ ದೂರ ರೈಲ್ವೆ ಅಧುನೀಕರಣ ಮಾಡಲಾಗುವುದು.(ಸ್ಯಾಂ ಪಿತ್ರೋಡಾ ಸಮಿತಿ ಶಿಫಾರಸು)
* ರು. 5.6 ಲಕ್ಷ ಕೋಟಿ ರು ರೈಲ್ವೆ ಆಧುನೀಕರಣಕ್ಕೆ ಬಳಕೆ ಮಾಡಲಾಗುವುದು.
* ರೈಲ್ವೆ ಅಪಘಾತವನ್ನು ಶೂನ್ಯಗೊಳಿಸುವುದು ನಮ್ಮ ಗುರಿ. ಶೇ 60 ರಷ್ಟು ಸಾವು ಲೆವೆಲ್ ಕ್ರಾಸಿಂಗ್ ನಲ್ಲಿ ಸಂಭವಿಸುತ್ತಿದೆ.
Read: In English
12.25: Haath ki lakeeron se zindagi nahi banti; humara bhi kuch hissa hain zindagi banane mein ಕವನ ಸಾಲು ಉದ್ಗಾರ12.20: ಹಿಮಾಲಯ ಇಲ್ಲದ ಭಾರತ, ಗಂಗಾ ನದಿ ಇಲ್ಲದ ಭಾರತ ಊಹಿಸಲು ಸಾಧ್ಯವಿಲ್ಲ. ಅದರಂತೆ ರೈಲ್ವೆ ಇಲ್ಲದೆ ಭಾರತವನ್ನು ಊಹಿಸಲಾಗದು
* ರೈಲ್ವೆ ಸಂಶೋಧನಾ ಮತ್ತು ಅಭಿವೃದ್ಧಿ ಕೌನ್ಸಿಲ್ ಗೆ 7.35 ಲಕ್ಷ ಕೋಟಿ ರು ಬಂಡವಾಳ ಹೂಡಿಕೆ
12.10: ಅನಿಲ್ ಕಾಕೊಡ್ಕರ್ ಅವರ ರೈಲ್ವೆ ಸುರಕ್ಷತಾ ಸಮಿತಿ ನೀಡಿದ ಶಿಫಾರಸುಗಳನ್ನು ಅಳವಡಿಸಲು ಸಿದ್ಧ.
ಫ್ರಿಜ್ ಶುದ್ಧತೆಗೆ ಬಳಸಿ ಈ ಸರಳ ವಿಧಾನ
1. ಫ್ರಿಜ್ ನಲ್ಲಿರುವ ಕೊಳೆತ ಹಣ್ಣು ತರಕಾರಿಗಳನ್ನು ಬಿಸಾಡಬೇಕು. ನಂತರ ಶೆಲ್ಫ್ ಮತ್ತು ಡ್ರಾಯರ್ ಗಳನ್ನು ಹೊರ ತೆಗೆದು ಬಿಸಿ ನೀರಿನಲ್ಲಿ ಸ್ವಲ್ಪ ಸೋಪು ಹಾಕಿ ತೊಳೆಯಬೇಕು. ಗ್ಲಾಸ್ ಶೆಲ್ಫ್ ಗಳನ್ನು ಹೊರ ತೆಗೆದು ಆರಿದ ಮೇಲೆ ತೊಳೆದು ಒಣಗಿಸಬೇಕು. ಫ್ರಿಜ್ ನಿಂದ ಹೊರ ತೆಗೆದ ತಕ್ಷಣ ತೊಳೆದರೆ ಗಾಜುನಲ್ಲಿ ಬಿರುಕು ಬೀಳಬಹುದು.
2. ಅಂಟಿರುವ ಕೊಳೆಯನ್ನು ತೆಗೆಯಲು ಸ್ಕ್ರಬ್ಬರ್ (ಚೇರಿ) ಹಾಕಿ ಉಜ್ಜಿ. ನಂತರ ಕಾಟನ್ ಬಟ್ಟೆಯನ್ನು ನೆನೆಸಿ ಉಜ್ಜಬೇಕು. ಶುದ್ಧವಾದ ಮೇಲೆ ಒಣ ಬಟ್ಟೆಯಿಂದ ಒರೆಸಿ ಇಡಬೇಕು.
3. ಫ್ರಿಜ್ ಒಳಗಡೆ ಕ್ಲೀನ್ ಮಾಡಲು ಸಹ ಈ ವಿಧಾನ ಬಳಸಿ.
4. ಶೆಲ್ಫ್ , ಡ್ರಾಯರ್ ಮತ್ತು ಫ್ರಿಜ್ ಒಳಗಡೆ ಒಣ ಬಟ್ಟೆಯಿಂದ ಒರೆಸಿ ಸಂಪೂರ್ಣ ಒಣಗಿದ ಮೇಲೆ ಅವುಗಳನ್ನು ಮೊದಲಿದ್ದ ಜಾಗದಲ್ಲಿ ಇಡಬೇಕು. ಈ ರೀತಿ ತಿಂಗಳಿಗೊಮ್ಮೆ ಮಾಡುತ್ತಿದ್ದರೆ ಫ್ರಿಜ್ ಕೆಟ್ಟ ವಾಸನೆ ಬೀರುವುದಿಲ್ಲ.
