ಪುಟಗಳು

ಸರಕಾರಿ ಇಲಾಖೆಗಳಲ್ಲಿ 1.42 ಲಕ್ಷ ಕೆಲಸ ಖಾಲಿ ಇದೆ

ಬೆಂಗಳೂರು, ಜ.11: ರಾಜ್ಯ ಸರಕಾರದ ನಾನಾ ಇಲಾಖೆಗಳಲ್ಲಿ ಒಟ್ಟು 1.42 ಲಕ್ಷ ಹುದ್ದೆಗಳು ಖಾಲಿಯಿವೆ. ಇದು ಹೊಸದಾಗಿ ಸೃಷ್ಟಿಯಾದ ಹುದ್ದೆಗಳಲ್ಲ. ಈಗಾಗಲೇ ಸರಕಾರದಿಂದ ಅಧಿಕೃತವಾಗಿ ಮಂಜೂರಾಗಿ, ಖಾಲಿಗೊಂಡಿರುವ ಹುದ್ದೆಗಳು. ಆದರೆ ಈ ಪಾಟಿ ಲಕ್ಷಾಂತರ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಬೇಕಾದ ಸರಕಾರ ಕಣ್ ಮುಚ್ಚಿಕೊಂಡು ಕುಳಿತಿದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಭೈರಪ್ಪ ಗುಡುಗಿದ್ದಾರೆ.

ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾದ ಕಾಲದಿಂದ ಹೊಸ ನೇಮಕವನ್ನು ಸರಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ನಂತರ ಬಂದ ಸರಕಾರಗಳೂ ಹೊ ಸ ನೇಮಕದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಅತಿ ಹೆಚ್ಚು ಸಂಖ್ಯೆಯ ಸಿಬ್ಬಂದಿ ಹೊಂದಿರುವ ಶಿಕ್ಷಣ ಇಲಾಖೆಯಲ್ಲೇ ಗರಿಷ್ಠ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿಯಿವೆ. ಈ ಇಲಾಖೆಯಲ್ಲಿ ವಿವಿಧ ಶ್ರೇಣಿಯ 24,518 ಹುದ್ದೆಗಳು ಖಾಲಿಬಿದ್ದಿವೆ. ಇಒದು ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದವರೆಗೂ ಅನ್ವಯವಾಗುತ್ತದೆ.

ಇನ್ನು, ಸೇವಾ ಕ್ಷೇತ್ರ ಎನಿಸಿರುವ ಆರೋಗ್ಯ, ಪೊಲೀಸ್ ಇಲಾಖೆಗಳಲ್ಲಿ ಹತ್ತಿಪ್ಪತ್ತು ಸಾವಿರ ಹುದ್ದೆಗಳು ಖಾಲಿಯಿವೆ. ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೂ ಇಲ್ಲ. ಶುಶ್ರೂಷಕರೂ ಇಲ್ಲ. ಕಂದಾಯ ಇಲಾಖೆಯಲ್ಲಿ ಸರ್ವೇಯರುಗಳು ಇಲ್ಲ. ಗ್ರಾನಮ ಲೆಕ್ಕಿಗರಿಲ್ಲ. ಪಶು ಆಸ್ಪತ್ರೆಗಳಲ್ಲಿ ವೈದ್ಯರಿಲ್ಲ. ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ನಿರ್ದೇಶಕರು, ಕೃಷಿ ಸಹಾಯಕರು ಇಲ್ಲ.

ಗಮನಾರ್ಹವೆಂದರೆ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡದಲ್ಲಿರುವ ಸಚಿವಾಲಯಗಳಲ್ಲಿ 504 ಮತ್ತು ರಾಜಭವನದಲ್ಲಿ 29 ಮಂಜೂರಾದ ಹುದ್ದೆಗಳು ಖಾಲಿ ಇಲ್ಲ. ಸಮಾಜ ಕಲ್ಯಾಣ ಿಲಾಖೆಯಲ್ಲಿ 10,546 ಮತ್ತು ವಿವಿಧ ನ್ಯಾಯಾಲಯಗಳಲ್ಲಿ 7516 ಹುದ್ದೆಗಳು ಭರ್ತಿಯಾಗಬೇಕಿವೆ.