ಬೆಂಗಳೂರು: 'ಈಗಿನ ಮಕ್ಕಳು ವಯಸ್ಕರ ಚಿತ್ರಗಳನ್ನು ನೋಡುತ್ತಾ ತಮ್ಮ ಅಮೂಲ್ಯ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳ ಬಾಲ್ಯವನ್ನು ಉಳಿಸಲು ಮಕ್ಕಳು ಮಕ್ಕಳ ಚಿತ್ರಗಳನ್ನೇ ನೊಡುವಂತೆ ಉತ್ತೇಜಿಸಬೇಕು. ಆ ಮೂಲಕ ಮಕ್ಕಳ ಸಹಜ ಬೆಳವಣಿಗೆಗೆ ಸಹಕಾರಿಯಾಗಬೇಕು' ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ತಿಳಿಹೇಳಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಸೇವಾ ಸದನದಲ್ಲಿ ಮಂಗಳವಾರ ನಡೆದ 7ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದ ಎರಡನೇ ದಿನ ಇರಾನಿ ಮಕ್ಕಳ ಸಿನಿಮಾಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಇರಾನಿ ಚಿತ್ರರಂಗದಲ್ಲಿ ಗಂಭೀರವಾದ ಉತ್ತಮ ಚಿತ್ರಗಳು ತಯಾರಾಗುತ್ತಿರುವಂತೆಯೇ, ಅತ್ಯುತ್ತಮ ಮಕ್ಕಳ ಚಿತ್ರಗಳೂ ನಿರ್ಮಾಣವಾಗುತ್ತಿವೆ. ಆದರೆ ಕನ್ನಡದಲ್ಲಿ ಅದು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆಯಲ್ಲೂ ಮಕ್ಕಳ ಚಿತ್ರಗಳ ನಿರ್ಮಾಣಕ್ಕೆ ಚಿತ್ರರಂಗ ಮನಸ್ಸು ಮಾಡಬೇಕು' ಎಂದು ಅವರು ಆಶಿಸಿದರು.
ಮಕ್ಕಳು ಅವಸರದ ಬೆಳವಣಿಗೆಗೆ ಒಡ್ಡಿಕೊಳ್ಳುವಂತಹ ಇಂದಿನ ಪರಿಸ್ಥಿತಿಯಲ್ಲಿ ಸೂಕ್ಷ್ಮ ನೋಟಗಳ ಇರಾನಿ ಮಕ್ಕಳ ಚಿತ್ರಗಳನ್ನು ಪ್ರದರ್ಶಿಸುತ್ತಿರುವ ಕಾರ್ಯ ಉತ್ತಮವಾದದ್ದು` ಎಂದರು.
ಚಿತ್ರನಟಿ ಭಾವನಾ ಮಾತನಾಡಿ, 'ಕನ್ನಡವೂ ಸೇರಿದಂತೆ ಎಲ್ಲಾ ಕಿರುತೆರೆ ವಾಹಿನಿಗಳಲ್ಲೂ ಇಂದು 16 ವರ್ಷ ಮೇಲ್ಪಟ್ಟವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಮಕ್ಕಳಿಗೆ ಜ್ಞಾನ, ಶಿಕ್ಷಣ, ಸಹಜ ಮನೋರಂಜನೆ ನೀಡಲು ವಾಹಿನಿಗಳಿಗೆ ಕಾಳಜಿ ಇಲ್ಲ. ಹೀಗಾಗಿ ಪುಟ್ಟ ಮಕ್ಕಳೂ ಹಿರಿಯರ ವರ್ತನೆಗಳನ್ನು ಒತ್ತಾಯ ಪೂರ್ವಕವಾಗಿ ಅನುಕರಿಸುವ ಮೂಲಕ ತಮ್ಮ ಮುಗ್ಧ ಬಾಲ್ಯದ ಬದುಕನ್ನು ಕಳೆದುಕೊಳ್ಳುತ್ತಿದ್ದಾರೆ' ಎಂದು ವಿಷಾದಿಸಿದರು.