ಈ ಗ್ರಾಮದಲ್ಲಿ ಮದ್ಯ ನಿಷಿದ್ಧ, ಕುಡಿದರೆ ಕಟ್ಟಿ ದಂಡ!
ಯಾದಗಿರಿ, ಮಾ. 12 : ಈ ಗ್ರಾಮದಲ್ಲಿ ಇನ್ನು ಮುಂದೆ ಮದ್ಯ ಮಾರುವಂತಿಲ್ಲ, ಗ್ರಾಮದವರಾರೂ ಕುಡಿಯುವಂತಿಲ್ಲ. ಒಂದು ವೇಳೆ ಮದ್ಯ ಮಾರಿದರೆ ಸಾವಿರ ರು., ಕುಡಿದರೆ ಐನೂರು ರು. ದಂಡ. ದಂಡ ತೆರಲು ಸಿದ್ಧರಿರುವವರು ಮದ್ಯ ಮಾರಬಹುದು ಮತ್ತು ಕುಡಿಯಬಹುದು.
ಯಾದಗಿರಿ ಜಿಲ್ಲೆಯ ಶಹಾಪುರ್ ತಾಲ್ಲೂಕಿನ ಪುಟ್ಟ ಹಳ್ಳಿ ಹುಂಡೇಕಲ್‌ನಲ್ಲಿ ಇಂತಹ ದಿಟ್ಟ ನಿರ್ಣಯ ತೆಗೆದುಕೊಂಡಿರುವವರು ಸರಕಾರ ಅಧಿಕಾರಿಗಳಲ್ಲ, ಸ್ವತಃ ಗ್ರಾಮಸ್ಥರೇ ಇಂತಹ ಒಂದು ಗಟ್ಟಿ ನಿರ್ಣಯವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿನ ಜನಸಂಖ್ಯೆ ಕೇವಲ ಎರಡು ಸಾವಿರವಿದ್ದೀತು, ಮತದಾರರು 1,400 ಮಂದಿ. ಇಷ್ಟಿದ್ದರೂ ಕುಡಿಯುವವರು ಕಮ್ಮಿಯಿರಲಿಲ್ಲ.
ಈ ಗ್ರಾಮದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತಿತ್ತು. ಬಡ ಕುಟುಂಬಗಳೇ ಅಧಿಕವಾಗಿರುವ ಇಲ್ಲಿ ಮನೆಯ ದೊಡ್ಡವರು, ಚಿಕ್ಕವರೆನ್ನದೇ ಎಲ್ಲರೂ ಮದ್ಯದ ದಾಸರೇ ಆಗಿದ್ದರು. ಮನೆಗಳಲ್ಲಿ ಜಗಳ ತಕರಾರು ಇಲ್ಲಿ ಸಾಮಾನ್ಯವಾಗಿತ್ತು. ಹಲವು ಕುಟುಂಬಗಳು ಬೀದಿ ಪಾಲಾಗಿ, ಯುವಕರು ಕುಡಿತದ ಚಟಕ್ಕೆ ದಾಸರಾಗಿ ಕುಟುಂಬಗಳ ನೆಮ್ಮದಿ ಕೆಡಿಸಿತ್ತು.
ಗ್ರಾಮದ ಪ್ರಜ್ಞಾವಂತ ನಾಗರಿಕರು ಯುವಕರನ್ನು ಈ ಚಟದಿಂದ ಬಿಡಿಸಲು ಹಾಗೂ ಅವರ ಬದುಕು ಸುಧಾರಿಸಲು ನಿರ್ಧರಿಸಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಶನಿವಾರ ಸಭೆ ಸೇರಿದ್ದರು. ಕುಡಿತದ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಟ್ಟರು. ಎಲ್ಲರ ಮನವೊಲಿಸಿ, ಗ್ರಾಮದವರಾರೂ ಕುಡಿಯಬಾರದು, ಗ್ರಾಮದಲ್ಲಿ ಮದ್ಯ ಮಾರಾಟ ಮಾಡಬಾರದು ಎಂಬ ನಿರ್ಣಯ ಕೈಗೊಂಡೇ ಬಿಟ್ಟರು.
ಮಾರಿದರೆ 1,000 ರು. ಮತ್ತು ಕುಡಿದರೆ 500 ರು. ದಂಡ ಪಾವತಿಸಬೇಕೆಂದು ನಿರ್ಣಯ ಅಂಗೀಕರಿಸಲಾಯಿತು. ಕೆಲ ಯುವಕರೂ ಹಿರಿಯರ ಮಾತಿಗೆ ಬೆಲೆ ಕೊಟ್ಟು ಮದ್ಯ ಸೇವನೆ ಬಿಡುವುದಾಗಿ ಮಾತು ಕೊಟ್ಟಿದ್ದಾರೆ. ಮನಸ್ಸಿದ್ದಲ್ಲಿ ಮಾರ್ಗ ಎಂಬ ಗಾದೆಯನ್ನು ಹಳ್ಳಿಯ ಹಿರಿಯರು ನಿಜ ಮಾಡಿ ತೋರಿಸಿದ್ದಾರೆ. ಭಲೇ ಗ್ರಾಮಸ್ಥರೆ.
ಕಾಸರವಳ್ಳಿ ಕೂರ್ಮಾವತಾರಕ್ಕೆ ರಾಷ್ಟ್ರೀಯ ಪ್ರಶಸ್ತಿ
ಖ್ಯಾತ ಗಿರೀಶ್ ಕಾಸರವಳ್ಳಿ ಅವರ ಹೊಚ್ಚ ಹೊಸ ಚಲನಚಿತ್ರ 'ಕೂರ್ಮಾವತಾರ'ಕ್ಕೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ ಲಭಿಸಿದೆ.
ಡರ್ಟಿ ಪಿಕ್ಚರ್ ನ ಅಭಿನಯಕ್ಕಾಗಿ ನಟಿ ವಿದ್ಯಾಬಾಲನ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಿಕ್ಕಿದೆ. ಉಳಿದಂತೆ ಪಟ್ಟಿ ಹೀಗಿದೆ.
* ಶ್ರೇಷ್ಠ ನಟ-ಗಿರೀಶ್ ಕುಲಕರ್ಣಿ-ಚಿತ್ರ ಡೆಯೊಲ್(ಮರಾಠಿ)
* ಶ್ರೇಷ್ಠ ಬಾಲ ಕಲಾವಿದ-ಪಾರ್ಥೋ ಗುಪ್ತೆ-ಸ್ಟ್ಯಾನಿ ಕ ಡಬ್ಬಾ ಹಾಗೂ ಚಿಲ್ಲರ್ ಪಾರ್ಟಿ ಚಿತ್ರದ ಮಕ್ಕಳು
* ಅತ್ಯುತ್ತಮ ಚಿತ್ರ: ಡೆಯೊಲ್ ಹಾಗೂ ಬ್ಯಾರಿ
* ಅತ್ಯುತ್ತಮ ಮಕ್ಕಳ ಚಿತ್ರ: ಚಿಲ್ಲರ್ ಪಾರ್ಟಿ
* ಅತ್ಯುತ್ತಮ ಚಿತ್ರಕಥೆ: ವಿಕಾಸ್ ಬೆಹಲ್ ಹಾಗೂ ನಿತೇಶ್ ತಿವಾರಿ(ಚಿಲ್ಲರ್ ಪಾರ್ಟಿ)
* ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ರಾ ಒನ್
* ಅತ್ಯುತ್ತಮ ಸಂಭಾಷಣೆ: ಗಿರೀಶ್ ಕುಲಕರ್ಣಿ (ಡೆಯೋಲ್)
* ಅತ್ಯುತ್ತಮ ಸಂಕಲನ: ಪ್ರವೀಣ್ ಕೆಎಲ್ ಹಾಗೂ ಎನ್ ಬಿ ಶ್ರೀಕಾಂತ್ (ಅರಣ್ಯ ಕಾಂಡಂ)
* ಅತ್ಯುತ್ತಮ ಬೆಂಗಾಳಿ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಅತ್ಯುತ್ತಮ ಡೊಗ್ರಿ ಚಿತ್ರ: ದಿಲೆಶ್ ಬಸಿಯಾ ಕೊಯಿ
* ಅತ್ಯುತ್ತಮ ಹಿಂದಿ ಚಿತ್ರ: ಐ ಯಾಮ್
* ಅತ್ಯುತ್ತಮ ಕನ್ನಡ ಚಿತ್ರ: ಕೂರ್ಮಾವತಾರ
* ಅತ್ಯುತ್ತಮ ಮಣಿಪುರಿ ಚಿತ್ರ: ಫಿಜಿಗೀ ಮಣಿ
* ಅತ್ಯುತ್ತಮ ತಮಿಳು ಚಿತ್ರ: ವಾಗೈ ಸೂಡಾ ವಾ
* ಅತ್ಯುತ್ತಮ ಪಂಜಾಬಿ ಚಿತ್ರ: ಅನ್ನೆ ಗೊಡೆ ಡ ಡಾನ್
* ಶ್ರೇಷ್ಠ ನೃತ್ಯ ಸಂಯೋಜಕ: ಬಾಸ್ಕೋ ಹಾಗೂ ಸೀಸರ್ 'ಸೆನೊರೀಟಾ' ಹಾಡು 'ಜಿಂದಗಿ ನಾ ಮಿಲೆಗಿ ದೊಬಾರಾ' ಚಿತ್ರ
* ಜ್ಯೂರಿ ವಿಶೇಷ ಚಿತ್ರ: ರಂಜನಾ ಅಮಿ ಅರ್ ಅಶ್ಬೊನ
* ಶ್ರೇಷ್ಠ ಗೀತ ಸಾಹಿತ್ಯ: ಅಮಿತಾಬ್ ಭಟ್ಟಾಚಾರ್ಯ 'ಅಗರ್ ಜಿಂದಗಿ' ಐಯಾಮ್ ಚಿತ್ರ
* ಶ್ರೇಷ್ಠ ಸಂಗೀತ: ನೀಲ್ ದತ್ತ 'ರಂಜೊನಾ..'
* ಅತ್ಯುತ್ತಮ ಪ್ರಸಾಧನ: ವಿಕ್ರಮ ಗಾಯಕ್ವಾಡ್ 'ಬಾಲ್ ಗಂಧರ್ವ' ಹಾಗೂ 'ದ ಡರ್ಟಿ ಪಿಕ್ಚರ್'
* ಅತ್ಯುತ್ತಮ ಕಾಸ್ಟ್ಯೂಮ್ : ನೀತ ಲುಲ್ಲಾ 'ಬಾಲ್ ಗಂಧರ್ವ' ಮತ್ತು ನಿಹಾರಿಕಾ ಖಾನ್ 'ದ ಡರ್ಟಿ ಪಿಕ್ಚರ್'
* ಅತ್ಯುತ್ತಮ ಸಹ ಕಲಾವಿದ: ಅಪ್ಪು ಕುಟ್ಟಿ
* ಶ್ರೇಷ್ಠ ಹಿನ್ನೆಲೆ ಗಾಯಕಿ: ರೂಪಾ ಗಂಗೂಲಿ
ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಮುಖ್ಯಸ್ಥೆ ರೋಹಿಣಿ ಹಟ್ಟಂಗಡಿ ಅವರು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಮೇ.3ರಂದು ನವದೆಹಲಿಯಲ್ಲಿ ಜರುಗಲಿದೆ.
ಶ್ರೀರಾಮುಲು ಬಿಎಸ್ಆರ್ ಸೇರಲಿರುವ ಪ್ರೇಮ್-ರಕ್ಷಿತಾ
ಬಿ ಶ್ರೀರಾಮುಲು ನೇತೃತ್ವದ ಬಡವ, ಶ್ರೀಮಂತ, ಶ್ರಮಿಕರ ಪಕ್ಷ (ಬಿಎಸ್ಆರ್ ಪಕ್ಷ)ಕ್ಕೆ ನಿರ್ದೇಶಕ ಪ್ರೇಮ್ ಹಾಗೂ ಅವರ ತಾರಾಪತ್ನಿ ರಕ್ಷಿತಾ ಪ್ರೇಮ್ ಸೇರಲಿದ್ದಾರೆ.
ಬೆಂಗಳೂರಿನ ರಾಜಾಜಿನಗರದಲ್ಲಿರುವ ಶ್ರೀರಾಮುಲು ಆಫೀಸಿನಲ್ಲಿ ಮಾರ್ಚ್ 9 ರಂದು ಅಧಿಕೃತವಾಗಿ ಪ್ರೇಮ್-ರಕ್ಷಿತಾ ದಂಪತಿಗಳು ಪಕ್ಷ ಸೇರಲಿದ್ದಾರೆ ಎಂದು ವಿಶ್ವಸನೀಯವಾಗಿ ಗೊತ್ತಾಗಿದೆ. ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಶ್ರೀರಾಮುಲು ಅವರ ಪ್ರಾದೇಶಿಕ ಪಕ್ಷವನ್ನು ಈ ದಂಪತಿಗಳು ಸೇರುತ್ತಿರುವ ಔಚಿತ್ಯವೇನೆಂಬುದು ಸದ್ಯಕ್ಕೆ ಸಸ್ಪೆನ್ಸ್.
ರಾಜಕೀಯದ ಅಂಗಳಕ್ಕೆ ಇದೀಗ ತಾರಾಮೆರಗು ಹೆಚ್ಚುತ್ತಿದೆ. ನಟಿ ರಮ್ಯಾ ಕಾಂಗ್ರೆಸ್ ಸೇರಿದ್ದಾಗಿದೆ. ಇತ್ತೀಚಿಗೆ ನಟಿ ಪೂಜಾ ಗಾಂಧಿ ಜೆಡಿಎಸ್ ಪಕ್ಷ ಸೇರಿಕೊಂಡಿದ್ದಾರೆ. ಮೊನ್ನೆ ಮೊನ್ನೆ ನಟಿ ಮಾಳವಿಕಾ ಕೂಡ ಜೆಡಿಎಸ್ ಸೇರಿದ್ದು ಹೊಸ ಬೆಳವಣಿಗೆ ಎನಿಸಿತ್ತು. ಇದೀಗ ಪ್ರೇಮ್, ರಕ್ಷಿತಾ ಸೇರುವ ಸುದ್ದಿಯೊಂದಿಗೆ ಹೊಸ ಸಂಚಲನ ಮೂಡಿದಂತಾಗಿದೆ.
ಈಗಾಗಲೇ ನಟಿ ಉಮಾಶ್ರೀ ರಾಜಕೀಯ ವಲಯದಲ್ಲಿ ಹೆಸರು ಮಾಡಿದ್ದಾರೆ. ನಟಿ ಶ್ರುತಿಗೆ ಕೂಡ ಜೆಡಿಎಸ್ ಪಕ್ಷಕ್ಕೆ ಬಹಿರಂಗವಾಗಿವೇ ಎಚ್ ಡಿ ಕುಮಾರಸ್ವಾಮಿ ಆಮಂತ್ರಿಸಿದ್ದಾಗಿದೆ. ಇನ್ನೇನು ಸದ್ಯದಲ್ಲೇ ಶ್ರುತಿ ಕೂಡ ರಾಜಕೀಯ ಸೇರಲಿದ್ದಾರೆಂಬ ವದಂತಿ ದಟ್ಟವಾಗಿದೆ. ಚುನಾವಣೆಗೆ ಕಾಲ ಸನ್ನಿಹಿತವಾಗುತ್ತಿದ್ದಂತೆ ಇನ್ನೆಷ್ಟು ಜನ ಯಾವ ಯಾವ ಪಕ್ಷಕ್ಕೆ ಸೇರಲಿದ್ದಾರೋ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. (ಒನ್ ಇಂಡಿಯಾ ಕನ್ನಡ)
ಎದ್ದ ಕೂಡಲೆ ನ್ಯೂಸ್ ಪೇಪರ್ ಓದಬಾರದು!
ದಿನ ಬೆಳಗಾದರೆ ಟಾರ್ಗೆಟ್, ಡೆಡ್ ಲೈನ್ ಅಂತ ಯೋಚಿಸುತ್ತಾ ಟೆನ್ಷನ್ ಹೆಚ್ಚಿ ಮಾಡುವುದರಿಂದ ಆರೋಗ್ಯ ಹಾಳಾಗುವುದು. ಜೀವನವನ್ನು ಸಂತೋಷದಿಂದ ಕಳೆಯಲು ಮತ್ತು ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಅಂತಾರಾಷ್ಟ್ರೀಯ ಖ್ಯಾತಿಯ ಲೀಡರ್ಶಿಪ್ ಗುರು ರಾಬಿನ್ ಶರ್ಮ ಅನುಸರಿಸುವ ಸರಳ ವಿಧಾನ ನೋಡಿ ಇಲ್ಲಿದೆ:
1. ಮುಂಜಾನೆ ಬೇಗನೆ ಏಳುವುದು: ಮುಂಜಾನೆ ಬೇಗನೆ ಏಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಾಗುವುದು. ಲೇಟಾಗಿ ಎದ್ದು ಅವಸರವಾಗಿ ಕೆಲಸ ಕಾರ್ಯವನ್ನು ಮಾಡುವುದರಿಂದ ಮಾನಸಿಕ ಒತ್ತಡ ಹೆಚ್ಚುವುದು.
2. ಒಂದು ಲೋಟ ನೀರು ಕುಡಿಯುವುದು: ಬೆಳಗ್ಗೆ ಎದ್ದ ಕೂಡಲೇ ಬಾಯಿ ಕೂಡ ತೊಳೆಯದೆ ಒಂದು ಲೋಟ ನೀರು ಕುಡಿದರೆ ದೇಹ ಶುದ್ಧಿಯಾಗುತ್ತದೆ. ಇದರಿಂದ ದೇಹದಲ್ಲಿ ಚೈತನ್ಯ ಹೆಚ್ಚಾಗುವುದು.
3. ನ್ಯೂಸ್ ಪೇಪರ್ ಓದಬಾರದು: ಹೌದು ಇದನ್ನು ಕೇಳಿದರೆ ಆಶ್ಚರ್ಯವಾಗುವುದು ದಿಟ. ಆದರೆ ಬೆಳಗ್ಗೆ ಎದ್ದ ಕೂಡಲೆ ನ್ಯೂಸ್ ಪೇಪರ್ ನೋಡಿದರೆ ಅದರಲ್ಲಿರುವ ವಿಷಯಗಳೇ ಮನಸ್ಸನ್ನು ಕೊರೆಯುವುದು.
ಇದರ ಬಗ್ಗೆ ಒಂದು ಸಮೀಕ್ಷೆಯೊಂದು ನಡೆಸಲಾಗಿದೆ. ಅದರಲ್ಲಿ ದಿನಾ ಬೆಳಗ್ಗೆ ನ್ಯೂಸ್ ಪೇಪರ್ ಓದುವವರಿಗೆ ಮತ್ತು ಓದದವರಿಗೆ ಒಂದೇ ರೀತಿಯ ಪೋಟೊಗಳನ್ನು ತೋರಿಸಲಾಗಿತ್ತು. ಅದರಲ್ಲಿ ನ್ಯೂಸ್ ಪೇಪರ್ ನೋಡಿದವರಿಗಿಂತ ನೋಡದವರು ಆ ಫೋಟೊಗಳನ್ನು ನೋಡಿ ಹೆಚ್ಚು ಆನಂದಿಸುತ್ತಿದ್ದರು.
ಇವರ ಪ್ರಕಾರ ಎದ್ದ ಕೂಡಲೆ ನ್ಯೂಸ್ ಪೇಪರ್ ನಲ್ಲಿ ತಲೆದೂರಿಸುವುದಕ್ಕಿಂತ ಸುತ್ತಮುತ್ತಲಿನ ಸಣ್ಣ-ಪುಟ್ಟ ವಿಷಯಗಳನ್ನು ಮೊದಲು ಆನಂದಿಸಿ. ತಿಂಡಿಯ ನಂತರ ಪೇಪರ್ ನೋಡುವುದು ಒಳ್ಳೆಯದು.
4. 200% ಕೆಲಸ: ಮಾಡುವ ಕೆಲಸ ಯಾವುದೇ ಆಗಿರಲಿ ಅದನ್ನು 200% ಶೃದ್ಧೆಯಿಂದ ಮಾಡಬೇಕು. ಆಗ ಯಶಸ್ವು ತನ್ನಿಂದ ತಾನೆ ಬರುವುದು.
One India Kannada
ಸಂಚಾರಿ ನಿಯಮ ಉಲ್ಲಂಘಿಸಿದರೆ ಫೈನೆಷ್ಟು? ಜೈಲೆಷ್ಟು?
ಸಂಚಾರಿ ನಿಯಮದ ತಪ್ಪುಗಳಿಗೆ ಎಷ್ಟು ದಂಡ ಮತ್ತು ಎಷ್ಟು ವರ್ಷ ಜೈಲು ಶಿಕ್ಷೆ?
* ಕುಡಿದು ವಾಹನ ಚಾಲನೆ ಮಾಡಿದರೆ 2,000 ರು.ನಿಂದ 10 ಸಾವಿರ ರು.ವರೆಗೆ ದಂಡ ಅಥವಾ ಆರು ತಿಂಗಳಿನ ವರೆಗೆ ಜೈಲು ಶಿಕ್ಷೆ(ಓದಿ: ಕುಡಿದು ಡ್ರೈವಿಂಗ್ ಮಾಡಿದ್ರೆ 4 ವರ್ಷದವರೆಗೆ ಜೈಲು! )
* ಸಿಗ್ನಲ್ ಜಂಪ್ ಮಾಡಿ ಪ್ರಪ್ರಥಮ ಬಾರಿ ಸಿಕ್ಕಿಬಿದ್ದರೆ 100 ರು.ನಿಂದ 500 ರು.ವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 300 ರು.ನಿಂದ 1,500 ರು.ವರೆಗೆ ದಂಡ ವಿಧಿಸಲು ಅವಕಾಶವಿದೆ.
* ಮಾದಕ ದ್ರವ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಮೊದಲ ಪ್ರಕರಣಕ್ಕೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ಐದು ಸಾವಿರ ರುಪಾಯಿ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 10 ಸಾವಿರ ರು. ದಂಡ ಅಥವಾ ಆರು ತಿಂಗಳ ಸಜೆ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದು ಮಾಡಲಾಗುತ್ತದೆ.
* ವೇಗಮಿತಿ ಮೀರಿ ವಾಹನ ಚಾಲನೆ ಮಾಡಿದರೆ ಮೊದಲಿಗೆ 400 ರು.ನಿಂದ 1 ಸಾವಿರ ರುಪಾಯಿವರೆಗೆ ದಂಡ. ಮತ್ತೊಮ್ಮೆ ಇದೇ ತಪ್ಪು ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರು.ನಿಂದ 5 ಸಾವಿರ ರು.ವರೆಗೆ ದಂಡ.
* ಅಪಾಯಕಾರಿಯಾಗಿ ವಾಹನ ಚಾಲನೆ ಮಾಡಿದರೆ 1 ಸಾವಿರ ರುಪಾಯಿ ದಂಡ ಅಥವಾ ಆರು ತಿಂಗಳ ಸಜೆ. ಮತ್ತೊಮ್ಮೆ ಇದೇ ತಪ್ಪು ಮಾಡಿದರೆ 2 ಸಾವಿರ ರುಪಾಯಿಯಿಂದ 5 ಸಾವಿರ ರುಪಾಯಿವರೆಗೆ ದಂಡ ಅಥವಾ 2 ವರ್ಷ ಜೈಲು ಶಿಕ್ಷೆ.
* ಸೀಟ್ ಬೆಲ್ಟ್ ಧರಿಸದೇ ವಾಹನ ಚಾಲನೆ ಮಾಡಿದರೆ 500 ರುಪಾಯಿಯಿಂದ 1 ಸಾವಿರ ರುಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
* ರಿಜಿಸ್ಟ್ರೇಷನ್ ಆಗದ ವಾಹನ ಚಲಾಯಿಸಿದರೆ 20 ಸಾವಿರ ರು. ದಂಡ ಮತ್ತು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
* ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಸವಾರಿ ಮಾಡಿದರೆ 500 ರುಪಾಯಿ ದಂಡ. ಇದೇ ತಪ್ಪನ್ನು ಮತ್ತೊಮ್ಮೆ ಮಾಡಿ ಸಿಕ್ಕಿಬಿದ್ದರೆ 1 ಸಾವಿರ ರು.ನಿಂದ 1,500 ರು.ವರೆಗೆ ದಂಡ ವಿಧಿಸಲಾಗುತ್ತದೆ.
ಸಂಚಾರಿ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಸಿ
ಮಾ.15 ರಿಂದ ಮಾ.30 ರ ತನಕ II ಪಿಯೂ ಪರೀಕ್ಷೆ
ಬೆಂಗಳೂರು, ಮಾ.4: ದ್ವೀತಿಯ ಪಿಯುಸಿ ಪರೀಕ್ಷೆ ಮಾ.15ರಿಂದ 30ರ ವರೆಗೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆ ಈಗಾಗಲೇ ಪವಿ ಪೂರ್ವ ಪರೀಕ್ಷಾ ಮಂಡಳಿ(KBPUE) ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯದ ಒಟ್ಟು 923 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 5,96,739 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.
ವೇಳಾ ಪಟ್ಟಿ ಹೀಗಿದೆ:
ಪರೀಕ್ಷಾ ಅಕ್ರಮ ತಡೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೇರಿದಂತೆ ಅಧಿಕಾರಿಗಳ ಜಾಗೃತದಳ ರಚಿಸಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದರು.
ವೇಳಾ ಪಟ್ಟಿ ಹೀಗಿದೆ:
ದಿನಾಂಕ | ವಿಷಯ |
ಮಾ.15 | ಇತಿಹಾಸ |
ಮಾ.16 | ಜೀವಶಾಸ್ತ್ರ / ಬಿಸಿನೆಸ್ ಸ್ಟಡೀಸ್ |
ಮಾ.17 | ರಾಜ್ಯಶಾಸ್ತ್ರ/ ಗಣಿತ(basic) |
ಮಾ.19 | ಅರ್ಥಶಾಸ್ತ್ರ / ಭೂಗರ್ಭಶಾಸ್ತ್ರ |
ಮಾ.20 | ಗಣಿತ / ಭೂಗೋಳ ಶಾಸ್ತ್ರ |
ಮಾ.21 | ಸಮಾಜಶಾಸ್ತ್ರ/ Statistics |
ಮಾ.22 | ಭೌತಶಾಸ್ತ್ರ / ಶಾಸ್ತ್ರೀಯ ಸಂಗೀತ/ಹಿಂದೂಸ್ತಾನಿ ಸಂಗೀತ/ಮನೋವಿಜ್ಞಾನ |
ಮಾ.24 | ಎಲೆಕ್ಟ್ರಾನಿಕ್ಸ್ / ಕಂಪ್ಯೂಟಕ್ ವಿಜ್ಞಾನ |
ಮಾ.26 | ಇಂಗ್ಲೀಷ್ |
ಮಾ.28 | ರಸಾಯನಶಾಸ್ತ್ರ / ಐಚ್ಛಿಕ ಕನ್ನಡ |
ಮಾ.29 | ಕನ್ನಡ / ತಮಿಳು / ಮಲೆಯಾಳಂ / ಮರಾಠಿ /ಅರೇಬಿಕ್ / ಫ್ರೆಂಚ್ |
ಮಾ.30 | ಹಿಂದಿ / ಉರ್ದು / ತೆಲುಗು / ಸಂಸ್ಕೃತ |
ಆಗಬಾರದ್ದು ಆಗಿಬಿಟ್ತು, ಕಾರಂತಜ್ಜನ ಮನೆ ನೆಲಸಮ
ಉಡುಪಿ, ಮಾ.1: "ಕಡಲ ತೀರದ ಭಾರ್ಗವ" ಎಂದು ಪ್ರಸಿದ್ಧರಾದ, ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ಸಾಹಿತಿ ಕೋಟ ಶಿವರಾಮ ಕಾರಂತರ ಕೋಟದಲ್ಲಿರುವ ಮೂಲ ಮನೆ ಬುಡಕ್ಕೆ ಸರ್ಕಾರ ಕೈ ಹಾಕಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಹಿನ್ನೆಲೆಯಲ್ಲಿ ಕಾರಂತರ ಮನೆ ಮುಂಭಾಗ ನೆಲಸಮವಾಗಿದೆ.
ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಗಾಗಿ ಗಿಳಿಯಾರು ಮತ್ತು ಕೋಟತಟ್ಟು ಗ್ರಾಮ ವ್ಯಾಪ್ತಿಯಲ್ಲಿನ ಕಾರಂತರ ಮನೆ ತೆರವುಗೊಳಿಸದಂತೆ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಆಗಬಾರದ್ದು ಆಗಿಬಿಟ್ಟಿದೆ. ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿಗೆ ಕಾರಂತಜ್ಜನ ಮೂಲಮನೆ ಬಲಿಯಾಗಿದೆ. ಕಾರಂತರ ಮನೆ ಸ್ಮಾರಕವಾಗಿ ಉಳಿಸಬೇಕೆಂದು ಸಾಹಿತ್ಯ ವಲಯ ಇಟ್ಟಿದ್ದ ಬಹುದಿನಗಳ ಬೇಡಿಕೆ ಸರ್ಕಾರದ ಕಿವಿಗೆ ಬಿದ್ದಿಲ್ಲ.
ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಎಂಟು ಮಂದಿ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತ ಅವರ ಮೂಲ ಮನೆ 'ಸುಹಾಸ್' ಈಗ ಕಾಲಗರ್ಭಕ್ಕೆ ಸೇರಿದೆ. ಕಾರಂತರ ಪುತ್ತೂರಿನ ಮನೆಯಾದ 'ಹರ್ಷ' ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ.
ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯವಾಗಿದೆ.
ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿಗಾಗಿ ಗಿಳಿಯಾರು ಮತ್ತು ಕೋಟತಟ್ಟು ಗ್ರಾಮ ವ್ಯಾಪ್ತಿಯಲ್ಲಿನ ಕಾರಂತರ ಮನೆ ತೆರವುಗೊಳಿಸದಂತೆ ಸಾಹಿತ್ಯಾಸಕ್ತರು, ಕನ್ನಡಪರ ಸಂಘಟನೆಗಳು ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಆಗಬಾರದ್ದು ಆಗಿಬಿಟ್ಟಿದೆ. ನಡುವೆಯೂ ಚತುಷ್ಪಥ ರಸ್ತೆ ಕಾಮಗಾರಿಗೆ ಕಾರಂತಜ್ಜನ ಮೂಲಮನೆ ಬಲಿಯಾಗಿದೆ. ಕಾರಂತರ ಮನೆ ಸ್ಮಾರಕವಾಗಿ ಉಳಿಸಬೇಕೆಂದು ಸಾಹಿತ್ಯ ವಲಯ ಇಟ್ಟಿದ್ದ ಬಹುದಿನಗಳ ಬೇಡಿಕೆ ಸರ್ಕಾರದ ಕಿವಿಗೆ ಬಿದ್ದಿಲ್ಲ.
ಜ್ಞಾನಪೀಠ ಪ್ರಶಸ್ತಿ ಗಳಿಸಿರುವ ಎಂಟು ಮಂದಿ ಕನ್ನಡ ಸಾಹಿತಿಗಳಲ್ಲಿ ಒಬ್ಬರಾದ ಶಿವರಾಮ ಕಾರಂತ ಅವರ ಮೂಲ ಮನೆ 'ಸುಹಾಸ್' ಈಗ ಕಾಲಗರ್ಭಕ್ಕೆ ಸೇರಿದೆ. ಕಾರಂತರ ಪುತ್ತೂರಿನ ಮನೆಯಾದ 'ಹರ್ಷ' ವನ್ನು ಈಗಾಗಲೇ ಸ್ಮಾರಕವನ್ನಾಗಿ ಮಾಡಲಾಗಿದೆ.
ಆದರೆ ಕಾರಂತರ ಕೋಟದ ಮೂಲ ಮನೆಯಲ್ಲಿರುವ ಗ್ರಂಥಾಲಯ, ಅವರ ನೆನಪು ಸದಾ ಉಳಿಯಬೇಕಾದರೆ ಮತ್ತು ಮುಂದಿನ ಪೀಳಿಗೆಗೆ ಕಾರಂತರ ಕುರಿತು ತಿಳಿಯಬೇಕಾದರೆ ಈ ಮನೆ ಉಳಿಸುವುದು ಅನಿವಾರ್ಯವಾಗಿದೆ ಎಂಬುದು ಕಾರಂತ ಅಭಿಮಾನಿಗಳ ಅಭಿಪ್ರಾಯವಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)